ಮೋದಿ ಸಹಕಾರದಿಂದ ಜಿಲ್ಲೆಯ ಅಭಿವೃದ್ಧಿ ಸಾಕಾರ

KannadaprabhaNewsNetwork |  
Published : Aug 17, 2025, 01:36 AM ISTUpdated : Aug 17, 2025, 01:37 AM IST
ಪೋಟೋ: 16ಎಸ್‌ಎಂಜಿಕೆಪಿ06ಶಿವಮೊಗ್ಗದಲ್ಲಿ ಶನಿವಾರ ನಡೆದ ಪತ್ರಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಕಾರಗೊಳ್ಳುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ: ಜಿಲ್ಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಕಾರಗೊಳ್ಳುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜನಪ್ರತಿನಿಧಿಯಾಗಿ ಜನರಿಗೆ ಉತ್ತರದಾಯಿಯಾಗಿರಬೇಕು. ನನ್ನ ಆಸೆ ಮತ್ತು ಜನರ ಅಪೇಕ್ಷೆಯಂತೆ ಶಿವಮೊಗ್ಗ ಜಿಲ್ಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವ ನಿಟ್ಟನಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದರೆ ಜಿಲ್ಲೆ ತನ್ನಿಂದ ತಾನೇ ಅಂತರರಾಷ್ಟ್ರೀಯಮಟ್ಟಕ್ಕೆ ಗುರುತಿಸಲ್ಪಡುತ್ತದೆ. ಅದು ಪ್ರವಾಸೋದ್ಯಮದಲ್ಲಿರಬಹುದು, ಕೈಗಾರಿಕೆಯಲ್ಲಿರಬಹುದು. ರೈಲ್ವೆ, ಏರ್‌ಬೇಸ್ ಯೋಜನೆಗಳಿರಬಹುದು. ಶಿವಮೊಗ್ಗ ಜಿಲ್ಲೆಗೆ ಯಾರೆ ಬಂದರೂ ನೆಮ್ಮದಿಯಿಂದ ಇರುವಂತೆ ಅಭಿವೃದ್ಧಿ ಮಾಡುವ ಪ್ರಯತ್ನ ನಡೆದಿದೆ ಎಂದರು.ಜಿಲ್ಲೆಯಲ್ಲಿ ಶರಾವತಿ ನದಿ ಪ್ರದೇಶದಲ್ಲಿ ವಾಟರ್ ಬೇಸ್ ಅಭಿವೃದ್ಧಿಗೆ ಚಿಂತನೆ ನಡೆದಿದೆ. ಎಲ್ಲಾ ಕಾಲದಲ್ಲೂ ನೀರು ಇದ್ದು ಕ್ರೂಸ್, ಬೊಟ್‌ಗಳು ಓಡಾಡುವಂತೆ ಜಲಸಂಚಾರ ಮೂಲಗಳನ್ನು ಗುರುತಿಸುವ ಕೆಲಸ ಆಗುತ್ತಿದೆ ಎಂದರು.

೧೦೦ ಕೋಟಿ ರು. ವೆಚ್ಚದಲ್ಲಿ ರೈಲ್ವೆ ಕೋಚಿಂಗ್ ಕೆಲಸ:

ಕೋಟೆ ಗಂಗೂರಿನಲ್ಲಿ ೧೦೦ ಕೋಟಿ ರು ವೆಚ್ಚದಲ್ಲಿ ರೈಲ್ವೆ ಕೋಚಿಂಗ್ ಕೆಲಸ ನಡೆಯುತ್ತಿದೆ. ಇದರಿಂದ ಪ್ರಮುಖ ರೈಲುಗಳು ಈ ಡೀಪೋದಿಂದಲೆ ಓಡಾಡುವ ಮತ್ತು ಶಿವಮೊಗ್ಗಕ್ಕೆ ಸಂಪರ್ಕ ಪಡೆಯಲಿವೆ. ಮೈಸೂರು, ಬೆಂಗಳೂರು ಜಂಕ್ಷನ್‌ಗಳಲ್ಲಿ ಒತ್ತಡ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪ್ರಮುಖ ರೈಲುಗಳನ್ನು ಶಿವಮೊಗ್ಗಕ್ಕೆ ತಿರುಗಿಸುವ ನಿಟ್ಟಿನಲ್ಲಿ ಈಗಾಗಲೇ ಯೋಜನೆಯ ಸಿದ್ಧಗೊಳ್ಳುತ್ತಿದೆ ಎಂದು ತಿಳಿಸಿದರು.ವಿಶೇಷವಾಗಿ ತಾಳಗುಪ್ಪ-ಹೊನ್ನಾವರ, ತಾಳಗುಪ್ಪ-ಸಿದ್ದಾಪುರ ನಡುವೆ ರೈಲು ಮಾರ್ಗಕ್ಕೆ ಸರ್ವೆ ಆಗಿ, ವರದಿಯೂ ಬಂದಿದೆ. ತಾಳುಗುಪ್ಪ-ಸಿದ್ದಾಪುರ ನಡುವಿನ ಮಾರ್ಗ ವಾಣಿಜ್ಯ ದೃಷ್ಟಿಯಿಂದ ಶೇ.80ರಷ್ಟು ಕಾರ್ಯಸಾಧುವಾಗಿದ್ದರೆ. ತಾಳಗುಪ್ಪ-ಹೊನ್ನಾಪುರ ಶೇ.೮ ಮೈನಸ್ ತೋರಿಸುತ್ತಿದೆ. ತಾಳಗುಪ್ಪ-ಹೊನ್ನಾವರ ಮಾರ್ಗ ನಿರ್‍ಮಾಣ ವೆಚ್ಚ ಹೆಚ್ಚಾದರೂ ಅದನ್ನು ಮಾಡಲೇಬೇಕು ಎಂದು ನಾನು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ರೈಲ್ವೆ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಈ ಸಂಬಂಧ ರೈಲ್ವೆ ಅಧಿಕಾರಿಗಳು ಹೋಂ ವರ್ಕ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ- ಹರಿಹರ ರೈಲ್ವೆ ಮಾರ್ಗಕ್ಕೆ ರಾಜ್ಯ ಸರ್ಕಾರದ ಅಸಹಕಾರದಿಂದ ರದ್ದುಗೊಳಿಸುವುದಾಗಿ ರೈಲ್ವೆ ಸಚಿವರು ಹೇಳಿದ್ದಾರೆ. ನಾನು ರಾಜ್ಯ ಸರ್ಕಾರದ ಸಂಪರ್ಕದಲ್ಲಿದ್ದೇನೆ. ಕೇಂದ್ರ ಸಚಿವರಿಗೆ ಮನವೊಲಿಸಿ ಈ ಯೋಜನೆ ಕಾರ್ಯಗತಗೊಳಿಸಲಾಗುವುದು. ಶಿಕಾರಿಪುರ -ರಾಣೆಬೆನ್ನೂರು ರೈಲು ಮಾರ್ಗಕ್ಕೆ 25 ಕೋಟಿ ರು. ಬಿಡುಗಡೆ ಆಗಿದೆ. ಇನ್ನೂ ಬಾಕಿ 75 ಕೋಟಿ ರು. ಬರಬೇಕಿದೆ. ಅದನ್ನು ತರುವಲ್ಲಿ ಪ್ರಯತ್ನ ಮಾಡುತ್ತಿದ್ದೇನೆ ಎಂದರು.ಡಿಸೆಂಬರ್ ವೇಳೆಗೆ ವಿಐಎಸ್‌ಎಲ್ ಕಾರ್ಯಾರಂಭ:

ವಿಐಎಸ್‌ಎಲ್ ಈಗ ಡಿಸ್ ಇನ್ವೆಸ್ಟ್ ಮೆಂಟ್ ಸ್ಥಿತಿಯಲ್ಲಿದ್ದರೂ ಸೈಲ್ ನಿಮದ ಹಂತ ಹಂತವಾಗಿ ಬಂಡವಾಳ ಹೂಡಿಕೆ ಮಾಡಿ ಮುನ್ನಡೆಸಲು ತೀರ್‍ಮಾನಿಸಲಾಗಿದೆ. ಈ ಬಗ್ಗೆ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಡಿಸೆಂಬರ್ ವೇಳೆಗೆ ಕಾರ್ಖಾನೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದರು.ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸುವೆ:

ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಸಂಚಾರಕ್ಕೆ ಪೂರಕವಾದ ಕೆಲಸ ನಡೆಯುತ್ತಿದೆ. ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು. ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 2500 ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗಳು ನಡೆಯಬೇಕಿದೆ, ಕೊಲ್ಲೂರು ಕಾರಿಡಾರ್‌ಗೆ 150 ಕೋಟಿ ರು.ಗಳ ಮಂಜೂರಾಗಿದ್ದು, ಕುಂದಾಪುರ ಮತ್ತು ಗಂಗೊಳ್ಳಿ ನಡುವೆ ನದಿಗೆ ಸೇತುವೆ ನಿರ್‍ಮಾಣಕ್ಕೆ ಬಂದರು ಮತ್ತು ಜಲಸಂಪನ್ಮೂಲ ಸಚಿವಾಲಯದಿಂದ ಎನ್‌ಓಸಿ ಸಿಕ್ಕಿದೆ. ಇದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಜೆಡಿಎಸ್‌ನ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಎಸ್.ದತ್ತಾತ್ರಿ, ಟಿ.ಡಿ.ಮೇಘರಾಜ್, ಸಿ.ಎಚ್.ಮಾಲತೇಶ್, ಕೆ.ವಿ.ಅಣ್ಣಪ್ಪ, ಕೆ.ಜಿ.ಕುಮಾರಸ್ವಾಮಿ, ಅಶೋಕ್ ನಾಯ್ಕ ಸೇರಿದಂತೆ ಬಿಜೆಪಿ, ಜೆಡಿಎಸ್‌ನ ಪ್ರಮುಖರು ಸೇರಿದಂತೆ ವಿವಿಧ ಸಂಘಟನೆಗಳು ಮುಖಂಡರು ರಾಘವೇಂದ್ರ ಅವರಿಗೆ ಶುಭಕೋರಿದರು.

"ಜನ ಕೊಟ್ಟ ಬೆಂಬಲಕ್ಕೆ ಉತ್ತರದಾಯಿಯಾಗಿದ್ದೇನೆ "

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಗೆಲುವಿನ ಅಂತರ ೫೨ ಸಾವಿರ ಇತ್ತು, ಈಗ ೨.೫೦ ಲಕ್ಷದ ಹತ್ತಿರ ಬಂದಿದೆ. ಇದಕ್ಕೆ ಕಾರಣ ನರೇಂದ್ರ ಮೋದಿ ಕೊಟ್ಟ ಸಹಕಾರದಿಂದ ಆದ ನಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ, ಮತ್ತು ಮಾಜಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಕೊಟ್ಟ ಅಭಿವೃದ್ಧಿಕಾರ್ಯ, ಜೆಡಿಎಸ್-ಬಿಜೆಪಿ ಹೊಂದಾಣಿಕೆಯ ಬಲ. ವಿಶೇಷವಾಗಿ ಪಕ್ಷದ ಸಂಘಟನೆ-ಹಾರೈಕೆಯಿಂದ ಗೆಲುವ ಸಾಧ್ಯವಾಯಿತು. ಜನರು ಕೊಟ್ಟ ಬೆಂಬಲಕ್ಕೆ ನಾನು ಉತ್ತರದಾಯಿಯಾಗಿದ್ದೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶರಾವತಿ ಪಂಪ್ಟ್ ಸ್ಟೋರೆಜ್ ವಿರೋಧಿಸುತ್ತೇವೆ. ಪರಿಸರ ನಾಶ ಆಗುವುದು ಸರಿಯಲ್ಲ. ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯನ್ನು 388 ಚದುರ ಕಿ.ಮೀ ಕಡಿತಗೊಳಿಸಿ ಪರಿಹರಿಸಲಾಗಿದೆ. ಅರಣ್ಯ ಇಲಾಖೆಯಲ್ಲಿದ್ದ ಕಂದಾಯ ಜಾಗವನ್ನು ಬಿಡಿಸಲಾಗಿದೆ. ಈ ಬಗ್ಗೆ ಹಲವು ವಿರೋಧಗಳು ಕೂಡ ಇವೆ. ಪರಿಸರಕ್ಕೂ ನಾಶವಾಗುತ್ತದೆ. ಉತ್ಪಾದನೆಯ ಖರ್ಚು ಕೂಡ ಹೆಚ್ಚಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ