ಗ್ರಾಹಕರ ಸಹಕಾರದಿಂದ ಮಾತ್ರ ಸಂಘಗಳ ಅಭಿವೃದ್ಧಿ: ಸಾಗರ ಚವಜ

KannadaprabhaNewsNetwork |  
Published : Jun 10, 2024, 02:00 AM IST
ಗ್ರಾಹಕರ ಸಹಕಾರದಿಂದ ಮಾತ್ರ ಸಂಘಗಳ ಅಭಿವೃದ್ದಿ : ಸಾಗರ ಚವಜ ಅಭಿಮತ. | Kannada Prabha

ಸಾರಾಂಶ

ತೇರದಾಳ ಅರ್ಬನ್ ಕ್ರೆಡಿಟ್ ಸೌಹಾರ್ದ ಸೊಸೈಟಿಯ ೨೩ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ತೇರದಾಳ

ಗ್ರಾಹಕರ ಸಹಕಾರವಿದ್ದರೆ ಮಾತ್ರ ಸಂಸ್ಥೆಗಳು ಅಭಿವೃದ್ಧಿ ಹೊಂದಿ ಹೆಸರು ಮಾಡುತ್ತವೆ. ಸಹಕಾರಿ ಕ್ಷೇತ್ರದಲ್ಲಿ ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವುದು ಅತ್ಯಗತ್ಯವಾಗಿದೆ. ಆ ದಿಶೆಯಲ್ಲಿ ತೇರದಾಳ ಅರ್ಬನ್ ಕ್ರೆಡಿಟ್ ಸೌಹಾರ್ದ ಸೊಸೈಟಿಯು ಉತ್ತಮ ಸಹಕಾರಿ ಸಂಸ್ಥೆಯೆಂದು ಗುರುತಿಸಿಕೊಂಡಿರುವುದು ಹೆಮ್ಮೆಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ, ವಕೀಲ ಸಾಗರ ಚವಜ ಹೇಳಿದರು.

ಪಟ್ಟಣದ ನಾಡಕಾರ್ಯಾಲಯದ ಬಳಿಯಿರುವ ತೇರದಾಳ ಅರ್ಬನ್ ಕ್ರೆಡಿಟ್ ಸೌಹಾರ್ದ ಸೊಸೈಟಿಯ ೨೩ನೇ ವಾಷಿಕೋತ್ಸವ ನಿಮಿತ್ತ ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಪೂಜಾ ಸಮಾರಂಭದಲ್ಲಿ ಮಾತನಾಡಿ,. ಗ್ರಾಹಕರೇ ದೇವರು ಎಂದು ಮಹಾತ್ಮ ಗಾಂಧಿಯವರು ಹೇಳಿರುವುದನ್ನು ಸೌಹಾರ್ದ, ಸಹಕಾರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಗ್ರಾಹಕರು ಕೂಡ ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಎಲ್ಲ ಆರೂ ಶಾಖೆಗಳಲ್ಲೂ ಗ್ರಾಹಕರ ಸಹಕಾರ ಚೆನ್ನಾಗಿದೆ. ಸುಮಾರ ೫೦ ಜನ ಸಿಬ್ಬಂದಿ ಸಹ ಸಂಸ್ಥೆಯ, ಗ್ರಾಹಕರ ಹಿತ ಗಮನದಲ್ಲಿಟ್ಟುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕರ ಸಹಕಾರದಿಂದ ಶೀಘ್ರವೇ ಗೋಠೆ-ಗದ್ಯಾಳ ಸೇರಿದಂತೆ ಕೆಲವು ಕಡೆಗಳಲ್ಲಿ ಶಾಖೆಗಳನ್ನು ತೆರೆಯುವ ಆಲೋಚನೆಯಿದೆ. ಆದ್ದರಿಂದ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ನೇಮಿನಾಥ ಭಿಲವಡಿ, ಪ್ರತಿಭಾ ಚವಜ, ಪ್ರತೀಕರಾಜ ಚವಜ, ಧರೆಪ್ಪ ಸಾಬನ್ನವರ, ಮಹಾವೀರ ಗೌಡನ್ನವರ, ರಾಮಚಂದ್ರ ಜೋಶಿ, ಪರಶುರಾಮ ಮೂಡಲಗಿ, ತುಕಾರಾಮ ಲೋಂಡೆ, ಧನುಶ್ರೀ ಕರಂಡಿ, ಉಮಾ ಕಮತಗಿ ಸೇರಿದಂತೆ ಸಿಬ್ಬಂದಿ, ಮುಖಂಡರು ಹಾಗೂ ಅನೇಕ ಗ್ರಾಹಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾ.ನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು
ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು