ಕನ್ನಡಪ್ರಭ ವಾರ್ತೆ ಆಲಮಟ್ಟಿಪ್ರಸಕ್ತ ಸಾಲಿನ ಮೌಲ್ಯಾಂಕನ ಪರೀಕ್ಷೆಗೆ ಸಾಕಷ್ಟು ಅಡೆತಡೆ ಬಂದಿದ್ದರೂ, ಸರ್ಕಾರ ಮೊದಲೇ ನಿರ್ಧರಿಸಿದಂತೆ ಅಚ್ಚುಕಟ್ಟಾಗಿ ಮೌಲ್ಯಾಂಕನ ಕಾರ್ಯ ನಡೆಸಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.
1000 ಮಕ್ಕಳಿಗೆ ಸಮವಸ್ತ್ರ:
ಸರ್ಕಾರ ನೀಡುವ ಎರಡು ಜತೆ ಉಚಿತ ಸಮವಸ್ತ್ರದ ಜತೆ, ಬೆಂಗಳೂರಿನ ಸಂಘಟನೆಯೊಂದನ್ನು ಸಂರ್ಪಕಿಸಲಾಗಿದ್ದು, ಅವರು ತಾಲೂಕಿನ 1000 ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ನೀಡಲು ಒಪ್ಪಿದ್ದು, ಅದನ್ನು ಜೂನ್ ನಲ್ಲಿ ಕೊಡಿಸಲಾಗುವುದು ಎಂದು ಚಂದ್ರಶೇಖರ ನುಗ್ಗಲಿ ತಿಳಿಸಿದರು. ವೈಯಕ್ತಿಕವಾಗಿ 100 ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಕೊಡಿಸಲಾಗುವುದು.ಈಗಾಗಲೇ ಇನ್ಫೋಸಿಸ್ ಫೌಂಡೇಶನ್ ಸಂರ್ಪಕಿಸಿ ₹ 50 ಲಕ್ಷ ವೆಚ್ಚದಲ್ಲಿ ತಾಲೂಕಿನ ಪ್ರತಿ ಶಾಲೆಗೂ ಕಂಪ್ಯೂಟರ್ ನೀಡಲಾಗಿದೆ ಎಂದರು.ಶಿಕ್ಷಕ ಸಂಘಟನೆಯ ನಿಡಗುಂದಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಲೀಂ ದಡೆದ ಮಾತನಾಡಿದರು. ಸಂಘಟನೆಯ ಮುಖಂಡರಾದ ಆರ್.ಎಸ್. ಕಮತ, ಸಲೀಂ ದಡೆದ, ಬಿ.ಎಸ್. ಯರವಿನತೆಲಿಮಠ, ಎಂ.ಎಂ. ಮುಲ್ಲಾ, ಮುತ್ತು ಹೆಬ್ಬಾಳ, ಪವಾಡೆಪ್ಪ ಚಲವಾದಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ಹುರಕಡ್ಲಿ, ಭಾಷಾಸಾಬ್ ಮನಗೂಳಿ, ಬಿ.ಐ. ಖ್ಯಾಡಿ, ಎಸ್.ಐ. ಕಾರಕೂನ ಮತ್ತೀತರರು ಇದ್ದರು.