ಕನ್ನಡಪ್ರಭ ವಾರ್ತೆ ನ್ಯಾಮತಿ
ರಾಮಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ಆಂಜನೇಯ ಸ್ವಾಮಿ ದೇಗುಲದಲ್ಲಿ ಬೆಳಿಗ್ಗೆ ಗಂಗಾ ಪೂಜೆ, ಶ್ರೀರಾಮತಾರಕ ಹೋಮ, ಆಂಜನೇಯ ಮೂರ್ತಿ, ರಾಮನ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಪೂಜೆ ಸಲ್ಲಿಸಿ ದೇಗುಲದ ಮುಂಭಾಗದಲ್ಲಿ ಬಾಳೆ ಕಂದಿನಿಂದ ನಿರ್ಮಿಸಿರುವ ಮಂಟಪದಲ್ಲಿ ಶ್ರೀ ರಾಮನ ಮೂರ್ತಿ ಕೂರಿಸಿ ಪೂಜಿಸಿದರು. ಭಕ್ತರ ಸಮೂಹವೂ ಪೂಜಿಸಲು ಸುಮಂಗಲಿಯರು ಆಗಮಿಸಿ ಶ್ರೀ ರಾಮನಿಗೆ ಭಕ್ತಿ ಸಮರ್ಪಿಸಿದರು.
ಶ್ರೀ ಪೇಟೆ ಬಸವೇಶ್ವರ ದೇಗುಲ ಹಾಗೂ ಶ್ರೀ ವಿಠಲ ಪಾಂಠುರಂಗ ದೇವಾಲಯದಲ್ಲೂ ಶ್ರೀ ರಾಮ ಮೂರ್ತಿಗೆ ಪೂಜೆ ಸಲ್ಲಿಸಿ ವಿಠಲ ರುಕುಮಾಯಿ ಭಕ್ತ ವೃಂದದವರು ಪಟ್ಟಣದ ಪ್ರಮುಖ ಬೀದಿಯಲ್ಲಿ ತಮಟೆ ಕಂಸಾಳೆಯೊಂದಿಗೆ ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್, ಶ್ರೀ ರಾಮ ಎನ್ನುತ್ತಾ ಸಾಗಿದರು.ಸುರಹೊನ್ನೆ ಗ್ರಾಮದ ಆಂಜನೇಯ ದೇಗುಲ, ಗೋವಿನಕೋವಿ ಗ್ರಾಮದ ತುಂಗಾ ಭದ್ರ ನಧಿಯ ತಟದಲ್ಲಿರುವ ಗೆಡ್ಡೆರಾಮೇಶ್ವರ, ತೀರ್ಥಗಿರಿಯ ತೀರ್ಥರಾಮೇಶ್ವರ ಶಿವಲಿಂಗನ ಮೂರ್ತಿಗೆ ವಿಶೇಷ ಪೂಜೆ, ಕೆಂಚಿಕೊಪ್ಪ ಗ್ರಾಮದ ರಾಮನ ಮಂದಿರದಲ್ಲಿ ಶ್ರೀರಾಮನ ಭಾವ ಚಿತ್ರವನ್ನಿಟ್ಟು ಪೂಜಿಸಿದರು.