ಸಂಪತ್ ತರೀಕೆರೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) 3,546 ಎಕರೆ ಭೂಮಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಖಾಸಗಿ ಲೇಔಟ್, ಕಂದಾಯ ಲೇಔಟ್‌ಗಳ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಪುರೋಭಿವೃದ್ಧಿ ತೆರಿಗೆ (ಬೆಟರ್‌ಮೆಂಟ್ ಟ್ಯಾಕ್ಸ್) ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
2018ಕ್ಕೂ ಮೊದಲೇ ನಿರ್ಮಾಣಗೊಂಡಿರುವ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೀಘ್ರದಲ್ಲೇ ಬಿಡಿಎ ಪುರೋಭಿವೃದ್ಧಿ ತೆರಿಗೆ ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರು ಈ ತೆರಿಗೆ ಪಾವತಿಸಿದ ನಂತರವೇ ಖಾತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರಾಧಿಕಾರದ ಮೂಲಗಳು ಮಾಹಿತಿ ನೀಡಿವೆ.ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗದಿಪಡಿಸಿರುವ 2018ನೇ ಸಾಲಿನ ವಸತಿ ಉದ್ದೇಶದ ನಿವೇಶನ ಮೌಲ್ಯ ಹಾಗೂ 2024ನೇ ಸಾಲಿನ ವಸತಿ ಉದ್ದೇಶದ ನಿವೇಶನ ಮೌಲ್ಯದಲ್ಲಿನ ವ್ಯತ್ಯಾಸದ ಮೊತ್ತದ 1/3 ರಷ್ಟು ಮೌಲ್ಯವನ್ನು ಪುರೋಭಿವೃದ್ಧಿ ತೆರಿಗೆಯಾಗಿ ವಿಧಿಸಬೇಕು ಅದಕ್ಕೆ ಸ್ವತ್ತಿನ ವಸತಿ ಮತ್ತು ವಾಣಿಜ್ಯ ಉಪಯೋಗದ ಅಂಶವನ್ನು ಗಮನದಲ್ಲಿರಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯಿದೆ ಅನ್ವಯ ದರ ವಿಧಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಲಾಗಿದೆ.
ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಸೋಮಶೆಟ್ಟಿಹಳ್ಳಿ, ಬೈಲಕೆರೆ, ಗಾಣಿಗರಹಳ್ಳಿ, ದೊಡ್ಡ ಬೆಟ್ಟಹಳ್ಳಿ, ಹಾರೋಹಳ್ಳಿ, ವಡೇರಹಳ್ಳಿ ಸೇರಿದಂತೆ 17 ಹಳ್ಳಿಗಳಲ್ಲಿ ನ್ಯಾ. ಚಂದ್ರಶೇಖರ್ ಸಮಿತಿಯು ಸಕ್ರಮಗೊಳಿಸಿರುವ 5171 ಕಟ್ಟಡಗಳ ಮಾಲೀಕರು ಪುರೋಭಿವೃದ್ಧಿ ತೆರಿಗೆ ದರವನ್ನು ಪಾವತಿಸಿ ಖಾತೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕೆಂಪಾಪುರದಲ್ಲಿ ಹೆಚ್ಚು ತೆರಿಗೆ
ಗ್ರಾಮದ ಹೆಸರುಪ್ರತಿ ಚ.ಮೀಟರ್ ತೆರಿಗೆ ದರಪ್ರತಿ ಚದರ ಅಡಿ ತೆರಿಗೆ ದರ
ಗಾಣಿಗರಹಳ್ಳಿ5,000465
ರಾಮಗೊಂಡನಹಳ್ಳಿ11,0671,028
ಕೆಂಪಾಪುರ12,3671,149
ಆವಲಹಳ್ಳಿ6042 561ಹಾರೋಹಳ್ಳ1790166
ಮೇಡಿ ಅಗ್ರಹಾರ 667 62ಶಾಮರಾಜಪುರ1833 170
ವೀರಸಾಗರ 73368ವಡೇರಹಳ್ಳಿ83377
ಕೆಂಪನಹಳ್ಳಿ465 43ಜೆ.ಬಿ. ಕಾವಲ್ 2000186
ಕಾಳತಮ್ಮನಹಳ್ಳಿ1,167180ಲಕ್ಷ್ಮೀಪುರ5000 465
ಗುಣಿ ಅಗ್ರಹಾರ 2,333217