ವಿಶೇಷ ಅನುದಾನವಿಲ್ಲದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ; ಶರ್ಮಿಳಾ ಮಾದನಗೇರಿ

KannadaprabhaNewsNetwork |  
Published : Nov 01, 2025, 02:45 AM IST
ಪೊಟೋ31ಎಸ್.ಆರ್‌.ಎಸ್‌2 (ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿದರು.) | Kannada Prabha

ಸಾರಾಂಶ

ನಗರಭೆಯ 14 ತಿಂಗಳ ಅವಧಿಯಲ್ಲಿ ಸುಮಾರು ₹10 ಕೋಟಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ನಗರಭೆಯ 14 ತಿಂಗಳ ಅವಧಿಯಲ್ಲಿ ಸುಮಾರು ₹10 ಕೋಟಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ಸರ್ಕಾರದ ವಿಶೇಷ ಅನುದಾನವಿಲ್ಲದೇ, ಸಾರ್ವಜನಿಕರ ಸಹಕಾರದಿಂದ ತೆರಿಗೆ ಹಣದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಹೇಳಿದರು.

ಶುಕ್ರವಾರ ನಗರಸಭೆ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಅಧಿಕಾರ ವಹಿಸಿಕೊಂಡ 14 ತಿಂಗಳಿನಲ್ಲಿ ಸಾರ್ವಜನಿಕರು ನೀಡಿದ ತೆರಿಗೆ ಹಣದಲ್ಲಿ ಬೇಡಿಕೆ ಈಡೇರಿಸಿದ್ದೇವೆ ಎಂಬ ತೃಪ್ತಿ ಇದೆ. ವಾರ್ಡ್ ನಂ-1 ರಿಂದ 15 ರವರೆಗೆ ಬೀದಿ ದೀಪ ನಿರ್ವಹಣೆಗೆ ₹43.35 ಲಕ್ಷ, ವಾರ್ಡ್‌ ನಂ-16 ರಿಂದ 31 ವರೆಗೆ ₹35.78 ಲಕ್ಷ , 2024-25 ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಬೀದಿ ದೀಪ ಅಳವಡಿಕೆ ₹25 ಲಕ್ಷ , ಇಂದಿರಾ ಕ್ಯಾಂಟೀನ್‌ಗೆ 20.57 ₹ಲಕ್ಷ, 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ₹1.59 ಕೋಟಿ ಕ್ರಿಯಾ ಯೋಜನೆ ತಯಾರಿಸಿ, ₹199.60 ಲಕ್ಷ ರೂ. ಕೆಲಸದ ಆದೇಶ ನೀಡಲಾಗಿದೆ. 2025-26ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಲ್ಲಿ ₹40 ಲಕ್ಷ, ಸ್ಥಾಯಿ ಸಮಿತಿಯಲ್ಲಿ ₹331.61 ಲಕ್ಷ ಕಾಮಗಾರಿಗಳು, ಸ್ಥಾಯಿ ಸಮಿತಿಯಲ್ಲಿ ₹ 184.88 ಲಕ್ಷ ಕಾಮಗಾರಿಗಳನ್ನು ತೆಗೆದುಕೊಂಡು ₹577.23 ಲಕ್ಷ ಭಾಗರ್ಷ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಸೆ.30 ರಂದು ಸ್ಥಾಯಿ ಸಮಿತಿಯಲ್ಲಿ ₹10.74 ಲಕ್ಷ ಕಾಮಗಾರಿಗಳು, ಅ.18 ರಂದು ಸ್ಥಾಯಿ ಸಮಿತಿಯಲ್ಲಿ ₹50 ಲಕ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ₹25 ಲಕ್ಷ ಸಾಮಗ್ರಿ ನೀಡಲಾಗಿದೆ. ನೈರ್ಮಲ ವಿಭಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಯಂತ್ರಗಳನ್ನು ಅಳವಡಿಸಲಾಗಿದ್ದು, ನನ್ನ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ₹೧೦ ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ರಮಾಕಾಂತ್ ಭಟ್, ರಾಘವೇಂದ್ರ ಶೆಟ್ಟಿ, ನಾಗರತ್ನಾ ಜೋಗಳೇಕರ, ಮುಕ್ತಾ ಶೆಟ್ಟಿ, ಕಿರಣ ಶೆಟ್ಟರ್, ನಾಗರಾಜ ನಾಯ್ಕ ಮತ್ತಿತರರು ಇದ್ದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!