ರಟ್ಟೀಹಳ್ಳಿ:ಕಳೆದ ಎರಡು ಅವಧಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿನ ಶಿಕ್ಷಕರ, ಪದವೀಧರ ನಿರುದ್ಯೋಗಿಗಳ ಪರ ಹಾಗೂ ಎಲ್ಲ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಹಾಗೂ ನಿವೃತ್ತ ನೌಕರರ ಪರ ಧ್ವನಿಯಾಗಿ ಕಾರ್ಯನಿರ್ವಹಿಸಿ ಅವರ ವಿಶ್ವಾಸ ಹಾಗೂ ಅಭಿವೃದ್ಧಿಯೇ ನನ್ನ ಮೂರನೆ ಬಾರಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ವಿ. ಸಂಕನೂರ ವಿಶ್ವಾಸ ವ್ಯಕ್ತಪಡಿಸಿದರು.
ಇದೊಂದು ಪ್ರಜ್ಞಾವಂತರ ಚುನಾವಣೆಯಾಗಿದ್ದು, ಪ್ರಜ್ಞಾವಂತರು ಮತದಾನ ಮಾಡುತ್ತಾರೆ ಆದರೆ ದುರ್ದೈವ ಎಂದರೆ ಕಳೆದ ಚುನಾವಣೆಯಲ್ಲಿ ಸುಮಾರು 6 ಸಾವಿರ ಮತಗಳು ಅಸಿಂಧುವಾಗಿದೆ. ಈ ಬಾರಿ ಅತೀ ಎಚ್ಚರಿಕೆಯಿಂದ ಮತದಾನ ಮಾಡಿ ಎಂದು ಮನವಿ ಮಾಡಿದರು.
ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದ ಚಿತ್ರಣವೇ ಬದಲಾಗಿದೆ. ವಿಶ್ವವೇ ಭಾರತವನ್ನು ಅಚ್ಚರಿಯಿಂದ ನೋಡುವ ಮೂಲಕ ವಿಶ್ವ ನಾಯಕ ಎಂದು ಅಪ್ಪಿಕೊಂಡಿವೆ. ಈ ಹಿಂದೆ ಭಾರತ ಆರ್ಥಿಕತೆ 11 ಸ್ಥಾನದಲ್ಲಿತ್ತು. ಪ್ರಸ್ತುತ 4ನೇ ಸ್ಥಾನಕ್ಕೆ ಬಂದಿದ್ದು, ಇನ್ನೊಂದು ವರ್ಷದಲ್ಲಿ 3ನೇ ಸ್ಥಾನಕ್ಕೆ ಬರುವುದಿದೆ. ಅಲ್ಲದೇ 2047ಕ್ಕೆ ಇಡೀ ವಿಶ್ವದಲ್ಲಿ ನಂ. ಒಂದನೇ ಸ್ಥಾನಕ್ಕೆರುವ ಕನಸು ಕಾಣುತ್ತಿದೆ ಎಂದರು.ಭಾರತದ ಬೆಳವಣಿಗೆಯನ್ನು ಸಹಿಸದ ಕೆಲ ದೇಶಗಳು ಭಾರತದಲ್ಲಿ ಅರಾಜಕತೆ ಸೃಷ್ಟಿಸಿ ಆರ್ಥಿಕತೆಯನ್ನು ಕುಗ್ಗಿಸುವಂತ ಕೆಲಸಕ್ಕೆ ಕೈ ಹಾಕಿವೆ. ದೇಶ ದ್ರೋಹಿ ಕಾಂಗ್ರೆಸ್ ಕೂಡ ಒಂದು ಸಣ್ಣ ಜಿರಳೆ ಹಿಂದೆ ಬಿದ್ದು ದೇಶದ್ರೋಹ ಕೆಲಸಕ್ಕೆ ಕೈ ಹಾಕಿವೆ. ಆದ್ದರಿಂದ ದೇಶ ಸುಭದ್ರವಾಗಿರಬೇಕು ಎಂದರೆ ಬಿಜೆಪಿಗೆ ಬೆಂಬಲ ಸೂಚಿಸಿಬೇಕು ಎಂದು ಮನವಿ ಮಾಡಿದರು.
ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಮಂಡಲ ಅಧ್ಯಕ್ಷ ದೇವರಾಜ ನಾಗಣ್ಣನವರ, ಪಟ್ಟಣ ಪಂಚಾಯತ್ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಸಿದ್ದರಾಜ ಕಲಕೋಟಿ, ಸಂದೀಪ್ ಪಾಟೀಲ್, ಎಸ್.ಸಿ. ಮೋರ್ಚಾ ಅಧ್ಯಕ್ಷ ಹನಮಂತಪ್ಪ ಗಾಜೇರ್, ಎಸ್.ಟಿ. ಮೋರ್ಚಾ ಅಧ್ಯಕ್ಷ ಮಹೇಶ ತಿಪ್ಪಣ್ಣನವರ, ಬಸವರಾಜ ಆಡಿನವರ, ಆರ್.ಎನ್. ಗಂಗೋಳ, ರಾಜು ಬಟ್ಲಕಟ್ಟಿ, ಶಂಭಣ್ಣ ಗೂಳಪ್ಪನವರ, ಸುಶೀಲ್ ನಾಡಿಗೇರ, ಕಾವ್ಯ ಪಾಟೀಲ್, ಸರೋಜಾ ಹುರಕಡ್ಲಿ ಮುಂತಾದವರು ಇದ್ದರು.