ಪಠ್ಯದ ಜತೆ ಸಂವಹನ ಕೌಶಲ್ಯ ಬೆಳೆಸಿಕೊಳ್ಳಿ

KannadaprabhaNewsNetwork |  
Published : Mar 15, 2025, 01:05 AM IST
ಪೊಟೋ ಪೈಲ್ : 12ಬಿಕೆಲ್1 | Kannada Prabha

ಸಾರಾಂಶ

ಪುಸ್ತಕದಾಚೆಗೆ ವಿದ್ಯಾರ್ಥಿಗಳು ಒಂದಿಷ್ಟು ಬೇರೆ ಬೇರೆ ಕೌಶಲ್ಯ ಗಳಿಸಿಕೊಳ್ಳಲು ಇಂತಹ ಕಾರ್ಯಕ್ರಮ ಸಂಯೋಜಿಸಲಾಗಿದೆ.

ಭಟ್ಕಳ: ಇಲ್ಲಿನ ಜಾಲಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆಯ ಕೋಶ ಹಾಗೂ ವಾಣಿಜ್ಯ ವಿಭಾಗದಿಂದ ಆಸಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಕಾರ್ಯಕ್ರಮ ಸಂಘಟನಾ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಸಂಘಟಕ, ನಿರೂಪಕ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಕಾಲೇಜು ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪಠ್ಯ ವಿಷಯದ ಜತೆಗೆ ನಿರೂಪಣೆ, ಸಂಘಟನೆ, ನಾಯಕತ್ವ ಗುಣ, ಸಂವಹನ ಕೌಶಲ್ಯ ಮುಂತಾದ ಕೌಶಲ್ಯ ಬೆಳೆಸಿಕೊಳ್ಳಬೇಕಲ್ಲದೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಇದೇ ವೇಳೆ ಆಮಂತ್ರಣ ಪತ್ರಿಕೆ ತಯಾರಿ, ಕಾರ್ಯಕ್ರಮ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಗಮನಿಸಬೇಕಾದ ಅಂಶಗಳ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ವರದಿಗಾರ ಈಶ್ವರ ನಾಯ್ಕ, ಟಿವಿ ವಾಹಿನಿಗಳಿಗೆ ವರದಿ ಮಾಡುವಿಕೆ, ಫೋಟೋ, ಮತ್ತು ವಿಡಿಯೋ ಮಾಡುವಾಗ ಗಮನಿಸಬೇಕಾದ ಅಂಶ ಹಾಗೂ ಯುಟ್ಯೂಬ್ ಚಾನೆಲ್ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾoಶುಪಾಲ ನಾಗೇಶ್ ಶೆಟ್ಟಿ ವಹಿಸಿ ಪುಸ್ತಕದಾಚೆಗೆ ವಿದ್ಯಾರ್ಥಿಗಳು ಒಂದಿಷ್ಟು ಬೇರೆ ಬೇರೆ ಕೌಶಲ್ಯ ಗಳಿಸಿಕೊಳ್ಳಲು ಇಂತಹ ಕಾರ್ಯಕ್ರಮ ಸಂಯೋಜಿಸಲಾಗಿದ್ದು, ಅದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟದ ಭರವಸೆಯ ಕೋಶದ ಸಂಯೋಜಕ ಸುರೇಶ ಮೆಟಗಾರ್, ನೇತ್ರಾವತಿ ನಾಯ್ಕ, ಚಂದ್ರಾವತಿ ಮೊಗೇರ್, ಹರೀಶ್ ಜೋಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿಜೇತ ನಿರೂಪಿಸಿದರೆ ವೀಣಾ ಸ್ವಾಗತಿಸಿದರು, ದಿವ್ಯಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ