ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ: ಕೆ.ಶಾಂತಪ್ಪ

KannadaprabhaNewsNetwork |  
Published : Feb 02, 2025, 11:45 PM IST
01ಕೆಪಿಆರ್‌ಸಿಆರ್‌ 09: | Kannada Prabha

ಸಾರಾಂಶ

ಹಿಂದುಳಿದ ಚಿಕ್ಕ ಸಮುದಾಯಗಳು ಅಭಿವೃದ್ದಿಯಾಗಲು ಶಿಕ್ಷಣ ಮಹತ್ವವಾಗಿದ್ದು, ಮುಂಬರುವ ದಿನಗಳಲ್ಲಿ ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ನೀಡುವಲ್ಲಿ ಪಾಲಕರು ಮುಂದಾಗಬೇಕು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಸಲಹೆ ನೀಡಿದರು.

ಶ್ರೀ ಮಾರ್ಕಂಡೇಶ್ವರ ಜಯಂತಿ । ಪ್ರತಿಭಾ ಪುರಸ್ಕಾರ ಸಮಾರಂಭ

ಕನ್ನಡಪ್ರಭ ವಾರ್ತೆ ರಾಯಚೂರು

ಹಿಂದುಳಿದ ಚಿಕ್ಕ ಸಮುದಾಯಗಳು ಅಭಿವೃದ್ದಿಯಾಗಲು ಶಿಕ್ಷಣ ಮಹತ್ವವಾಗಿದ್ದು, ಮುಂಬರುವ ದಿನಗಳಲ್ಲಿ ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ನೀಡುವಲ್ಲಿ ಪಾಲಕರು ಮುಂದಾಗಬೇಕು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಸಲಹೆ ನೀಡಿದರು.

ಸ್ಥಳೀಯ ಮಾಣಿಕ್ ನಗರದ ಪದ್ಮಶಾಲಿ ಸಮಾಜದ ಶ್ರೀ ಭಕ್ತ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಶ್ರೀ ಭಕ್ತ ಮಾರ್ಕಂಡೇಶ್ವರ ಜಯಂತಿ ಅಂಗವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಬೇಕಾಗಿದ್ದು, ಪ್ರಸ್ತುತ ಮತ್ತು ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಹಾಗೂ ಉನ್ನತ ಹುದ್ದೆ ನಮ್ಮ ಸಮಾಜದ ಮಕ್ಕಳು ಪಡೆದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಉತ್ತರ ಕರ್ನಾಟಕ ಪ್ರಾಂತಿಯ ಪದ್ಮಶಾಲಿ ಸಮಾಜದ ರಾಜ್ಯಾಧ್ಯಕ್ಷ ವೆಂಕಟೇಶ ಸಾಕಾ, ಅಖಿಲ ಭಾರತ ಪದ್ಮಾಶಾಲಿ ಸಮಾಜದ ಉಪಾಧ್ಯಕ್ಷ ಕೊಂಗತಿ ಕಾಳಪ್ಪ ಮಾತನಾಡಿದರು.

ಸಮಾರಂಭದ ಸಾನಿಧ್ಯವನ್ನು 108 ಸಾವಿರ ದೇವರ ಸಂಸ್ಥಾನ ಕಿಲ್ಲೆ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು. ಪುಟಾಣಿಗಳಾದ ಸಮಸನ್ವಿ ಪೆರ್ಮಿ ನರಹರಿ, ಸಾಯಿ ಮನಸ್ವನಿ, ಗರ‍್ರಂ ರಮೇಶ ಬಾಬು ಭರತನಾಟ್ಯ ಪ್ರದರ್ಶಿಸಿ ಜನ ಮೆಚ್ಚುಗೆ ಪಡೆದುಕೊಂಡರು. ನಂತರ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಉನ್ನತ ವಿದ್ಯಾಭ್ಯಾಸದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಳಿಗೆ, ಸಮಾಜಕ್ಕೆ ಸೇವೆ ಸಲ್ಲಿಸಿ ಹಿರಿಯ ಮುಖಂಡರಿಗೆ, ಸರ್ಕಾರಿ ಹುದ್ದೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಸಮಾಜದ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಉತ್ತರ ಕರ್ನಾಟಕ ಪ್ರಾಂತೀಯ ಪದ್ಮಶಾಲಿ ಸಮಾಜದ ಕಾರ್ಯದರ್ಶಿ ಸುರೇಶ್ ರ‍್ಯಾವಣಿಕಿ, ಸಮಾಜದ ಅಧ್ಯಕ್ಷ ಪೆನುಗೊಂಡ್ಲ ಗೋವಿಂದರಾಜು, ಗೌರವಾಧ್ಯಕ್ಷ ಚಿನ್ನಿ ಪಾಂಡುರಂಗ, ಖಜಾಂಚಿ ಪುಲಿಪಾಟಿ ನಾಗೇಶ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜಿ. ನಾಗರಾಜ, ತಾಲೂಕು ಗೌರವಾಧ್ಯಕ್ಷ ಕೆ. ದೊಡ್ಡ ಈರಣ್ಣ, ಸೇರಿ ಸಮಾಜದ ಮುಖಂಡರು ಮಹಿಳೆಯರು ಇದ್ದರು.

ಶ್ಯಾಮಲಾ, ಸುವರ್ಣ, ವಿನಯ್‌ಕುಮಾರ್ ಪ್ರಾರ್ಥಿಸಿದರು. ಸಮಾಜದ ಉಪಾಧ್ಯಕ್ಷ ಹೊನ್ನಾಲ ವೆಂಕಟೇಶ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಈರಣ್ಣ ಕರ್ಲಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಎಸ್‌ ಹಾಸನ ಸಮಾವೇಶಕ್ಕೆ ಆಹ್ವಾನವಿಲ್ಲ : ಜಿ.ಟಿ.ದೇವೇಗೌಡ
ಅರಸು ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿದ್ದರಾಮಯ್ಯ