ಜಮ್ಮು ಕಾಶ್ಮೀರದ ವೈಷ್ಣೋದೇವಿಯಲ್ಲಿ ದೇವಿ ಮಹಾತ್ಮೆ ಯಕ್ಷಗಾನ

KannadaprabhaNewsNetwork | Published : Oct 17, 2023 12:46 AM

ಸಾರಾಂಶ

ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ 30 ಕಲಾವಿದರು ಜಮ್ಮು ಕಾಶ್ಮೀರದ ವೈಷ್ಣೋದೇವಿಗೆ ತೆರಳಿದ್ದು, ನವರಾತ್ರಿಯ ವೈಷ್ಣೋದೇವಿ ಉತ್ಸವ ಸಂದರ್ಭ ಶ್ರೀ ದೇವಿಮಹಾತ್ಮೆ ಯಕ್ಷಗಾನವನ್ನು ಆಡಿ ತೋರಿಸಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ 30 ಕಲಾವಿದರು ಜಮ್ಮು ಕಾಶ್ಮೀರದ ವೈಷ್ಣೋದೇವಿಗೆ ತೆರಳಿದ್ದು, ನವರಾತ್ರಿಯ ವೈಷ್ಣೋದೇವಿ ಉತ್ಸವ ಸಂದರ್ಭ ಶ್ರೀ ದೇವಿಮಹಾತ್ಮೆ ಯಕ್ಷಗಾನವನ್ನು ಆಡಿ ತೋರಿಸಿದರು. ಜಮ್ಮು ಕಾಶ್ಮೀರ ಸರ್ಕಾರದ ಪರವಾಗಿ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಕಲಾವಿದರನ್ನು ಬರ ಮಾಡಿ ಕೊಂಡಿದ್ದರು. ಜಮ್ಮು ಕಾಶ್ಮೀರದಲ್ಲಿ ಪ್ರಥಮ ಬಾರಿಗೆ ಯಕ್ಷಗಾನ ನಡೆದಿದ್ದು, ದಾಖಲೆಯಾಗಿದೆ. ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಪೂರ್ವಭಾವಿಯಾಗಿ ನಡೆದ ಚೌಕಿ ಪೂಜೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this article