ಕನ್ನಡಪ್ರಭ ವಾರ್ತೆ ತರೀಕೆರೆ
ಶ್ರೀಗಾಯತ್ರಿ ಪೀಠ ಮಹಾಸಂಸ್ಥಾನ ಟ್ರಸ್ಟ್ ಹಂಪಿ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘ ಬೆಂಗಳೂರು ನೇತೃತ್ವದಲ್ಲಿ ದೇವಾಂಗ ರತ್ನ ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಿಂದ ಒಬ್ಬರಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇವಾಂಗ ಸಮಾಜದ 25 ಸಾಧಕರನ್ನು ಗುರುತಿಸಿ ಸತ್ಕರಿಸಿ ಪುರಸ್ಕಾರದೊಂದಿಗೆ ಪ್ರಶಸ್ತಿ ನೀಡಲಾಯಿತು.ಬೆಂಗಳೂರಿನ ಕೆಂಪಲಿಂಗನಹಳ್ಳಿ ಶ್ರೀ ಗಾಯತ್ರಿಪೀಠ ಶಾಖಾ ಮಠದಲ್ಲಿ ನಡೆದ ಸಮಾರಂಭದಲ್ಲಿ ದೇವಾಂಗ ಸಮಾಜದ ಗಾಯತ್ರಿ ಪೀಠದ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ, ರಾಷ್ಟ್ರೀಯ ದೇವಾಂಗ ಸಮಾಜದ ಅಧ್ಯಕ್ಷ ಅರುಣ್ ವಾರಡೆ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಹಂಪಿ ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನ ಟ್ರಸ್ಟ್ ಅಧ್ಯಕ್ಷ ಪಿ.ಆರ್. ಗಿರಿಯಪ್ಪ ಮತ್ತು ಬೆಂಗಳೂರು ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಉಮಶಂಕರ್ ಸೇರಿದಂತೆ ಇತರ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಲಾಯಿತು.
ಚಿಕ್ಕಮಗಳೂರು ಜಿಲ್ಲೆಯ ಕುರುಬರಬೂದಿಹಾಳ್ ಗ್ರಾಮ ಸಮೀಪದ ಕೊಟ್ಟೆಗೆನಹಳ್ಳಿಯ ಕೆ.ಎಂ.ಮಹೇಂದ್ರ ಅವರು ಪ್ರಸ್ತುತ ಕಡೂರಿನಲ್ಲಿ ಪೋಲಿಸ್ ಇಲಾಖೆಯ ಸೇವೆಯಲ್ಲಿದ್ದು ಇವರು ಕನ್ನಡ ಮತ್ತು ಇತರ ಭಾಷೆಗಳಲ್ಲಿ ಅನೇಕ ನಾಟಕಗಳನ್ನು ನಿರ್ದೇಶನ ಹಾಗೂ ರಚನೆಯೊಂದಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ರಾಜ್ಯ ಅಂತಾರಾಜ್ಯ ಮಟ್ಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳಿಸಲು ಮಹತ್ತರ ಪಾತ್ರ ವಹಿಸಿದ್ದಾರೆ.ಹಲವು ಪ್ರಶಸ್ತಿಗಳಿಗೆ ಭಾಜನರಾದ ಇವರ ನಾಟಕ ರಂಗದ ಕಲಾ ಸೇವೆ ಗುರುತಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬ ಹಾರೈಕೆಯೊಂದಿಗೆ "ದೇವಾಂಗ ರತ್ನ ರಾಜ್ಯ ಪ್ರಶಸ್ತಿ " ಯನ್ನು ಕೆ ಎಂ.ಮಹೇಂದ್ರ ಅವರಿಗೆ ಗುರುತಿಸಿ ಪುರಸ್ಕಾರ ನೀಡಿರುವುದು ದೇವಾಂಗ ಸಮಾಜ ಬಂಧುಗಳಿಗೆ ಹರ್ಷದಾಯಕವಾಗಿದೆ ಎಂದು ತರೀಕೆರೆ ಮನಸು ಪ್ರತಿಷ್ಠಾನ ಅಧ್ಯಕ್ಷ, ದೇವಾಂಗ ಸಮಾಜದ ಮುಖಂಡ ಟಿ.ಆರ್.ಶ್ರೀಧರ್ ತಿಳಿಸಿದ್ದಾರೆ. ಇವರ ಕಲಾಸೇವೆ ಶ್ರಮ ಮತ್ತು ಕಾರ್ಯದಕ್ಷತೆ ಯುವ ಪೀಳಿಗೆಗೆ ಮಾದರಿಯಾಗಲಿ ಹಾಗೂ ಇನ್ನೂ ಹೆಚ್ಚಿನ ಕಲಾ ಸೇವೆ ನೀಡಲು ಜಗನ್ಮಾತೆ ಬನಶಂಕರಿದೇವಿ, ಕುಲಗುರು ದೇವಲಮಹರ್ಷಿ, ಮತ್ತು ಅದ್ಯವಚನಕಾರ ದೇವರ ದಾಸಿಮಯ್ಯರ ಆಶೀರ್ವಾದವು ಮಹೇಂದ್ರ ಅವರಿಗೆ ದೊರೆಯಲಿ ಎಂದು ಹಾರೈಸಿ ಚಿಕ್ಕಮಗಳೂರು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ತ್ಯಾಗರಾಜ್, ಗೌರವಾಧ್ಯಕ್ಷ ಅರೇಕಲ್ ಪ್ರಕಾಶ್, ಚಿಕ್ಕಮಗಳೂರು ತಾ.ದೇವಾಂಗ ಸಂಘದ ಅಧ್ಯಕ್ಷರಾದ ಭಗವತಿ ಹರೀಶ್ನ ನಗರಸಭೆಯ ಮಾಜಿ ಉಪಾಧ್ಯಕ್ಷ ರವಿ, ಕೆ.ಬಿ.ಹಾಳ್ ಸತ್ಯಮೂರ್ತಿ, ಸಿಂದಿಗೆರೆ ದೀನೆಶ್, ಚಿಕ್ಕಪಟ್ಟಣಗೆರೆ ನಾಗರಾಜು, ಬೀರೂರು ಸುರೇಶ್, ತೀಪ್ಪೇಶ್,ಕಡೂರು ಸುಬ್ಬಣ್ಣ, ಬೆಂಕಿರಂಗನಾಥ್, ಹರೀಶ್, ತರೀಕೆರೆಯ ಟಿ.ಆರ್. ಶ್ರೀಧರ್, ಟಿ.ವಿ ಶ್ರೀನಿವಾಸ್ ಮತ್ತು ಲಕ್ಕವಳ್ಳಿಯ ರಮೇಶ್ ಚಿಕ್ಕಮಗಳೂರು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ದೇವಾಂಗ ರತ್ನ ಪುರಸ್ಕೃತ ಕೆ.ಎಂ.ಮಹೇಂದ್ರ ಅವರಿಗೆ ಅಭಿನಂದಿಸಿದ್ದಾರೆ.