ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಫೋಟೋ ಎಡಿಟಿಂಗ್ ಮತ್ತು ಗ್ರಾಫಿಕ್ ವಿನ್ಯಾಸ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಓದುವಿಕೆ ಜತೆಗೆ ನಾವು ಹೆಚ್ಚಿನದನ್ನು ಕಣ್ಣಾರೆ ನೋಡಿ ಕಲಿತರೆ ಜ್ಞಾನ ವಿಸ್ತಾರವಾಗುತ್ತದೆ. ಇಡೀ ದೇಶದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿರುವ ಸ್ಟುಡಿಯೋ ಅತ್ಯುತ್ತಮ ಮಾದರಿ ಹಾಗೂ ಸೌಲಭ್ಯ ಹೊಂದಿದ ಸ್ಟುಡಿಯೋವಾಗಿದ್ದು, ವಿದ್ಯಾರ್ಥಿನಿಯರೆಲ್ಲರೂ ಇದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಮುನ್ನಡೆ ಸಾಧಿಸಬೇಕು ಎಂದು ಸಲಹೆ ನೀಡಿದರು.ಪತ್ರಿಕಾ ಮುಖ್ಯ ಕಲಾವಿದ ಸಿದ್ದಲಿಂಗಯ್ಯ ಕಣಕಾಲಮಠ ಮಾತನಾಡಿ, ಪತ್ರಿಕೆ ಜಗತ್ತಿನಲ್ಲಿ ಹಲವು ವೈವಿಧ್ಯಗಳಿವೆ. ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡಲು, ಬರೆಯಲು ಕಲಿತರೆ ಪತ್ರಿಕೋದ್ಯಮದಲ್ಲಿ ಯಶಸ್ಸು ಸುಲಭವಾಗಿ ದೊರೆಯುತ್ತದೆ. ಎಐ ಒಂದು ಹೊಸ ತಂತ್ರಜ್ಞಾನ ಇದರಿಂದ ಭಯ ಪಡುವ ಅಗತ್ಯವಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಎಐ ಕಲಿಯುವುದು ಅವಶ್ಯಕ. ಉದ್ಯೋಗಕ್ಕೆ ಬೇಕಾಗುವ ಎಲ್ಲಾ ಸಾಫ್ಟ್ವೇರ್‌ಗಳನ್ನು ಅಭ್ಯಾಸ ಮಾಡಬೇಕು ಎಂದರು.
ಪತ್ರಿಕಾ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಧೀರಜ್ ಪೊಯ್ಯೆಕಂಡ ಮಾತನಾಡಿ, ಎಐ ಬಳಸಿ ತಾವು ಅಪ್‌ಡೇಟ್ ಆದರೆ, ಅದರ ಬೆಲೆ ಅಪಾರವಾಗಿದೆ. ಹೊಸ ಯುಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಕಲಿತುಕೊಂಡರೆ ಯಶಸ್ಸು ನಿಶ್ಚಿತ. ಸಾಮಾನ್ಯ ಫೋಟೋ ಎಡಿಟಿಂಗ್ ಸುಲಭವಾದರೂ, ಇತ್ತೀಚಿನ ದಿನಗಳಲ್ಲಿ ಎಐ ಆಧಾರಿತ ಎಡಿಟಿಂಗ್ ದುರುಪಯೋಗವಾಗುತ್ತಿದೆ. ಅದನ್ನು ಜಾಗೃತಿಯಿಂದ, ಜವಾಬ್ದಾರಿಯಿಂದ ಬಳಸಬೇಕು ಎಂದರು.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರು ಕಠಿಣ ಪರಿಶ್ರಮಿಗಳಾಗಿದ್ದರೇ ಮಾತ್ರ ಯಶಸ್ಸು ಸಾಧ್ಯ. ಮನಸ್ಸಿಟ್ಟು ಕಲಿತ ವಿದ್ಯೆ ಎಂದಿಗೂ ವ್ಯರ್ಥವಾಗುವುದಿಲ್ಲ. ಇಡೀ ದೇಶದಲ್ಲಿ ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಲವು ವಿಶಿಷ್ಟ ಸೌಲಭ್ಯಗಳನ್ನು ಹೊಂದಿದ್ದು ವಿದ್ಯಾರ್ಥಿನಿಯರೆಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಮಹಿಳಾ ವಿವಿಯ ವಿವಿಧ ವಿಭಾಗದ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಮತ್ತಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ಸಂದೀಪ ಸ್ವಾಗತಿಸಿದರು. ಸುಷ್ಮಾ ಪವಾರ ನಿರೂಪಿಸಿದರು. ಪವಿತ್ರ ಕಂಬಾರ ವಂದಿಸಿದರು.