ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಸೂಲಿಬೆಲೆ ಹೋಬಳಿ ಕಂಬಳೀಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಕೋಲಿಗ-ದೊಡ್ಡಕೋಲಿಗ ಸಂಪರ್ಕ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
15 ವರ್ಷಗಳಿಂದ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗದೆ ನೆನಗುಂದಿಗೆಗೆ ಬಿದಿದ್ದ ಸಮಸ್ಯೆಯನ್ನು ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದು, ಕಚ್ಚಾಪಕ್ಕಾ ರಸ್ತೆ ನಿರ್ಮಾಣವನ್ನು ಮೊದಲು ಹಂತದಲ್ಲಿ ನೆರವೇರಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲಿ ಡಾಂಬರೀಕರಣ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದರು.ಗ್ರಾಮಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುದಾನದಲ್ಲಿ ರೈತಾಪಿ ವರ್ಗದ ಅನುಕೂಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಚ್ಚಾಪಕ್ಕಾ ರಸ್ತೆ ನಿರ್ಮಾಣ ಮಾಡಿಕೊಂಡು ಸ್ಥಳೀಯ ಶಾಸಕರಾದ ಶರತ್ ಬಚ್ಚೇಗೌಡರ ಅನುದಾನದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ಚಿಕ್ಕಕೋಲಿಗ ಮತ್ತು ದೊಡ್ಡಕೋಲಿಗ ಗ್ರಾಮದ ರೈತರಿಗೆ ಅನುಕೂಲವಾಗಲಿದೆ ಎಂದರು.
ಚಿತ್ರ; ೧೮ ಸೂಲಿಬೆಲೆ ೪ ಜೆಪಿಜೆ ನಲ್ಲಿದೆ