ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ರಾಜ್ಯದಲ್ಲಿ 2018 ರಿಂದ ಇದುವರೆಗೆ ಒಟ್ಟು 63 ಹೊಸ ತಾಲೂಕುಗಳನ್ನು ರಚಿಸಲಾಗಿದೆ. ಈ ಪೈಕಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ತಾಳಿಕೋಟಿ, ಚಡಚಣ, ಕೊಲ್ಹಾರ, ನಿಡಗುಂದಿ, ಬಬಲೇಶ್ವರ, ತಿಕೋಟಾ ಹಾಗೂ ಆಲಮೇಲ ತಾಲೂಕುಗಳಾಗಿವೆ. ಆದರೆ, ಹೊಸ ಹೋಬಳಿ ರಚನೆ ಆಗಿಯೇ ಇಲ್ಲ. ಇದರಿಂದಾಗಿ ಕಂದಾಯ ಸಹಿತ ಪ್ರತಿ ಸರ್ಕಾರಿ ಸೇವೆ, ಕೆಲಸಗಳಿಗೂ ದೂರದಲ್ಲಿರುವ ತಾಲೂಕು ಕಚೇರಿಗಳಿಗೇ ಎಡತಾಕಬೇಕಾದ ಸ್ಥಿತಿ ಇದೆ.
ದೇವರಹಿಪ್ಪರಗಿ ಕ್ಷೇತ್ರ ವ್ಯಾಪ್ತಿಯಲ್ಲಿ ತಾಳಿಕೋಟಿ, ನಿಡಗುಂದಿ ಹಾಗೂ ಸಿಂದಗಿ ತಾಲೂಕಿನ ಹಲವು ಗ್ರಾಮಗಳು ಸೇರಿ ದೇವರಹಿಪ್ಪರಗಿ ತಾಲೂಕಾಗಿದೆ. ಬಹು ವಿಸ್ತಾರವಾಗಿರುವ ಈ ಕ್ಷೇತ್ರದ ಒಂದು ತುದಿಯಿಂದ ಮತ್ತೊಂದು ತುದಿಗೆ ಸುಮಾರು 150 ಕಿಮೀ ಅಂತರವಿದೆ. ನೂತನ ತಾಲೂಕು ರಚನೆ ನಂತರ ಹಲವು ಕಚೇರಿಗಳು ದೇವರಹಿಪ್ಪರಗಿ ಪಟ್ಟಣಕ್ಕೆ ಬರಬೇಕಾಗಿದೆ. ಪಟ್ಟಣವು ಹೋಬಳಿಯಿಂದ ನೂತನ ತಾಲೂಕು ಆಗಿದೆ. ಆದರೆ, ಕಚೇರಿಗಳಿಲ್ಲದೇ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಆದಷ್ಟು ಬೇಗ ರಾಜ್ಯ ಸರ್ಕಾರ ನೂತನ ತಾಲೂಕುಗಳಿಗೆ ಕಚೇರಿಗಳನ್ನು ಒದಗಿಸಿ ಹಾಗೂ ತಾಲೂಕಿನಲ್ಲಿ ಹೋಬಳಿಗಳನ್ನು ಸೃಷ್ಟಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ. ಹೊಸ ತಾಲೂಕುಗಳನ್ನು ರಚಿಸಿರುವ ಸರ್ಕಾರಗಳು ಆಡಳಿತ ವ್ಯವಸ್ಥೆಯ ಬೆನ್ನೆಲುಬಾದ ಹೋಬಳಿಗಳನ್ನು ರಚಿಸದ ಪರಿಣಾಮ ವಿವಿಧ ಸೇವೆಗಳಿಗಾಗಿ ದೂರದ ಕಚೇರಿಗೆ ಅಲೆದಾಟಕ್ಕೆ ಮುಕ್ತಿ ಸಿಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.ಹೋಬಳಿಯೇ ತಾಲೂಕಾದ ದೇವರಹಿಪ್ಪರಗಿ:
ಹೋಬಳಿಗಾಗಿ ಹೆಚ್ಚಿದ ಒತ್ತಾಯ:
----------------------------------------
ಸರ್ವ ಮುಖಂಡರ ಒತ್ತಾಯ
----------------------------------------
-ಹೋಬಳಿಯಲ್ಲಿ ನಾಡ ಕಚೇರಿ ಇರುತ್ತದೆ.
-ಕಂದಾಯ ಇಲಾಖೆ ಸಂಬಂಧಿ ಬಹುತೇಕ ಕೆಲಸಗಳು ಇಲ್ಲಿ ಲಭ್ಯ.
-ಪಿಂಚಣಿ ಸಹಿತ ವಿವಿಧ ಸೇವೆಗಳನ್ನು ಪಡೆಯಬಹುದು.-ಪ್ರತಿಯೊಂದಕ್ಕೂ ತಾಲೂಕು ಕಚೇರಿಗೆ ಅಲೆದಾಡುವ ಪ್ರಮೇಯ ಇರುವುದಿಲ್ಲ.
-ಸರ್ಕಾರದಿಂದ ಹೋಬಳಿ ಮಟ್ಟದ ಅನುದಾನ ಹಂಚಿಕೆ ಸಾಧ್ಯ.-ಹೋಬಳಿ ಮಟ್ಟದ ಕ್ರೀಡಾಕೂಟ, ಯುವಜನ ಮೇಳ ಇತ್ಯಾದಿ ಆಯೋಜನೆ ಸಾಧ್ಯ.
-ಹೋಬಳಿ ಮಟ್ಟದ ಆಡಳಿತ ಸುಧಾರಣೆಗೆ ವಿಶೇಷ ಸಭೆ ಆಯೋಜನೆ.-ಪಶು ವೈದ್ಯಕೀಯ ಆಸ್ಪತ್ರೆ, ಹೆಸ್ಕಾಂ ಶಾಖಾ ಅಧಿಕಾರಿ, ಕೃಷಿ ಅಧಿಕಾರಿ ಸಹಿತ ವಿವಿಧ ಆಡಳಿತ ಕೇಂದ್ರಗಳು ಲಭ್ಯ.