ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಕುಮಾರ್ । ಎಚ್‌ಡಿಡಿಗೆ ಕೃತಜ್ಞತೆ ಸಲ್ಲಿಸಲು ರೈತರಿಂದ ಅಭಿನಂದನಾ ಸಮಾರಂಭಕನ್ನಡಪ್ರಭ ವಾರ್ತೆ ಅರಸೀಕೆರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಸಭೆಯಲ್ಲಿ ಸಂಸದರಾದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ. ರೇವಣ್ಣ ಪಾಲ್ಗೊಳ್ಳಲಿದ್ದಾರೆ. ನಗರಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಚಿಹ್ನೆಯಾದ ತೆನೆ ಹೊತ್ತ ಮಹಿಳೆ ಚಿನ್ನೆ ಮೇಲೆ 21 ಸದಸ್ಯರು ಗೆದ್ದು ಬಂದಿದ್ದು ಕೆಲವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ಚಿಹ್ನೆ ಪರವಾಗಿ ಕೆಲಸ ಮಾಡಿದ್ದರು. ಅಂಥವರಿಗೆ ಮತ್ತೊಂದು ಅವಕಾಶ ನೀಡುವ ಸಲುವಾಗಿ ಶುಕ್ರವಾರದ ಸಭೆಗೆ ಹಾಜರಾಗಬೇಕೆಂದು ತಿಳಿಸುವ ಪತ್ರವನ್ನು ಕಳಿಸಲಾಗಿದೆ. ಅವರು ಲಭ್ಯವಿಲ್ಲದಿದ್ದರೆ ಬಾಗಿಲಿಗೆ ಅಂಟಿಸಿ ಬರಲಾಗಿದೆ’ ಎಂದು ಹೇಳಿದರು.
ಅರಸೀಕೆರೆ ತಾಲೂಕಿನ ರೈತರು ಹಲವು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಅಭಾವ ಕೊಬ್ಬರಿಗೆ ಬೆಲೆ ಇಲ್ಲದಂತಾಗಿದೆ. ಇಂಥ ಸಂಕಷ್ಟ ಸಮಯದಲ್ಲಿ ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು ಪ್ರಧಾನಿ ಅವರನ್ನು ಭೇಟಿ ಮಾಡಿ ನಾಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಬೇಕೆಂದು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಫಲವಾಗಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಕೇಂದ್ರ ಪ್ರಾರಂಭವಾಗಲಿದೆ. ಇದಕ್ಕಾಗಿ ರೈತರು ದೇವೇಗೌಡರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸಭೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಬೈಪಾಸ್ ರಸ್ತೆಗಾಗಿ ಬೆಂಡೆಕೆರೆ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಸಮಯದಲ್ಲಿ ಶಾಸಕ ಶಿವಲಿಂಗೇಗೌಡ ಅವರು ಒಂದು ನಿರ್ದಿಷ್ಟ ಸಮುದಾಯಕ್ಕೆ ಗುಂಟೆಗೆ 9 ಸಾವಿರ ರು. ನಿಗದಿ ಮಾಡಿದ್ದರು. ರೈತರು ಇದರ ವಿರುದ್ಧ ಪ್ರತಿಭಟಿಸಲು ಮುಂದಾಗಿದ್ದ ಸಮಯದಲ್ಲಿ ಲಾಟಿ ಚಾರ್ಜ್ ಮಾಡಲು 300, 400 ಪೊಲೀಸರು ಆಗಮಿಸಿದ ವೇಳೆ ಎಚ್. ಡಿ. ರೇವಣ್ಣನವರು ಪೊಲೀಸರನ್ನು ವಾಪಸ್ ಕಳಿಸಲು ಸ್ಪಂದಿಸಿದ್ದರು ಎಂದರು.
ಈಶಣ್ಣ ಪಂಚಾಕ್ಷರಿ, ಭೋಜನಾಯ್ಕ, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಪ್ಪ ಉಪಸ್ಥಿತರಿದ್ದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಕುಮಾರ್ ಮಾತನಾಡಿದರು