ಅಜ್ಜಂಪುರ, ಸಮಾಜದ ಪ್ರಗತಿಗೆ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಪತ್ರಿಕೆಗಳು ಮತ್ತು ಪತ್ರಕರ್ತರು ಈ ಸಮಾಜದ ಸಾಕ್ಷಿ ಪ್ರಜ್ಞೆಗಳು ಎಂದು ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ ಎನ್ ಮಹೇಶ್ ಅಭಿಪ್ರಾಯಪಟ್ಟರು.
ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಅಜ್ಜಂಪುರಸಮಾಜದ ಪ್ರಗತಿಗೆ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಪತ್ರಿಕೆಗಳು ಮತ್ತು ಪತ್ರಕರ್ತರು ಈ ಸಮಾಜದ ಸಾಕ್ಷಿ ಪ್ರಜ್ಞೆಗಳು ಎಂದು ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ ಎನ್ ಮಹೇಶ್ ಅಭಿಪ್ರಾಯಪಟ್ಟರು.ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು. ಪತ್ರಿಕಾರಂಗ ಸರ್ಕಾರದ ನಾಲ್ಕು ಅಂಗಗಳಲ್ಲಿ ಒಂದಾಗಿದ್ದು ಅವರ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಸರ್ಕಾರ ಕಲ್ಪಿಸ ಬೇಕಾಗಿದೆ ಎಂದು ತಿಳಿಸಿದರು.ಸಮಾರಂಭ ಉದ್ಘಾಟಿಸಿದ ಶಾಸಕ ಜಿ ಎಚ್ ಶ್ರೀನಿವಾಸ್ ಮಾತನಾಡಿ ಸರ್ಕಾರ ಜನಪ್ರತಿನಿಧಿ ಅಧಿಕಾರಿಗಳನ್ನು ಸುದ್ದಿಯ ಮೂಲಕ ಎಚ್ಚರಿಸುತ್ತಿರುವ ಕಾರ್ಯ ನಿರಂತರವಾಗಿದ್ದು ಜೊತೆಗೆ ಸುದ್ದಿಯ ನಿಖರತೆಗೆ ಹೆಚ್ಚು ಒತ್ತು ಕೊಡಬೇಕು ಎಂದರು. ಪತ್ರಕರ್ತರಿಗೆ ಬಸ್ ಪಾಸ್ ಮತ್ತು ನಿವೇಶನ ಹಂಚಿಕೆಯಲ್ಲಿ ನಮ್ಮಸಹಕಾರವಿರುತ್ತದೆ. ಪತ್ರಕರ್ತರು ಎಲ್ಲರೂ ಒಗ್ಗಟ್ಟಾಗಿದ್ದರೆ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆಯಬಹುದು ಎಂದರು.ಜಿಲ್ಲಾ ಸಂಘದ ಅಧ್ಯಕ್ಷ ಟಿ ಎನ್ ಎ ಮೊದಲಿಯರ್, ಪತ್ರಕರ್ತರು ಹೆಚ್ಚು ಅಧ್ಯಯನ ಮಾಡಬೇಕು. ದೃಶ್ಯ ಮಾದ್ಯಮದ ಹೊರತಾಗಿ ನಿಖರ ಸುದ್ದಿಯ ಮೂಲಕ ಪತ್ರಿಕೆಗಳು ಜನರ ವಿಶ್ವಾಸಗಳಿಸಿವೆ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ತಾಲೂಕು ಘಟಕದ ಅಧ್ಯಕ್ಷ ಹೆಬ್ಬೂರು ಶಿವಣ್ಣ ಮಾತನಾಡಿ ಪತ್ರಕರ್ತರಿಗೆ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು. ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ರಾಜ್ಯ ಸಮಿತಿ ಅಧ್ಯಕ್ಷ ಸುರೇಶ್ಚಂದ್ರ ಮಾತನಾಡಿದರು. ಭಕ್ತನಕಟ್ಟೆ ಲೋಕೇಶ್ ಮತ್ತು ತಂಡ ಜಾನಪದ ಗೀತೆ ಹಾಡಿ ಸಭೆಯನ್ನು ರಂಜಿಸಿದರು. ಕಾಂಗ್ರೇಸ್ ನಗರ ಘಟಕದ ಅಧ್ಯಕ್ಷ ತಿಪ್ಪೆಶ್ ಮಡಿವಾಳ್, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಎಂ ಜೆ ಕುಮಾರ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಮುಖಂಡ ನಿರಂಜನ್ ಪಟೀಲ್, ರಿಯಾಬ್ ಅಹಮ್ಮದ್, ಎಚ್ ಗುರುಮೂರ್ತಿ, ನಾಗರಾಜ್ ವೆಂಕಟೇಶ್, ಎಸ್ ಮಹೇಂದ್ರಸ್ವಾಮಿ, ಸಿ ಆರ್ ಬಸವರಾಜ್ ನಾಗೇಶ್, ಪ್ರಸನ್ನ ಕುಮಾರ್ ಎಸ್ ಬಿ ಶಾಂತಕುಮಾರ್ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.