ಕಂಪ್ಲಿ: ಪಟ್ಟಣದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಈಚೆಗೆ ದೇವಾಂಗ ಸಮುದಾಯದ ವತಿಯಿಂದ ಕುಲಗುರು ಶ್ರೀ ದೇವಲ ಮಹರ್ಷಿ ಜಯಂತ್ಯುತ್ಸವ ಜರುಗಿತು.
ಕಾರ್ಯಕ್ರಮದ ಅಂಗವಾಗಿ ದೇವಲ ಮಹರ್ಷಿಯ ಭಾವಚಿತ್ರಕ್ಕೆ ವಿಶೇಷ ಪೂಜೆ, ಚೌಡೇಶ್ವರಿ ಅಮ್ಮನಿಗೆ ರುದ್ರಾಭಿಷೇಕ, ನವಗ್ರಹಗಳಿಗೆ ಅಭಿಷೇಕ, ಸಪ್ತರ್ಷಿ ಪ್ರತಿಮೆ ಪ್ರತಿಷ್ಠಾಪನೆ ಪೂಜಾ ಹಾಗೂ ವಸ್ತ್ರದಾನ ಕಾರ್ಯಕ್ರಮಗಳು ನೆರವೇರಿಸಲ್ಪಟ್ಟವು.
ಈ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗಾಗಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಂಗಿ ದೊಡ್ಡ ಮಂಜುನಾಥ ಅವರನ್ನು ದೇವಾಂಗ ಸಮಾಜದ ವತಿಯಿಂದ ಗೌರವಿಸಲಾಯಿತು.ಅರ್ಚಕರಾದ ಮಿಟ್ಟಿ ಶಂಕರ, ಮಾಗನೂರು ರಾಜೇಶವರ್ಮ, ದೂಪದ ಪ್ರಶಾಂತ, ಗದ್ಗಿ ವಿರೂಪಾಕ್ಷಿ, ತುಳಸಿ ರಾಮಚಂದ್ರ, ದೂಪದ ಸುಭಾಶ್ಚಂದ್ರ, ಒನಕಿ ಶಂಕರ್, ಕರಡಕಲ್ ವಿರೂಪಣ್ಣ, ಒನಕಿ ವೆಂಕಟೇಶ, ಇಂಡಿ ಚಂದ್ರಣ್ಣ, ಎಸ್. ಸುಬ್ಬಣ್ಣ, ಪೋಡಿ ನಾರಾಯಣಪ್ಪ, ಎಸ್. ರವಿಪ್ರಕಾಶ ಮತ್ತು ಇತರರು ಭಾಗವಹಿಸಿದ್ದರು. ತಾಲೂಕಿನ ನಂ. 10 ಮುದ್ದಾಪುರ ಗ್ರಾಮದಲ್ಲಿಯೂ ದೇವಲ ಮಹರ್ಷಿ ಜಯಂತ್ಯುತ್ಸವ ಅದ್ಧೂರಿಯಾಗಿ ಜರುಗಿತು. ಭಾವಚಿತ್ರ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ನಂತರ ಶ್ರೀ ವಿನಾಯಕ ಹಾಗೂ ಶ್ರೀರಾಮಲಿಂಗ ಚೌಡೇಶ್ವರಿ ದೇವರಿಗೆ ಅಭಿಷೇಕ, ವಸ್ತ್ರದಾನ, ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ನೆರವೇರಿಸಲ್ಪಟ್ಟವು.ಸಮಾಜದ ಅಧ್ಯಕ್ಷ ಕೊಂಡಮಿ ಕುಮಾರಸ್ವಾಮಿ, ಶ್ರೀನಿವಾಸಪ್ಪ ಬುದ್ದಿ, ಗಂಜಿ ಮಂಜುನಾಥ, ಕರ್ಜಿಗಿ ಮಲ್ಲಿಕಾರ್ಜುನ, ಅರ್ಚಕ ಮಂಜುನಾಥ ಕೊಂಡಮಿ, ವಿಠೋಬಣ್ಣ ವಠಾರ, ಕನಪ ಬಸವರಾಜ, ಪಿನ್ನಾಪತಿ ಎರಿಸ್ವಾಮಿ, ಪೂಜಾರಿ ಹನುಮಂತಪ್ಪ, ಬೆಟಗೇರಿ ಮರಿಯಪ್ಪ ಸೇರಿದಂತೆ ಅನೇಕರಿದ್ದರು.