ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಕ್ಯಾತಘಟ್ಟ ಗ್ರಾಮದಲ್ಲಿ ಏತ ನೀರಾವರಿ ಯೋಜನೆಯ ಚೆಕ್ ಡ್ಯಾಂ, ಹೊಸಕಟ್ಟಡ, ಪಂಪ್ ಮೋಟರ್ ರೈಸಿಂಗ್ ಮೆನು ಸೇರಿದಂತೆ ವಿವಿಧ ಅಭಿವೃದ್ಧಿಗಳಿಗೆ ಚಾಲನೆ ನೀಡಿ ಮಾತನಾಡಿ, ಸೂಳೆಕೆರೆ ಕಾಮಗಾರಿ ಅಭಿವೃದ್ಧಿ ಇನ್ನು ಮುಗಿದಿಲ್ಲ. ಪ್ರಸ್ತುತ ಶೇ.40ರಷ್ಟು ಮಾತ್ರ ಕಾಮಗಾರಿ ಮುಗಿದಿದೆ. ಇನ್ನು ಉಳಿದ ಕಾಮಗಾರಿ ಮುಗಿಯುವ ಮುನ್ನವೇ ಅಪಪ್ರಚಾರ ನಡೆಸುತಿದ್ದಾರೆ ಎಂದು ಕಿಡಿಕಾರಿದರು.
ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ ಕ್ಷೇತ್ರದ ನೀರಿನ ಬವಣೆಯಿಂದ ದೂರ ಮಾಡುವುದು ನನ್ನ ಗುರಿ. ತಾಲೂಕಿನ ಜೀವನಾಡಿ ಸೂಳೆಕೆರೆಯನ್ನು ಮಿನಿ ಕೆಆರ್‌ಎಸ್ ರೀತಿ ಮಾಡಲು ನಿಮ್ಮ ಸಹಕಾರ ಅಗತ್ಯ ಎಂದರು.ರೈತರು ತಾಳ್ಮೆಯಿಂದ ಇದ್ದರೇ ಸಂಪೂರ್ಣವಾಗಿ ಕೊನೆ ಭಾಗದ ರೈತರ ನೀರಿನ ಬವಣೆಗೆ ಮುಕ್ತಿ ನೀಡುತ್ತೇನೆ. ನಾಲೆಗಳ ಕೆಲಸ ಶೇ.90ರಷ್ಟು ಭಾಗ ಮುಗಿದಿದೆ. ಅಲ್ಲಲ್ಲಿ ಸಣ್ಣ ಬ್ರಿಡ್ಜ್, ಡಕ್ಕುಗಳ ಕೆಲಸ ಬಾಕಿ ಇದೆ. ಕೆಲ ರೈತರು ಅಲ್ಲಲ್ಲಿ ಪೈಪ್ ಗಳನ್ನೇ ಹಾಕಿಕೊಂಡರೇ ಕೊನೆ ಭಾಗದ ರೈತರಿಗೆ ತೊಂದರೆಯಾಗುತ್ತದೆ. ಅಂತಿಮ ಹಂತದಲ್ಲಿ ಕೊನೆ ಭಾಗದ ರೈತರಿಗೂ ಸರಾಗವಾಗಿ ನೀರು ಒದಗಿಸುವುದೇ ನನ್ನ ಗುರಿ ಎಂದರು.
ಇದೇ ವೇಳೆ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಬ್ಲಾಕ್ ಯೂತ್ ಕಾಂಗ್ರೆಸ್ ಅದ್ಯಕ್ಷ ವೆಂಕಟೇಶ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಗಿರೀಶ್ ಕ್ಯಾತಘಟ್ಟ, ಕೃಷ್ಣ, ವಿಜಯ್ ಕುಮಾರ್, ಜಯರಾಂ, ತೊರೆಚಾಕನಹಳ್ಳಿ ಶಂಕರೇಗೌಡ, ಪೂಜಾರಿ ಮಹೇಶ್ ಅಜ್ಜಹಳ್ಳಿ ಮನು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ನಾಗರಾಜು, ಬಾಬು ಕೃಷ್ಣದೇವ್, ಪ್ರಶಾಂತ್ ಲಿಂಗಯ್ಯ, ಅವಿನಾಶ್ ಸೇರಿದಂತೆ ಮತ್ತಿತರರು ಇದ್ದರು.