ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಶ್ರೀ ವಾಲ್ಮೀಕಿ ಭವನದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿಯವರು ನಮ್ಮ ಸಂಸ್ಕೃತಿ, ಮಾನವೀಯ ಮೌಲ್ಯಗಳು ಹಾಗೂ ಮೌಲ್ಯಯುತ ಜೀವನಕ್ಕೆ ದಾರಿ ದೀಪವಾಗಿರುವ ರಾಮಾಯಣ ಗ್ರಂಥವನ್ನು ರಚಿಸಿದ್ದಾರೆ ಮತ್ತು ಶ್ರೀ ರಾಮನ ಆದರ್ಶಗಳನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ದಾರ್ಶನಿಕರು ನೀಡಿರುವ ಮಹತ್ವದ ಕಾವ್ಯಗಳ ಸಂದೇಶವನ್ನು ಆರ್ಥ ಮಾಡಿಕೊಂಡು ತತ್ವಗಳನ್ನು ಅನುಸರಿಸುತ್ತಾ, ಸಹಬಾಳ್ವೆಯ ಜೀವನ ನಡೆಸಬೇಕಿದೆ ಎಂದರು.
ಎಸ್‌ಟಿ ವರ್ಗದಲ್ಲಿ ದೊರೆಯುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು. ಶ್ರೇಷ್ಠ ದಾರ್ಶನಿಕರ ಜಯಂತೋತ್ಸವ ಕಾರ್ಯಕ್ರಮಕ್ಕೆ ರಾಜಕೀಯ ಕಾರಣಗಳನ್ನು ಬದಿಗಿಟ್ಟು, ಮಹನೀಯರ ಗೌರವಾರ್ಥ ನಾಯಕ ಜನಾಂಗದ ಪ್ರತಿಯೊಬ್ಬರೂ ಭಾಗವಹಿಸುವುದು ಮುಖ್ಯವಾಗಿದೆ ಎಂದರು. ನಂತರ ಜೆಡಿಎಸ್ ಪಕ್ಷದ ಆಡಳಿತ ಅವಧಿಯಲ್ಲಿ ನಾಯಕ ಜನಾಂಗ ಅಭಿವೃದ್ಧಿಗೆ ಕೈಗೊಂಡ ಹಲವಾರು ಜನಪರ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.ಮುಖ್ಯ ಬಾಷಣಕಾರರಾಗಿ ಆಗಮಿಸಿದ್ದ ಚನ್ನರಾಯಪಟ್ಟಣದ ನವೋದಯ ಕಾಲೇಜಿನ ಹಿರಿಯ ಉಪನ್ಯಾಸಕ ಡಾ. ಹನುಮಂತಪ್ಪ ಆರ್. ಅವರು ಮಾತನಾಡಿ ಮಹರ್ಷಿ ವಾಲ್ಮೀಕಿ, ಭಕ್ತ ಕನಕದಾಸರು, ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ರಾಷ್ಟ್ರಕವಿ ಕುವೆಂಪು ಅವರು ತಳ ಸಮುದಾಯದಿಂದ ಬಂದು ಜಗತ್ತಿಗೆ ಜ್ಞಾನವನ್ನು ಕೊಟ್ಟ ಮಹಾನ್ ಶಿಲ್ಪಿಗಳು ಜತೆಗೆ ದೇಶದ ಅಚರಿಗಳಲ್ಲಿ ಅಚರಿಗಳು ಎಂದು ಬಣ್ಣಿಸಿದರು. ಮಹರ್ಷಿ ವಾಲ್ಮೀಕಿ ಅವರು ಮಹಾ ಮಾನವತಾವಾದಿ, ಒಬ್ಬ ವಿಶ್ವಗುರು, ಅವರು ವಾಲ್ಮೀಕಿ ಆಗಿದ್ದೇ ದೊಡ್ಡ ಇತಿಹಾಸ ಜತೆಗೆ ಮಹಾನ್ ಬೇಟೆಗಾರರು, ದರೋಡೆಕೋರರಲ್ಲ ಕೆಲವು ಪ್ರಭುತ್ವವಾದಿಗಳು ಇವರನ್ನು ಒಂದು ರೀತಿಯಲ್ಲಿ ಕರೆದುಕೊಂಡು ಹೋಗ್ತಾರೆ. ಆದ್ದರಿಂದ ಇದೇ ವೇದಿಕೆಯಲ್ಲಿ ಖಡಾಖಂಡಿತವಾಗಿ ದರೋಡೆಕೋರ ಎಂಬುದನ್ನು ಖಂಡಿಸುತ್ತೇವೆ ಎಂದರು. ವಿಶ್ವದ್ಯಾಂತ ಜೈ ಶ್ರೀರಾಮ ಎಂಬ ಘೋಷಣೆ ಪ್ರಖ್ಯಾತಿ ಪಡೆದಿದೆ. ಆದರೆ ಶ್ರೀ ರಾಮನ ಸೃಷ್ಠಿಕರ್ತ ಮಹರ್ಷಿ ವಾಲ್ಮೀಕಿಯವರ ಬಗ್ಗೆ ಏನೂ ಮಾಡಿಲ್ಲವೆಂದು ಬೇಸರ ವ್ಯಕ್ತಪಡಿಸಿ, ಸುದೀರ್ಘವಾಗಿ ಮಾತನಾಡಿದರು.