- ಮಾದಾರ ಚೆನ್ನಯ್ಯ ಜಯಂತಿ । ಪ್ರತಿಭಾ ಪುರಸ್ಕಾರ, ಜನಜಾಗೃತಿ ಸಮಾವೇಶ
ಕನ್ನಡಪ್ರಭ ವಾರ್ತೆ ಹರಿಹರ
ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.ಮಾದಾರ ಚೆನ್ನಯ್ಯ ಜಯಂತಿ ಅಂಗವಾಗಿ ತಾಲೂಕು ಮಾದಿಗ ಸಮಾಜ ವತಿಯಿಂದ ನಗರದ ಕಾಟ್ವೆ ಸಮುದಾಯ ಭವನದಲ್ಲಿ ಸಮಾಜದ 2024-25 ಹಾಗೂ 25-26ನೇ ಸಾಲಿನ ಎಸ್ ಎಸ್ ಎಲ್ ಹಾಗೂ ಪಿಯುಸಿ ಯಲ್ಲಿ ಶೇ 75ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ಕಿಟ್ ವಿತರಣಾ ಹಾಗೂ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಸಂವಿಧಾನದ ಮೂಲಕ ಸರ್ವಸ್ವವನ್ನು ನೀಡಿದ್ದಾರೆ. ಅದರ ಸಮಗ್ರ ಲಾಭವನ್ನು ಪಡೆಯಲು ಶಿಕ್ಷಣವೇ ಶಕ್ತಿಯಾಗಿದೆ. ಆದ್ದರಿಂದ ಸರ್ವರೂ ಶಿಕ್ಷಣವಂತರಾಗಬೇಕು ಎಂದು ತಿಳಿಸಿದರು.
ಒಳಮೀಸಲಾತಿ, ಶಿಕ್ಷಣ ಮತ್ತು ಉದ್ಯೋಗದ ಕುರಿತು ಹೊನ್ನಾಳಿಯ ನ್ಯಾಯವಾದಿ ಎಂ.ಸಿ. ಮೋಹನ್ ಕುಮಾರ್ ವಿಶೇಷ ಉಪನ್ಯಾಸ ನೀಡಿದರು. ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರವಿನಾರಾಯಣ ಶಿಕ್ಷಣ ಮಹತ್ವದ ಕುರಿತು ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೆ. ಭೂಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಎಂ.ಬಿ.ಧರ್ಮದತ್, ಉಪಾಧ್ಯಕ್ಷ ಹನುಮಂತಪ್ಪ ದೊಡ್ಮನೆ ಹಳ್ಳಿಹಾಳ್, ಎಂ.ಎಸ್. ಶ್ರೀನಿವಾಸ್, ಕಾರ್ಯದರ್ಶಿ ಎಚ್.ಶಿವಪ್ಪ, ನಿರ್ದೇಶಕರಾದ ಬಿ.ಡಿ.ಬಸವರಾಜಪ್ಪ ಕೊಕ್ಕನೂರು, ಎಚ್.ಎಂ. ಹನುಮಂತಪ್ಪ ಬನ್ನಿಕೋಡ್, ಎ.ಕೆ.ನಾಗೇಂದ್ರಪ್ಪ ರಾಜನಹಳ್ಳಿ, ಚೌಡಪ್ಪ ಹೊಳೆಸಿರಿಗೆರೆ ಮುಂತಾದವರು ಉಪಸ್ಥಿತರಿದ್ದರು.
-30ಎಚ್.ಆರ್‌ಆರ್02: