ಭಕ್ತರಿಂದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮಿಜಿ ಅವರ 51ನೇ ಜನ್ಮದಿನದ ವರ್ಧತಿ ಆಚರಣೆ

KannadaprabhaNewsNetwork |  
Published : Jun 30, 2025, 12:34 AM IST
29ಎಚ್ಎಸ್ಎನ್14:  | Kannada Prabha

ಸಾರಾಂಶ

ಭಕ್ತರೆಲ್ಲರೂ ಒಗ್ಗೂಡಿ ತಮ್ಮ 51ನೇ ಜನ್ಮದಿನದ ವರ್ಧಂತಿ ಕಾರ್ಯಕ್ರಮ ಆಯೋಜಿಸಿದ್ದಾರೆ, ಮಠದ ನಿರ್ಮಾಣಕ್ಕೂ ಅನೇಕರು ಕೈಜೋಡಿಸುವ ಭರವಸೆ ನೀಡಿದ್ದಾರೆ, ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರದಿಂದ ಶ್ರೀಮಠವನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿ ಕ್ಷೇತ್ರದ ಶ್ರೀಪುರ ವರ್ಗ ಹಿರೇಮಠದ ಭಕ್ತರು, ಶ್ರೀ ಮಠದ ಡಾ. ಮಹೇಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿಯವರ 51ನೇ ಜನ್ಮದಿನದ ವರ್ಧಂತಿ ಮಹೋತ್ಸವವನ್ನು ಭಾನುವಾರ ಆಚರಿಸಿದರು.

ಕಾರ್ಯಕ್ರಮವನ್ನು ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ರಾಜಣ್ಣ ( ಗಂಗೇಗೌಡ) ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಏಕೈಕ ವೀರಶೈವ ಮಠವಿರುವುದು ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿ ಮಾತ್ರ, ಶ್ರೀಗಳು ಕೇವಲ ವೀರಶೈವ ಸಮಾಜವಲ್ಲದೆ ಎಲ್ಲ ವರ್ಗದ ಜನರಿಗೂ ಆಶೀರ್ವಚನ ನೀಡುತ್ತಾ ಬರುತ್ತಿದ್ದಾರೆ. ಶ್ರೀ ಮಠದ ವತಿಯಿಂದ ಜ್ಯೋತಿಷ್ಯ ಹಾಗೂ ಸಂಸ್ಕೃತ ಶಾಲೆಯನ್ನು ಪ್ರಾರಂಭಿಸಿದರೆ ಪರಂಪರೆಯನ್ನು ಉಳಿಸಬಹುದಾಗಿದೆ, ಮಠದ ಅಭಿವೃದ್ಧಿ ಕೆಲಸಗಳಿಗೆ ತಾವು ವೈಯಕ್ತಿಕವಾಗಿ 50 ಸಾವಿರ ರು. ನೀಡುವುದಾಗಿ ತಿಳಿಸಿದರು.

ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಕ್ತರೆಲ್ಲರೂ ಒಗ್ಗೂಡಿ ತಮ್ಮ 51ನೇ ಜನ್ಮದಿನದ ವರ್ಧಂತಿ ಕಾರ್ಯಕ್ರಮ ಆಯೋಜಿಸಿದ್ದಾರೆ, ಮಠದ ನಿರ್ಮಾಣಕ್ಕೂ ಅನೇಕರು ಕೈಜೋಡಿಸುವ ಭರವಸೆ ನೀಡಿದ್ದಾರೆ, ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರದಿಂದ ಶ್ರೀಮಠವನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.

ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರಮೂರ್ತಿ ಮಾತನಾಡಿ, ಕೇವಲ ವೀರಶೈವ ಸಮಾಜವಲ್ಲದೆ ಎಲ್ಲಾ ವರ್ಗದ ಜನರ ಕಷ್ಟ ಸುಖಗಳಿಗೆ ಶ್ರೀಗಳು ಸ್ಪಂದಿಸುತ್ತಿದ್ದಾರೆ, ಇದರಿಂದಲೇ ಅವರನ್ನು ಎಲ್ಲಾ ವರ್ಗದ ಜನ ಪೂಜ್ಯ ಭಾವನೆಯಲ್ಲಿ ನೋಡುತ್ತಾರೆ. ಮಠಮಾನ್ಯಗಳಿಂದಲೇ ಬಡ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಸತಿಯು ಸಿಗುತ್ತಿದೆ, ಶ್ರೀಮಠದ ಮೇಲೆ ಭಕ್ತರ ಸಹಕಾರ ಹೀಗೆ ಮುಂದುವರಿಯಲಿ ಎಂದರು.

ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್ ಮಾತನಾಡಿ, ಮಠದ ಅಭಿವೃದ್ಧಿ ಕೆಲಸಗಳಿಗೆ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣರವರಿಗೆ ಮನವಿ ಮಾಡುವ ಮೂಲಕ ಹೆಚ್ಚಿನ ಅನುದಾನ ಕೊಡಿಸುವುದಾಗಿ ತಿಳಿಸಿದರು. ಜೊತೆಗೆ ಸಮಾಜದ ಎಲ್ಲರೂ ಶ್ರೀಗಳ ಪರ ನಿಲ್ಲುವ ಮೂಲಕ ಸಮಾಜದ ಸಂಘಟನೆಗೆ ಒತ್ತು ನೀಡುವಂತೆ ಮನವಿ ಮಾಡಿದರು.

ತಾಲೂಕು 5 ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್‌. ಪಿ. ಪ್ರಕಾಶ್ ಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಕ್ತರು ಶ್ರೀಗಳನ್ನು ಸನ್ಮಾನಿಸಿದರು. ಅಂಬಲ ಮಠದ ಶ್ರೀಗಳು, ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಕೃಪಾ ಶಂಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಬಿಹಳ್ಳಿ ಗಿರೀಶ್, ಬಿಜೆಪಿ ಮಹಿಳಾ ನಾಯಕಿ ಛಾಯಾ ಕೃಷ್ಣಮೂರ್ತಿ, ಆಗಮಿಕರಾದ ಚರಣ್ ಭಾರದ್ವಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮ ಗಂಗಾಧರ್, ತಾಲೂಕು ಪ್ರಧಾನ ಕಾರ್ಯದರ್ಶಿ ಹಿರೇಬಿಳ್ತಿ ನಾಗೇಶ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುಳಕೆರೆ ಪ್ರಶಾಂತ್, ಬಿಜೆಪಿ ಮುಖಂಡರಾದ ಪ್ರಸನ್ನ, ದುಶಾಂತ್, ಸಮಾಜದ ಪ್ರಮುಖರಾದ ಎನ್. ಟಿ.ಸಿದ್ದಪ್ಪ, ಆರ್. ರುದ್ರಸ್ವಾಮಿ, ಮುಖಂಡರಾದ ಎನ್. ಎಸ್. ಲಕ್ಷ್ಮಣ್, ಪಾಪಣ್ಣ, ಎ.ಸಿ. ನಾಗೇಶ್, ರಂಗಸ್ವಾಮಿ, ಕಿರಣ್ ಗವಿರಂಗಯ್ಯ, ತಗಡೂರು ಮಂಜುನಾಥ್, ತಾಲೂಕು ಯೋಜನಾ ಸಮಿತಿ ಸದಸ್ಯ ನಿಶ್ಚಲ್ ಐಸ್ಟನ್, ಸಮರಸೇನೆ ಅಧ್ಯಕ್ಷ ಭರತ್, ಪುರವರ್ಗ ಹಿರೇಮಠದ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಎನ್. ಸಿ. ಕುಮಾರಸ್ವಾಮಿ ಹಾಗೂ ಸರ್ವ ಸದಸ್ಯರು ಮತ್ತು ಭಕ್ತ ಸಮೂಹ ಹಾಜರಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ