ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಗುರಿಯ ಕಡೆಗೆ ಜನರನ್ನು ಕರೆದುಕೊಂಡು ಹೋಗಲು ಒಳ್ಳೆಯ ನಾಯಕರ ಅವಶ್ಯಕತೆ ಇದೆ.
ಕನ್ನಡಪ್ರಭ ವಾರ್ತೆ ಹಾವೇರಿ
ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಗುರಿಯ ಕಡೆಗೆ ಜನರನ್ನು ಕರೆದುಕೊಂಡು ಹೋಗಲು ಒಳ್ಳೆಯ ನಾಯಕರ ಅವಶ್ಯಕತೆ ಇದೆ. ಆ ನಾಯಕತ್ವದ ಗುಣಗಳನ್ನು ಎಲ್ಲರೂ ಕಲಿತು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಅಂತಾರಾಷ್ಟ್ರೀಯ ಸಂಸ್ಥೆಯಾದ ಜೆಸಿಐನ ಹಿರಿಯರ ವಿಭಾಗದ ಜೆಎಸಿ ರಾಷ್ಟ್ರೀಯ ಅಧ್ಯಕ್ಷ ತಮಿಳುನಾಡಿನ ಅನ್‌ಬಲಗನ್ ನುಡಿದರು.
ನಗರದ ಅಶೋಕ ಹೋಟೆಲ್‌ನಲ್ಲಿ ಈಚೆಗೆ ನಡೆದ ಜೆಎಸಿಯ ಹಿರಿಯ ವಿಭಾಗದ ವಲಯ ೨೪ರ ನೂತನ ಚೇರಮನ್ ಆಗಿ ಆಯ್ಕೆಯಾದ ಹಾವೇರಿಯ ರುಸ್ತುಂ ನಂದಿಹಳ್ಳಿಯವರಿಗೆ ಪ್ರಮಾಣ ವಚನ ಬೋಧನೆ ಮಾಡಿ ಮಾತನಾಡಿದ ಅವರು, ಜೇಸಿ ಸಂಸ್ಥೆ ಸಾಮಾಜಿಕ ಸೇವೆಯ ಉದ್ದೇಶ ಹೊಂದಿದೆ. ಇದರ ಧ್ಯೇಯೋದ್ದೇಶಗಳ ಈಡೇರಿಕೆಗೆ ಪ್ರತಿ ಸದಸ್ಯರೂ ಬದ್ಧತೆ ತೋರುವಂತೆ ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರೀಯ ಉಪಾಧ್ಯಕ್ಷ ಕುಮಾರ ಕೊಡಕಳ್ಳಿ ಮಾತನಾಡಿ, ದೇಶ ಸೇವೆಯೇ ಈಶ ಸೇವೆ ಎಂಬ ಮನೋಭಾವವನ್ನು ನಾವೆಲ್ಲರೂ ಅಳವಡಿಸಿಕೊಂಡು ಮುಂದೆ ಸಾಗಬೇಕಾಗಿದೆ ಎಂದರು. ಜೆಸಿ ಸಂಸ್ಥೆಯ ವಲಯ ಅಧ್ಯಕ್ಷ ಚೆನ್ನವಿರೇಶ ಮಾತನಾಡಿ, ವ್ಯಕ್ತಿ ಸಮಾಜದಲ್ಲಿ ಬದುಕಿದಾಗ ಎಲ್ಲರಿಂದಲೂ ಒಂದೊಂದು ವಿಶೇಷ ಗುಣಗಳನ್ನು ಕಲಿತು ಉತ್ತಮ ನಾಗರಿಕನಾಗಿ ಬದುಕಲು ಸಾಧ್ಯ. ಆದ್ದರಿಂದ ಸಮಾಜದಲ್ಲಿ ಎಲ್ಲರೊಂದಿಗೂ ಬೆರೆತು ಬದುಕುವ ಗುಣ ಕಲಿಯಬೇಕು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.