ಕನ್ನಡಪ್ರಭ ವಾರ್ತೆ ಮೋಳೆ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ನಮ್ಮ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಯ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತರಲಾಗಿದ್ದು, ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು. ಸಾರ್ವಜನಿಕರು ಕಳಪೆ ಕಾಮಗಾರಿಯ ಬಗ್ಗೆ ನಿಗಾವಹಿಸಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.
ಕನ್ನಡಪ್ರಭ ವಾರ್ತೆ ಮೋಳೆ
ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ನಮ್ಮ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಯ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತರಲಾಗಿದ್ದು, ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು. ಸಾರ್ವಜನಿಕರು ಕಳಪೆ ಕಾಮಗಾರಿಯ ಬಗ್ಗೆ ನಿಗಾವಹಿಸಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ₹ 30 ಕೋಟಿ ವೆಚ್ಚದ ಕಾಗವಾಡ-ಉಪ್ಪಾರವಾಡಿಯಿಂದ- ಉಗಾರ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಾರ್ವಜನಿಕರು ಕಾಮಗಾರಿಯ ಗುಣಮಟ್ಟದಲ್ಲಿ ಕಳಪೆ ಕಾಮಗಾರಿ ಕಂಡು ಬಂದರೇ ತಕ್ಷಣವೇ ಕಾಮಗಾರಿ ಬಂದ್ ಮಾಡಿ, ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ನನ್ನ ಗಮನಕ್ಕೆ ತನ್ನಿ ಎಂದು ಸಾರ್ವಜನಿಕರಿಗೆ ತಿಳಿಸಿದರು.ಸಾರ್ವಜನಿಕರು ಕಟ್ಟಿದ ತೆರಿಗೆ ಹಣದಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತವೆ. ಆದ್ದರಿಂದ, ಸಾರ್ವಜನಿಕರು ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು ಕಳಪೆ ಆಗದಂತೆ ನೋಡಿಕೊಳ್ಳಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಸಾಕಷ್ಟು ಅನುದಾನ ತರಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ತಂದು. ಮತ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಹುಲ ಶಹಾ, ವಿಫುಲ ಪಾಟೀಲ, ಸೌರಭ ಪಾಟೀಲ, ಜ್ಯೋತಿಕುಮಾರ ಪಾಟೀಲ, ವಿನೋದ ಬರಗಲೆ, ರಾಹುಲ ಕಟಗೇರಿ, ವೃಷಭ ಚೌಗುಲಾ, ಪ್ರಕಾಶ ಮಾಳಿ, ಕುಮಾರ ಪಾಟೀಲ, ಭರತ ನಾಂದ್ರೆ, ಶ್ರೀನಿವಾಸ ಕಾಂಬಳೆ, ಸಂಜಯ ಮುಕುಂದ, ಸಂಪತ್ತಿ ಹೊನಕಾಂಬಳೆ, ರಮೇಶ ರತ್ನಪ್ಪಗೋಳ, ಮಹಾದೇವ ಕಲಾಲ, ಶೀತಲ ಹೆರ್ಲೆಕರ, ಪ್ರಕಾಶ ಮಾಳಿ, ನಜೀರ ಮುಲ್ಲಾ, ಅನೀಲ ಢಾಲೆ, ಬಾಳಾಸಾಬ ಜಿರಗಾಳೆ, ವೀರಭದ್ರ ಕಟಗೇರಿ, ಗುತ್ತಿಗೆದಾರರಾದ ಸಹ್ಯಾದ್ರಿ ಕನ್ಸಟ್ರಕ್ಸನ್ ಚಂದ್ರಕಾಂತ ನಲವಡೆ, ಸಾಗರ ಸಗರೆ, ಲೋಕೋಪಯೋಗಿ ಇಲಾಖೆಯ ಎಇಇ ಜಯಾನಂದ ಹಿರೇಮಠ, ಮಲ್ಲಿಕಾರ್ಜುನ ಮಗದುಮ್ಮ ಸೇರಿದಂತೆ ಕಾಗವಾಡ, ಶೇಡಬಾಳ, ಉಗಾರ ಪಟ್ಟಣದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. ಕೋಟ್
ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವನ್ನು ಸ್ಥಳೀಯ ಜನಪ್ರತಿನಿಧಿಗಳು ಪರಿಶೀಲಿಸುವ ಮೂಲಕ ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಯೋಜನೆಗಳನ್ನು ತರುವುದು ಮಾತ್ರ ನನ್ನ ಕೆಲಸ. ಆದರೆ ಕೆಲಸ ನಡೆಯುವ ಸ್ಥಳದಲ್ಲಿ ಸ್ಥಳೀಯರು, ಜನಪ್ರತಿನಿಧಿಗಳು ನಿಗಾವಹಿಸಬೇಕು. ಗುಣಮಟ್ಟ ಪರಿಶೀಲಿಸಿ ಕಳಪೆಯಾದಲ್ಲಿ ಅಧಿಕಾರಿಗಳು ಅಥವಾ ನನ್ನ ಗಮನಕ್ಕೆ ತನ್ನಿ.ರಾಜು ಕಾಗೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.