ದೇವಟ್‌ಪರಂಬ್ ಕೊಡವ ನರಮೇಧ: ಸಿಎನ್‌ಸಿ ಪುಷ್ಪನಮನ

KannadaprabhaNewsNetwork |  
Published : Feb 04, 2026, 03:00 AM IST
ಚಿತ್ರ :  1ಎಂಡಿಕೆ4 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಹತ್ಯಾಕಾಂಡದ ಸ್ಮರಣಾರ್ಥ ದಿನವನ್ನು ಆಚರಿಸಿತು.  | Kannada Prabha

ಸಾರಾಂಶ

1785ರ ಡಿ.12ರಂದು ದೇವಟ್‌ಪರಂಬ್ ಕೊಡವ ನರಮೇಧದ ದುರಂತದಲ್ಲಿ ಬಲಿಯಾದವರಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಪುಷ್ಪ ನಮನ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

1785ರ ಡಿ.12ರಂದು ದೇವಟ್‌ಪರಂಬ್ ಕೊಡವ ನರಮೇಧದ ದುರಂತದಲ್ಲಿ ಬಲಿಯಾದವರಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಪುಷ್ಪ ನಮನ ಸಲ್ಲಿಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಮಂದಪಂಡ ಮನೋಜ್ ಮಂದಣ್ಣ ಹಾಗೂ ಮಂದಪಂಡ ಸೂರಜ್ ಅವರು ಹತ್ಯಾಕಾಂಡದಲ್ಲಿ ಕಗ್ಗೊಲೆಯಾದ ನತದೃಷ್ಟ ಹಿರಿಯರಿಗೆ ಗೌರವ ನಮನ ಸಲ್ಲಿಸಿದರು.

ಆದಿಮಸಂಜಾತ ಏಕ-ಜನಾಂಗೀಯ ಅನಿಮಿಸ್ಟಿಕ್ ಕೊಡವರಿಗೆ ಸ್ವ-ಆಡಳಿತ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ನೀಡಬೇಕು. ಆದಿಮಸಂಜಾತ ಜನರಾಗಿ ಗುರುತಿಸಲು ವಿಶ್ವಸಂಸ್ಥೆಯ ಮಾನ್ಯತೆ ಕಲ್ಪಿಸಬೇಕು. ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ಒದಗಿಸಬೇಕು. ಆಂತರಿಕ ರಾಜಕೀಯ ಸ್ವ-ನಿರ್ಣಯ ಮತ್ತು ಸ್ವ-ಆಡಳಿತ ನೀಡಬೇಕು, ಭೂಮಿ, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಮಾಡಬೇಕು. ಶೋಷಣೆಯಿಂದ ಮುಕ್ತಗೊಳಿಸಬೇಕು, ದೇವಟ್‌ಪರಂಬ್ ಹತ್ಯಾಕಾಂಡ ಮತ್ತು ಅರಮನೆ ಪಿತೂರಿಯಲ್ಲಿ ಕೊಡವ ರಾಜಕೀಯ ಹತ್ಯೆಗಳನ್ನು ಅಂತಾರಾಷ್ಟ್ರೀಯ ಹತ್ಯಾಕಾಂಡದ ಸ್ಮರಣಾರ್ಥ ಪಟ್ಟಿಯಲ್ಲಿ ಸೇರಿಸಲು ಮತ್ತು ನಾಲ್ಕಾಡ್ ಅರಮನೆ, ಮಡಿಕೇರಿ ಕೋಟೆ ಮತ್ತು ದೇವಟ್‌ಪರಂಬ್‌ನಲ್ಲಿ ಸ್ಮಾರಕಗಳನ್ನು ಸ್ಥಾಪಿಸಬೇಕು ಎಂದು ಎನ್.ಯು. ನಾಚಪ್ಪ ಒತ್ತಾಯಿಸಿದರು.ಗುರಿ ಮುಟ್ಟುವಲ್ಲಿಯವರೆಗೆ ಸಿಎನ್‌ಸಿಯ ಶಾಂತಿಯುತ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ