ಕ್ಷೇತ್ರದ ಪ್ರತೀ ಹೋಬಳಿಯ ಗ್ರಾಮಗಳಲ್ಲಿ ಉತ್ತಮ ರಸ್ತೆ, ಕುಡಿಯುವ ನೀರು, ಚರಂಡಿ ಮತ್ತಿತರ ಕಾಮಗಾರಿ ಕೈಗೊಂಡಿದ್ದೇವೆ
ಕೊಟ್ಟೂರು: ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುದಾನ ನೀಡದೇ ತಾರತಮ್ಯ ತೋರುತ್ತಿದ್ದರೂ ಸ್ಥಳೀಯ ಅನುದಾನ ಮತ್ತು ಕೆಕೆಆರ್ಡಿಬಿ ಅನುದಾನದಡಿ ಭರಪೂರದ ಕಾಮಗಾರಿ ಕೈಗೆತ್ತಿಕೊಂಡ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿಕೊಡುತ್ತಿದ್ದೇವೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜ ನಾಯ್ಕ ಹೇಳಿದರು.
ಶನಿವಾರ ಕೊಟ್ಟೂರು ತಾಲೂಕಿನ ಇಟ್ಟಿಗಿ ರಸ್ತೆಯ ಸಂಗಮೇಶ್ವರ ಕ್ರಾಸ್ ಹತ್ತಿರ ಕೊಟ್ಟೂರು–ಇಟ್ಟಿಗಿ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಯ ₹೩೦೦ ಲಕ್ಷಗಳ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಪ್ರತೀ ಹೋಬಳಿಯ ಗ್ರಾಮಗಳಲ್ಲಿ ಉತ್ತಮ ರಸ್ತೆ, ಕುಡಿಯುವ ನೀರು, ಚರಂಡಿ ಮತ್ತಿತರ ಕಾಮಗಾರಿ ಕೈಗೊಂಡಿದ್ದೇವೆ. ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಬಹಳಷ್ಟು ದುರಸ್ತಿಯಲ್ಲಿದ್ದ ಇಟ್ಟಿಗಿ ರಸ್ತೆ ಉತ್ತಮವಾಗಿ ಅಭಿವೃದ್ಧಿಪಡಿಸಲು ಇದೀಗ ಭೂಮಿಪೂಜೆ ಕೈಗೊಂಡಿದ್ದೇವೆ ಎಂದು ಹೇಳಿದರು.
ಪೂಜೆ ಕಾರ್ಯಕ್ರಮದಲ್ಲಿ ಜೆಡಿಎಸ್ ಹಗರಿಬೊಮ್ಮನಹಳ್ಳಿ ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ, ಅಲಬೂರು ಹೇಮಣ್ಣ, ಕುಡಿತಿನಮಗ್ಗಿ ದೇವೇಂದ್ರಗೌಡ, ಸಂಗಮೇಶ್ವರ ರಮೇಶ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.