ಕನ್ನಡಪ್ರಭ ವಾರ್ತೆ ಯಳಂದೂರು
ಪಟ್ಟಣದ ವಾಲ್ಮೀಕಿ ಭವನದ ಬಳಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಆಡಳಿತ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಾಲ್ಮೀಕಿ ತತ್ವಾದರ್ಶಗಳು ನಿತ್ಯನೂತನವಾಗಬೇಕು. ನಾವೆಲ್ಲರೂ ಒಂದೇ ಎಂಬ ಭಾವ ಮೂಡಬೇಕು. ಅಂಬೇಡ್ಕರ್ ವಿರಚಿತ ಸಂವಿಧಾನದಲ್ಲಿ ನೀಡಲಾಗಿರುವ ಸೌಲಭ್ಯಗಳ ಪರಿಪಾಲನೆಯಾಗಬೇಕು. ನಮ್ಮ ದೇಶವನ್ನು ಅಭಿವೃದ್ಧಿ ರಾಷ್ಟç ಮಾಡುವ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳು ಎಲ್ಲರ ಜಯಂತಿಗಳಲ್ಲಿ ಭಾಗವಹಿಸುವ, ಆಚರಿಸುವ ಪರಿಪಾಠವನ್ನು ಅನುಸರಿಸಬೇಕು. ಆ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು. ಎರಡು ದಿನಗಳ ಕಾಲ ಚಾಮರಾಜನಗರದಲ್ಲಿ ನಡೆದ ವಿಶ್ವ ಬೌದ್ಧ ಸಮ್ಮೇಳದಲ್ಲೂ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆ ಸೇರಿದಂತೆ ಒಟ್ಟು 500 ಗ್ರಾಮಗಳಿಗೆ ಧಮ್ಮ ರಥ ಚಲಿಸಿದ್ದು, ಎಲ್ಲಾ ವರ್ಗಗಳ ಸಹಕಾರವನ್ನೂ ನಾನು ಕೋರಿದ್ದೆ ಈ ಕಾರ್ಯಕ್ರಮದ ಯಶಸ್ಸಿಗೆ ಸಹರಿಸಿದ ಎಲ್ಲರಿಗೂ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಇಂತಹ ವೇದಿಕೆಯಲ್ಲಿ ಪ್ರತಿಭಾನಿತ್ವ ಸಮುದಾಯದ 170 ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ ಎಂದರು.ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಎಚ್.ಎಸ್. ಮಂಜುನಾಥ್ ಮಾತನಾಡಿ, ರಾಮಾಯಣದಿಂದ ನಾವು ಸೋದರತೆ, ಸ್ತ್ರೀ ಶಕ್ತಿ, ತಂದೆ ಮಕ್ಕಳ ಸಂಬಂಧ, ದುಷ್ಟ ಸಂಹಾರದಂತಹ ಜೀವನದ ಮೌಲ್ಯಗಳನ್ನು ಅರಿಯಬಹುದು. ಅಲ್ಲದೆ ಅಂದಿನ ಕಾಲದಲ್ಲೇ ಪ್ರಜಾಪ್ರಭುತ್ವದ ಕಲ್ಪನೆಯನ್ನು ವಾಲ್ಮೀಕಿಯವರು ಕೊಟ್ಟಿದ್ದಾರೆ. ಮಹಾಕಾವ್ಯಗಳು, ವೇದಗಳೂ, ಅಂದಿನ ಆಚರಣೆಗಳ ಪರಂಪರೆಯಿಂದಲೆ ಇಂದಿನ ಕಾನೂನುಗಳು ರೂಪಿತವಾಗಲು ನಮಗೆ ಸ್ಪೂರ್ತಿ ಸಿಕ್ಕಿದೆ. ಉತ್ತಮ ಸಂಸ್ಕಾರವನ್ನು ಎಲ್ಲರೂ ರೂಪಿಸಿಕೊಳ್ಳಬೇಕು ಎಂದರು.
ಇದಕ್ಕೂ ಮುಂಚೆ ವಿವಿಧ ಕಲಾತಂಡಗಳೊಂದಿಗೆ ವಾಲ್ಮೀಕಿ ಭಾವಚಿತ್ರವನ್ನು ರಥದಲ್ಲಿ ಕುಳ್ಳಿರಿಸಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಮಿಮಿಕ್ರಿ ಗೋಪಿರವರು ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮ ಗಮನ ಸೆಳೆಯಿತು. ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.