ಗಾಂಧಿ ಮೆಮೋರಿಯಲ್‌ ಹಾಲ್‌ ಐತಿಹಾಸಿಕ ತಾಣವಾಗಿ ಅಭಿವೃದ್ಧಿ: ಶಾಸಕಿ ಲತಾ

KannadaprabhaNewsNetwork | Published : Oct 3, 2024 1:23 AM

ಸಾರಾಂಶ

.ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಗಾಂಧಿಜಿಯವರು ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ.

ಹರಪನಹಳ್ಳಿ: ಮಹಾತ್ಮ ಗಾಂಧೀಜಿ ತಂಗಿದ್ದ ಪಟ್ಟಣದ ಸ.ಪ.ಪೂ ಕಾಲೇಜಿನ ಗಾಂಧಿ ಮೆಮೋರಿಯಲ್‌ ಹಾಲ್‌ ನ್ನು ಐತಿಹಾಸಿಕ ತಾಣವಾಗಿ ಅಭಿವೃದ್ದಿ ಪಡಿಸಲಾಗುವುದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.

ಅವರು ಪಟ್ಟಣದ ಸ.ಪ.ಪೂ ಕಾಲೇಜಿನ ಗಾಂಧಿ ಮೆಮೋರಿಯಲ್ ಹಾಲ್‌ನ ಆವರಣದಲ್ಲಿ ಬುಧವಾರ ತಾಲೂಕು ಆಡಳಿತ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಲಾಲು ಬಹದ್ದೂರ್ ಶಾಸ್ತ್ರಿಜಿಯವರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಗಾಂಧಿಜಿಯವರು ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಅವರು ಹರಪನಹಳ್ಳಿ ಜೂನಿಯರ್ ಕಾಲೇಜಿನಲ್ಲಿ ತಂಗಿದ್ದ ಕೊಠಡಿಯಲ್ಲಿ ಅವರ ಏಕಶಿಲೆ ಮೂರ್ತಿಯನ್ನು ನಿರ್ಮಾಣ ಮಾಡಿರುವುದು ಏಷ್ಯಾದಲ್ಲೇ ಮೊದಲು ಎಂದು ಹೇಳಿದರು.

ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವ ತತ್ವ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ದೇಶದ ಉದ್ದಗಲಕ್ಕೂ ಫಕ್ಕಿರನಂತೆ ಸಂಚರಿಸಿ ಬ್ರಿಟಿಷರ ವಿರುದ್ಧ ಉಪವಾಸ ಸೇರಿದಂತೆ ಅನೇಕ ಚಳುವಳಿಗಳನ್ನು ಮಾಡಿ ಗಾಂಧೀಜಿಯವರು ನಮಗೆ ಮಾದರಿಯಾದರು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗಾಂಧೀಜಿಯವರು ದೇಶದ ಜನರನ್ನು ಒಗ್ಗೂಡಿಸಿ ಸತ್ಯ ಅಹಿಂಸೆ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಚೇತನ ಎಂದು ಹೇಳಿದರು.ದಕ್ಷಿಣ ಆಫ್ರಿಕಾದದಲ್ಲಿದ್ದ ಜನಾಂಗೀಯ ಬೇಧವನ್ನು ಖಂಡಿಸಿದರು, ಹೆಣ್ಣು-ಗಂಡು ಎಂಬ ಬೇಧವನ್ನು ತಳ್ಳಿ ಹಾಕಿದರು ಸ್ವಾತಂತ್ರ್ಯ ಹೋರಾಟದ ಜೊತೆಜೊತೆಗೆ ಮೌಢ್ಯಗಳನ್ನು ವಿರೋಧಿಸಿ ಸಾಮಾಜಿಕ ಬದಲಾವಣೆ ಬಯಸಿದ್ದರು ಎಂದು ಹೇಳಿದರು.

ಶಿಕ್ಷಕಿ ಶ್ವೇತಾ ಜಿ. ವಿಶೇಷ ಉಪನ್ಯಾಸ ನೀಡಿದರು.

ಪುರಸಭಾ ಸದಸ್ಯರಾದ ಎಂ.ವಿ.ಅಂಜಿನಪ್ಪ, ಅಬ್ದುಲ್ ರೆಹಮಾನ್, ಲಾಟಿ ದಾದಪೀರ್, ಟಿ.ವೆಂಕಟೇಶ, ಎಸ್.ಜಾಕೀರ ಹುಸೇನ್, ಉದ್ದಾರ ಗಣೇಶ, ಮಂಜುನಾಥ ಇಜಂತಕರ್, ಭೀಮವ್ವ ಸಣ್ಣಹಾಲಪ್ಪ, ಭರತೇಶ, ಕೊಟ್ರೇಶ, ಹನುಮಕ್ಕ ಚಿಕ್ಜೇರಿ ಬಸಪ್ಪ, ಸತ್ತೂರು ಯಲ್ಲಮ್ಮ, ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು, ತಾ.ಪಂ ಇಒ ವೈ.ಎಚ್.ಚಂದ್ರಶೇಖರ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗಂಗಪ್ಪ, ಬಿಇಒ ಎಚ್.ಲೇಪಾಕ್ಷಪ್ಪ, ಕೃಷಿ ಅಧಿಕಾರಿ ಉಮ್ಮೇಶ, ಸಿಡಿಪಿಒ ಅಶೋಕ, ಮುಖಂಡರಾದ ಕೆ.ಕುಬೇರಪ್ಪ, ಇಸ್ಮಾಯಿಲ್ ಎಲಿಗಾರ, ಜಾವೀದ್, ಸೈಯದ್ ಇರ್ಫಾನ್ ಛಲವಾದಿ ಪರಶುರಾಮ ಗಿರಜ್ಜಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.

Share this article