ಶಿಕ್ಷಣ ನೀತಿ ಮೇಲೆ ದೇಶದ ಅಭಿವೃದ್ಧಿ

KannadaprabhaNewsNetwork |  
Published : Jul 9, 2024 12:55 AM IST
8ಐಎನ್‌ಡಿ3,ಇಂಡಿ ತಾಲೂಕಿನ ಝಳಕಿ ಗ್ರಾಮದಲ್ಲಿ ಪಾಲಟೆಕ್ನಿಕ್‌ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯದ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಪಂಚದಲ್ಲಿ ಬದುಕಿಗೆ ಶಿಕ್ಷಣ, ಸಂಸ್ಕಾರ ಮುಖ್ಯವಾಗಿದ್ದು, ಶಿಕ್ಷಣ ನೀತಿ ಮೇಲೆ ಆ ದೇಶದ ಅಭಿವೃದ್ಧಿ ನಿಂತಿದೆ. ವಿಶಾಲವಾದ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಕಾಣುತ್ತೇವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಪ್ರಪಂಚದಲ್ಲಿ ಬದುಕಿಗೆ ಶಿಕ್ಷಣ, ಸಂಸ್ಕಾರ ಮುಖ್ಯವಾಗಿದ್ದು, ಶಿಕ್ಷಣ ನೀತಿ ಮೇಲೆ ಆ ದೇಶದ ಅಭಿವೃದ್ಧಿ ನಿಂತಿದೆ. ವಿಶಾಲವಾದ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಕಾಣುತ್ತೇವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಝಳಕಿ ಗ್ರಾಮದಲ್ಲಿ ನಿರ್ಮಿಸಿದ ಪಾಲಟೆಕ್ನಿಕ್‌ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳು ಅಭಿವೃದ್ಧಿಯಾದರೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಇದಕ್ಕಾಗಿ ಸರ್ಕಾರಗಳು ಸಹಾಯ, ಸಹಕಾರ ನೀಡಿವೆ ಎಂದರು.ಶಿಕ್ಷಣ ತಜ್ಞರು ನೀಡಿದ ಮಾಹಿತಿಯಂತೆ ಸರ್ಕಾರಗಳು ಶಿಕ್ಷಣ ನೀತಿ, ನಿಯಮ ರೂಪಿಸುತ್ತದೆ. 6 ವರ್ಷದಿಂದ ಆರಂಭಗೊಂಡ ಈ ಕಟ್ಟಡ ಬಹಳ ದಿನಗಳು ಕಾಲ ನಿರ್ಮಾಣವಾಗಿದೆ. ಇದು ನೊವಿನ ಸಂಗತಿ. ಒಂದು ವರ್ಷದ ಒಳಗಾಗಿ ಮುಗಿಯಬೇಕಾದ ಈ ಕಟ್ಟಡ ದೀರ್ಘಕಾಲದವರೆಗೆಯಾದರೇ ಮಕ್ಕಳ ಅನುಕೂಲಕ್ಕೆ ಹೇಗೆ ಸಾಧ್ಯ?. ಈ ರೀತಿಯ ಅವಾಂತರಗಳು ನಡೆಯಬಾರದು. ಹೌಸಿಂಗ್‌ ಬೊರ್ಡ್‌, ನಿರ್ಮಿತಿ ಕೇಂದ್ರ, ಲ್ಯಾಂಡ್‌ ಆರ್ಮಿ, ಕೆಲಸಗಳ ಬಗ್ಗೆ ಸಮಾಧಾನವಿಲ್ಲ. ಲೋಕೊಪಯೋಗಿ ಇಲಾಖೆ ಸ್ವಲ್ಪಮಟ್ಟದಲ್ಲಿ ಉತ್ತಮ ಗುಣಮಟ್ಟದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.ಶಿಕ್ಷಣ ಸಂಸ್ಥೆಗಳಿಗೆ ನೀಡುವ ಭೂಮಿಧಾನ ಶ್ರೇಷ್ಠಧಾನವಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರದ್ದಾಗಿದೆ. ಗ್ರಾಮಸ್ಥರು ನೀಡಿದ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸುವ ಕುರಿತು ಭರವಸೆ ನೀಡಿದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ದೇಶ, ಭಾಷೆ, ಸಂಸ್ಕೃತಿ, ನೆಲ, ಜಲದ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಶಿಕ್ಷಕರಲ್ಲಿ ಸಮಯ ಪಾಲನೆ ಮತ್ತು ಸದಾ ಓದುವ ಹವ್ಯಾಸ ಬೆಳೆಸಿಕೊಳ್ಳುವ ರೂಢಿಯಾಗಬೇಕು. ಮಕ್ಕಳು ದೇವರ ಸಮಾನ ಸರಿಯಾಗಿ ಪಾಠ ಪ್ರವಚನ ಮಾಡಿದರೇ ಭಗವಂತ ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಕರುಣಿಸುತ್ತಾನೆ. ಪ್ರತಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಸರ್ಕಾರದ ಜೊತೆ ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಎಸಿ ಅಬೀದ್‌ ಗದ್ಯಾಳ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ್‌ ಮೋಮಿನ್, ಎಸ್.ಎಸ್.ಬಿರಾದಾರ, ಪ್ರಾಚಾರ್ಯ ಎಸ್.ಬಿ.ಜವಳಿ, ರುಕ್ಮುದೀನ್‌ ತದ್ದೇವಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಣ್ಣಪ್ಪ ತಳವಾರ, ಶಿವಯೋಗೇಪ್ಪ ಚನಗೊಂಡ, ಸದಾಶಿವ ಪ್ಯಾಟಿ, ಸತೀಶ ಹತ್ತಿ, ನೀಲಕಂಠ ರೂಗಿ, ಅಣ್ಣಪ್ಪ ತಳವಾರ, ರಾಘವೇಂದ್ರ ಕಾಪ್ಸೆ, ಹಣಮಂತ ಕೋಳಿ, ಶಂಕರಗೌಡ ಪಾಟೀಲ, ಶಿಕ್ಷಕ ಅರಳಿ, ಶ್ರೀಶೈಲ ಬನಸೋಡೆ, ಶೇಖರ ನಾಯಕ ಮೊದಲಾದವರು ಇದ್ದರು.

ತಾಲೂಕಿನ ಭವಿಷ್ಯ ಬದಲಾವಣೆ ಮಾಡುವ ಚಿಂತನೆಯನ್ನು ಇಟ್ಟುಕೊಂಡು ರಾಜಕಾರಣ ಮಾಡಿದ್ದೇನೆ. ಅಪರಾಧ ಪ್ರದೇಶ ಎಂಬ ಹಣೆಪಟ್ಟಿ ಕಳಚುವ ಕೆಲಸ ಮಾಡಿದ್ದೇನೆ. ರಾಷ್ಟ್ರ ನಾಯಕರ ಚಿಂತನೆಯ ತಳಹದಿಯ ಮೇಲೆ ಚಿಂತೆನಯನ್ನು ಇಟ್ಟುಕೊಂಡು ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಈ ಭಾಗ ಬೆಳೆವಣಿಯಾಗಲಿ.

-ಯಶವಂತರಾಯಗೌಡ ಪಾಟೀಲ,

ಶಾಸಕರು.

PREV