ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿಕೆ
1972ರಲ್ಲಿ ಕಾಂಗ್ರೆಸ್ ಎರಡು ಭಾಗಗಳಾಗಿ ಬೇರ್ಪಟ್ಟ ವೇಳೆ ರಾಚಯ್ಯ ಅವರು ಅರಸು ಅವರ ಜೊತೆಯೆ ಉಳಿದರು. ನಂತರ ಬದಲಾದ ಸನ್ನಿವೇಶದಲ್ಲಿ ಅವರ ಆಹ್ವಾನದ ಮೇರೆಗೆ ಪುನಃ ಕಾಂಗ್ರೆಸ್ ಸೇರ್ಪಡೆಯಾದರು. ರಾಚಯ್ಯ ಅವರು ಅವರ ರಾಜಕೀಯ ಜೀವನದಲ್ಲಿ ಅರಸು ಅವರ ಜೊತೆ ಉತ್ತಮ ಭಾಂದವ್ಯ ಹೊಂದುವ ಮೂಲಕ ಉತ್ತಮ ಒಡನಾಡಿಗಳಾಗಿ ಗುರುತಿಸಿಕೊಂಡಿದ್ದರು ಎಂದರು.ಈ ವೇಳೆ ಮುಖ್ಯಭಾಷಣಕಾರರಾಗಿ ಆಗಮಿಸಿದ್ದ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಮಾತನಾಡಿ, ಅರಸು ಅವರ ಸಾಮಾಜಿಕ ಕ್ರಾಂತಿಯನ್ನು ನಾವು ಸ್ಮರಿಸಬೇಕಿದೆ. ಅದೇ ರೀತಿಯಲ್ಲಿ ಅವರ ಜಯಂತಿ ಆಚರಣೆ ಸದುದ್ದೇಶವನ್ನು ಅರ್ಥೈಸಿಕೊಳ್ಳಬೇಕು. ಇಂದಿಗೂ ಸಾವಿರಾರು ಜನರಲ್ಲಿ ಅವರ ಜಯಂತಿ ಆಚರಣೆಯ ಉದ್ದೇಶ ತಲುಪಿಲ್ಲ. ಡಾ. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನವಾಗಿ ಮೀಸಲಾತಿ ಕಲ್ಪಿಸಿದರು. ಅರಸು ಹಿಂದುಳಿದ ವರ್ಗಕ್ಕೆ ಶಕ್ತಿ ನೀಡುವಲ್ಲಿ ಶ್ರಮಿಸಿದರು ಎಂದರು.ಈ ಸಂದರ್ಭದಲ್ಲಿ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಸ್.ಜಯಣ್ಣ, ಉಪವಿಭಾಗಾಧಿಕಾರಿ ಬಿ.ಆರ್ ಮಹೇಶ್, ಡಿವೈಎಸ್ಪಿ ಎಂ.ಧರ್ಮೇಂದ್ರ, ತಹಸೀಲ್ದಾರ್ ಮಂಜುಳಾ, ತಾಪಂ ಪ್ರಭಾರಿ ಇಒ ಎಂ.ಶಿವಪ್ರಕಾಶ್, ಪೌರಾಯುಕ್ತ ರಮೇಶ್, ಬಿಇಒ ಎಂ.ಮಂಜುಳಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವರಾಜು ಇನ್ನಿತರರಿದ್ದರು.
21ಕೆಜಿಎಲ್1ಕೊಳ್ಳೇಗಾಲದ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ದೇವರಾಜ ಅರಸು ಜಯಂತಿಯನ್ನು ಆಚರಿಸಿದರು.