ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯದ ವಿಷಯದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಅರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಕೊಪ್ಪಳಕ್ಕೆ ₹135 ಕೋಟಿ ವೆಚ್ಚದಲ್ಲಿ ಮೆಡಿಕಲ್ ಕಾಲೇಜ್, ₹198 ಕೋಟಿ ವೆಚ್ಚದಲ್ಲಿ 450 ಹಾಸಿಗೆಯ ಆಸ್ಪತ್ರೆ, ₹20 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ₹100 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಟೆಂಡರ್ ಆಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಇತ್ತೀಚಿಗೆ ₹28.69 ಕೋಟಿ ವೆಚ್ಚದಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆ ಆವರಣದಲ್ಲಿ 50 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ (ಕ್ರಿಟಿಕಲ್ ಕೇರ್ ಪ್ಲಾಂಟ್) ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೆ. ರಾಘವೇಂದ್ರ ಹಿಟ್ನಾಳ ಅದ್ಭುತ ಕೆಲಸಗಾರರು. ಕ್ಷೇತ್ರಕ್ಕೆ ಅನೇಕ ದೊಡ್ಡ ದೊಡ್ಡ ಯೋಜನೆಗಳನ್ನು ತಂದಿದ್ದಾರೆ. ಆದರೆ ಅವರು ಪ್ರಚಾರಪ್ರಿಯರಲ್ಲ. ಪ್ರಚಾರ ಇಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದರು.ಮುನಿರಾಬಾದ್ ಗ್ರಾಪಂನ ಅಯೂಬ್ ಖಾನ್, ಉಪಾಧ್ಯಕ್ಷ ಸೌಭಾಗ್ಯಾ ನಾಗರಾಜ್, ಮುಖಂಡರಾದ ವಿ.ಆರ್. ಪಾಟೀಲ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರನ್ ಮುನಿರಾಬಾದ್, ಯಂಕಪ್ಪ ಹೊಸಳ್ಳಿ, ಫಾಲಾಕ್ಷಪ್ಪ ಗುಂಗಾಡಿ, ಶಿವಬಾಬು ಶಿವಪುರ, ಈರಣ್ಣ ಹುಲಿಗಿ, ರಾಮಮೂರ್ತಿ ಮುನಿರಾಬಾದ್, ಹನುಮಂತಪ್ಪ ಹ್ಯಾಟಿ, ಜಿಲ್ಲಾ ಅರೋಗ್ಯ ಇಲಾಖೆ ಅಧಿಕಾರಿ ಡಾ. ಲಿಂಗರಾಜ್, ಡಾ. ತೊಗರಿ ಉಪಸ್ಥಿತರಿದ್ದರು.