ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಅಗತ್ಯ

KannadaprabhaNewsNetwork |  
Published : Nov 16, 2025, 02:00 AM IST
14ಎಚ್ಎಸ್ಎನ್15 :  | Kannada Prabha

ಸಾರಾಂಶ

ಜವನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿಯವರ ೬೦ನೇ ಜನ್ಮದಿನೋತ್ಸವ ಮತ್ತು ಮಠದ ಹಿರಿಯ ಶ್ರೀಗಳ ತ್ರಿಮೂರ್ತಿ ಗದ್ದುಗೆ ನಿರ್ಮಾಣ ಕಾರ್ಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಜವೇನಹಳ್ಳಿ ಮಠದ ಸ್ವಾಮೀಜಿ ನಮ್ಮ ಆತ್ಮೀಯರು. ಮಠದಲ್ಲಿ ನೂತನ ದೇವಾಲಯ ಹಾಗೂ ಗದ್ದುಗೆ ನಿರ್ಮಾಣ ಮಾಡುತ್ತಿರುವುದು ಅತ್ಯುತ್ತಮ ಕೆಲಸ. ಇಂತಹ ಮಠಗಳ ಅಭಿವೃದ್ಧಿಗೆ ಪ್ರತಿಯೊಬ್ಬ ಭಕ್ತನೂ ಸಹಕಾರ ನೀಡುವುದು ಆತನ ಜವಾಬ್ದಾರಿ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಠಗಳ ಅಭಿವೃದ್ಧಿಗೆ ಭಕ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಆದಿಚುಂಚನಗಿರಿ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ಜವನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಂಗಮೇಶ್ವರ ಸ್ವಾಮೀಜಿಯವರ ೬೦ನೇ ಜನ್ಮದಿನೋತ್ಸವ ಮತ್ತು ಮಠದ ಹಿರಿಯ ಶ್ರೀಗಳ ತ್ರಿಮೂರ್ತಿ ಗದ್ದುಗೆ ನಿರ್ಮಾಣ ಕಾರ್ಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಜವೇನಹಳ್ಳಿ ಮಠದ ಸ್ವಾಮೀಜಿ ನಮ್ಮ ಆತ್ಮೀಯರು. ಮಠದಲ್ಲಿ ನೂತನ ದೇವಾಲಯ ಹಾಗೂ ಗದ್ದುಗೆ ನಿರ್ಮಾಣ ಮಾಡುತ್ತಿರುವುದು ಅತ್ಯುತ್ತಮ ಕೆಲಸ. ಇಂತಹ ಮಠಗಳ ಅಭಿವೃದ್ಧಿಗೆ ಪ್ರತಿಯೊಬ್ಬ ಭಕ್ತನೂ ಸಹಕಾರ ನೀಡುವುದು ಆತನ ಜವಾಬ್ದಾರಿ ಎಂದು ಹೇಳಿದರು.

ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಸುಮಾರು ೭೦೦ ವರ್ಷದ ಪ್ರಾಚೀನ ಮಠ ಮತ್ತು ದೇವಾಲಯ ಜೀರ್ಣಾವಸ್ಥೆಯಾಗಿದ್ದ ಕಾರಣ ಕೆಡವಿ ನೂತನ ಮಠ ಮತ್ತು ದೇವಾಲಯವನ್ನು ಸುಮಾರು ೬ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹಿರಿಯ ಸ್ವಾಮೀಜಿಗಳ ಗದ್ದುಗೆ ನಿರ್ಮಾಣಕ್ಕಾಗಿ ಇಂದು ಗುದ್ದಲಿ ಪೂಜೆ ನೆರವೇರಿದೆ. ಈ ಹಿಂದೆ ದಿವಂಗತ ಶಾಸಕರಾದ ಎಚ್.ಎಸ್. ಪ್ರಕಾಶ್ ಅವರ ತಂದೆ ಸಣ್ಣಯ್ಯರು ಗದ್ದುಗೆ ನಿರ್ಮಿಸಿದ್ದರು. ಈಗ ಮರುನಿರ್ಮಾಣಕ್ಕೆ ಸುಮಾರು ೪೦ ಲಕ್ಷ ರು. ವೆಚ್ಚವಾಗಲಿದ್ದು, ಇದಕ್ಕೆ ಸಹಾಯ ನೀಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಶ್ರೀಗಳಾದ ಅಭಿನವ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ, ರಾಯನಾಳು ಹುಬ್ಬಳ್ಳಿ, ವಿಜಯ್ ಕುಮಾರ್ ಸ್ವಾಮೀಜಿ, ತಣ್ಣೀರುಹಳ್ಳ ಮಠ, ನಂದಿಶ್ವರ ಶಿವಾಚಾರ್ಯ ಸ್ವಾಮೀಜಿ, ಸೀಗೆಗುಡ್ಡ, ಬಸವಲಿಂಗ ಸ್ವಾಮೀಜಿ, ಬಸವಪಟ್ಟಣ, ಮಲ್ಲೇಶ್ವರ ಸ್ವಾಮೀಜಿ, ತೊರೆನೂರು, ಕಸಾಪ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಜವನಹಳ್ಳಿ ಮಠ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ವಿ. ಉಮೇಶ್, ಕಾರ್ಯದರ್ಶಿ ಪರಮಶಿವಯ್ಯ, ಸಹ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಖಜಾಂಚಿ ಶರತ್ ಭೂಷಣ್, ನಿರ್ದೇಶಕ ಮಂಜುನಾಥ್, ಶೋಭನ್ ಬಾಬು, ಮಯೂರಿ ಲೋಕೇಶ್, ಶೇಖರ್, ರಾಜಶೇಖರ್ ಮೂರ್ತಿ, ಇಂದ್ರಮ್ಮ, ಅವಿನಾಶ್, ದರ್ಶನ್, ಮದನ್, ಮಹಂತೇಶ್, ಅನ್ನಪೂರ್ಣಮ್ಮ, ಮಮತಾ ಪಾಟೀಲ್, ಧನಲಕ್ಷ್ಮಿ ಲೋಕೇಶ್, ವೀಣಾದೇವರಾಜು, ಕಲ್ಲೇಶ್, ಶಾಂತಕುಮಾರ್, ವಸಂತ ಕಮಲಮ್ಮ, ಸೋಮಶೇಖರ್ ಮೊದಲಾದ ನೂರಾರು ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಯಶಸ್ವಿಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ