ನಲ್ಲಿಗುಡ್ಡೆ ಕೆರೆ ಉದ್ಯಾನವನ, ವಾಕಿಂಗ್‌ಪಾಥ್‌ ಅಭಿವೃದ್ಧಿ

KannadaprabhaNewsNetwork |  
Published : Nov 12, 2026, 01:15 AM IST
11ಕೆಆರ್ ಎಂಎನ್ 2.ಜೆಪಿಜಿಬಿಡದಿ ವ್ಯಾಪ್ತಿಯ ನಲ್ಲಿ ಗುಡ್ಡೆ ಕೆರೆ ಆವರಣದಲ್ಲಿ ವಾಯು ವಿಹಾರಕ್ಕೆ ಉತ್ತಮ ವಾಕಿಂಗ್ ಪಾಥ್, ಸೈಕ್ಲಿಂಗ್ ಪಾಥ್ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಸಚಿವ ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ರಾಮನಗರ: ನಲ್ಲಿಗುಡ್ಡೆ ಕರೆ ಆವರಣದಲ್ಲಿ ವಾಯುವಿಹಾರಕ್ಕೆ ಉತ್ತಮ ವಾಕಿಂಗ್ ಪಾಥ್, ಸೈಕ್ಲಿಂಗ್ ಪಾಥ್ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು

ರಾಮನಗರ: ನಲ್ಲಿಗುಡ್ಡೆ ಕರೆ ಆವರಣದಲ್ಲಿ ವಾಯುವಿಹಾರಕ್ಕೆ ಉತ್ತಮ ವಾಕಿಂಗ್ ಪಾಥ್, ಸೈಕ್ಲಿಂಗ್ ಪಾಥ್ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು.

ಬಿಡದಿ ವ್ಯಾಪ್ತಿಯ ನಲ್ಲಿಗುಡ್ಡೆ ಕೆರೆ ಆವರಣದಲ್ಲಿ ವಾಯು ವಿಹಾರಕ್ಕೆ ಉತ್ತಮ ವಾಕಿಂಗ್ ಪಾಥ್, ಸೈಕ್ಲಿಂಗ್ ಪಾಥ್ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಿಂದ 5 ಕೋಟಿ ಹಾಗೂ ಬಿಎಂಐಸಿಪಿಯಿಂದ 5 ಕೋಟಿ ಸೇರಿದಂತೆ ಒಟ್ಟು 10 ಕೋಟಿ ರು. ವೆಚ್ಚದಲ್ಲಿ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೆರೆ ವ್ಯಾಪ್ತಿಯಲ್ಲಿ ಬರುವ ಬಫರ್ ಝೋನ್ ರೈತರಿಗೆ ಅನುಕೂಲಕರವಾಗಿಲ್ಲ. ಈ ಹಿನ್ನೆಲೆಯಲ್ಲಿ ರೈತರೊಂದಿಗೆ ಸಭೆ ನಡೆಸಿ ಅವರ ಅಭಿಪ್ರಾಯ ಹಾಗೂ ಸಲಹೆ ಪಡೆಯಲಾಗುವುದು. ಬಫರ್ ಝೋನ್ ಪ್ರದೇಶದಿಂದ 10 ಕಿ.ಮೀ. ದೂರದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳುವ ಸಾಧ್ಯತೆ ಬಗ್ಗೆಯೂ ಚರ್ಚಿಸಲಾಗುವುದು. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ 12 ಎಕರೆ ಪ್ರದೇಶದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ ಹೆಸರಿನಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ, ಫುಡ್ ಪಾರ್ಕ್, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಬೈರಮಂಗಲ ಕ್ರಾಸ್‌ನಲ್ಲಿ ಕೆಂಪೇಗೌಡ ಪ್ರತಿಮೆ, ಬಿಜಿಎಸ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜ್, ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್, ಬಿಡದಿ ಸೊಸೈಟಿ ಅಧ್ಯಕ್ಷ ಮಧುಕುಮಾರ್ , ನಿರ್ದೇಶಕರಾದ ವಾಜರಹಳ್ಳಿ ಮಹೇಶ್,

ಕಾಂಗ್ರೆಸ್ ಮುಖಂಡರಾದ ಎಲ್.ಚಂದ್ರಶೇಖರ್ , ಚಿಕ್ಕ ಬ್ಯಾಟಪ್ಪ, ಬೆಟ್ಟಸ್ವಾಮಿ, ನರಸಿಂಹಯ್ಯ, ಮಹಿಪತಿ, ಕಲ್ಯಾಣಕುಮಾರಿ, ಜೆಡಿಎಸ್ ಮುಖಂಡ ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ ಮತ್ತಿತರರು ಹಾಜರಿದ್ದರು.

ಬಾಕ್ಸ್‌..........

ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆಯಲ್ಲಿ ಅರ್ಥವಿಲ್ಲ

ರಾಮನಗರ:

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದಲೇ ಬೆಲೆ ಏರಿಕೆ ಆಗಿದೆ. ಹೀಗಿರುವಾಗ ಬಿಜೆಪಿಯವರೇ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಪೌರಾಡಳಿತ ಸಚಿವ .ಬಾಲಕೃಷ್ಣ ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 13 ವರ್ಷದಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಬೆಲೆ ಏರಿಕೆ ಮಾಡಿದೆ. ಅದಕ್ಕಾಗಿಯೇ ನಾವು ಮಹಿಳೆಯರಿಗೆ 2 ಸಾವಿರ ಹಣ ಕೊಡುತ್ತಿದ್ದೇವೆ. ಬಿಜೆಪಿಯವರಿಗೆ ಹೋರಾಟ ಮಾಡಲು ನೈತಿಕತೆ ಇಲ್ಲ ಎಂದರು.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಮೇಲೆ ರಾಜ್ಯದ ಜನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಾಗಿದ್ದರೆ ಯಡಿಯೂರಪ್ಪ ಇದ್ದಾಗ ರಾಜ್ಯ ಸುಭಿಕ್ಷವಾಗಿತ್ತಾ, ವಿಜಯೇಂದ್ರಗೆ ಬೆಳಗ್ಗೆ ಎದ್ದು ನಮ್ಮನ್ನು ಬೈಯೋದೇ ಕೆಲಸ. ವಿಪಕ್ಷದವರು ನಮ್ಮನ್ನು ಹೊಗಳಲು ಆಗುತ್ತಾ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ರೈತರಿಗೆ 1500, 2000 ಬರ ಪರಿಹಾರ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಇದು ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ನಮ್ಮ ಉಪಮುಖ್ಯಮಂತ್ರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ. ಬರ ಪರಿಹಾರ ಶ್ರೀಮಂತ ರೈತರಿಗೆ ಕೊಡುವಂತದಲ್ಲ. ಬಡ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಪರಿಹಾರ ಕೊಡುತ್ತಿದೆ ಎಂದರು.

ಮೂರು ತಿಂಗಳ ಹಣ ಒಟ್ಟಿಗೆ ದೀಪಾವಳಿ ಗಿಫ್ಟ್ ಅಂತ ಕೊಟ್ಟಿದ್ದೇವೆ. ಹಂತ ಹಂತವಾಗಿ ಅಕೌಂಟ್‌ಗೆ ಹಾಕುತ್ತೇವೆ. ಹಿರಿಯೂರು ಕ್ಷೇತ್ರ ಉಪಚುನಾವಣೆಗಾಗಿ ನನಗೂ ಒಂದು ಹೋಬಳಿ ಉಸ್ತುವಾರಿ ಕೊಟ್ಟಿದ್ದಾರೆ. ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣ ಇದ್ದು, ಗೆಲ್ಲುತ್ತೇವೆ. ಅಲ್ಲಿ ಬಿಜೆಪಿಯವರು ಟಿಕೆಟ್ ತಗೋತಾರೋ, ಜೆಡಿಎಸ್ ನವರು ಟಿಕೆಟ್ ತಗೋತಾರೋ ಗೊತ್ತಿಲ್ಲ.ಶತ್ರು ಯಾರಾದರೂ ಆಗಲಿ, ಯುದ್ಧಕ್ಕೆ ರೆಡಿ ಇದ್ದೇವೆ. ಎಲ್ಲಾ ಅಸ್ತ್ರಗಳನ್ನು ಇಟ್ಟುಕೊಂಡಿದ್ದೇವೆ. ಜನವರಿ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮಾಡುತ್ತೇವೆ. ಎಸ್ಐಆರ್ ನಿಂದಾಗಿ ಗೊಂದಲ ಸೃಷ್ಟಿಯಾಗಿದೆ. ಹೊಸ ಪಟ್ಟಿಯಲ್ಲಿ ಚುನಾವಣೆ ಮಾಡಬೇಕಾ? ಹಳೆ ಪಟ್ಟಿಯಲ್ಲಿ ಮಾಡಬೇಕಾ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಎಸ್ಐಆರ್ ನಿಂದ ಸ್ವಲ್ಪ ತಡ ಆಗ್ತಿದೆ ಅಷ್ಟೆ ಎಂದು ಬಾಲಕೃಷ್ಣ ತಿಳಿಸಿದರು.

11ಕೆಆರ್ ಎಂಎನ್ 2.ಜೆಪಿಜಿ

ಬಿಡದಿ ವ್ಯಾಪ್ತಿಯ ನಲ್ಲಿ ಗುಡ್ಡೆ ಕೆರೆ ಆವರಣದಲ್ಲಿ ವಾಯು ವಿಹಾರಕ್ಕೆ ಉತ್ತಮ ವಾಕಿಂಗ್ ಪಾಥ್, ಸೈಕ್ಲಿಂಗ್ ಪಾಥ್ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಸಚಿವ ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌