ಭಕ್ತರ ಶ್ರದ್ಧೆ, ಭಕ್ತಿ, ಸೇವಾ ಕೈಂಕರ್ಯ ಅನನ್ಯ

KannadaprabhaNewsNetwork |  
Published : Sep 17, 2024, 12:56 AM IST
ಹೊನ್ನಾಳಿಫೋಟೋ  14ಎಚ್.ಎಲ್.ಐ3. ಹಿರೇಕಲ್ಮಠದ ಪಂಚಾಚಾರ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಅನಾದಿ ಕಾಲದಿಂದಲೂ ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವ ಆಚರಣೆ ಹಿರೇಕಲ್ಮಠದ ಸಂಪ್ರದಾಯವಾಗಿದೆ. ಅದರಂತೆ ಪ್ರತಿ ವರ್ಷ ನಡೆಯುವ ಶ್ರೀ ಚನ್ನೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸೇವೆ ಸಲ್ಲಿಸಿದ ಭಕ್ತರಿಗೆ ಶ್ರೀಗುರು ರಕ್ಷೆ ಲಭಿಸುತ್ತದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ಹೊನ್ನಾಳಿಯಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಹಿರೇಕಲ್ಮಠ ಶ್ರೀ ಶ್ಲಾಘನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಅನಾದಿ ಕಾಲದಿಂದಲೂ ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವ ಆಚರಣೆ ಹಿರೇಕಲ್ಮಠದ ಸಂಪ್ರದಾಯವಾಗಿದೆ. ಅದರಂತೆ ಪ್ರತಿ ವರ್ಷ ನಡೆಯುವ ಶ್ರೀ ಚನ್ನೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸೇವೆ ಸಲ್ಲಿಸಿದ ಭಕ್ತರಿಗೆ ಶ್ರೀಗುರು ರಕ್ಷೆ ಲಭಿಸುತ್ತದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಇತ್ತೀಚೆಗೆ ನಡೆದ ಹಿರೇಕಲ್ಮಠದ ಜಾತ್ರಾ ಮಹೋತ್ಸವಕ್ಕೆ ಹಾಗೂ ರಥೋತ್ಸವಕ್ಕೆ ಶ್ರಮಿಸಿದ ಭಕ್ತಾದಿಗಳಿಗೆ ಶನಿವಾರ ಹಿರೇಕಲ್ಮಠದ ಶ್ರೀ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀಮಠದ ಸೇವಾ ಕಾರ್ಯಕರ್ತರ ಅಭಿನಂದನಾ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಕ್ತರ ಶ್ರದ್ಧಾಭಕ್ತಿ, ಸೇವಾ ಕೈಂಕರ್ಯ ಅನನ್ಯ ಹಾಗೂ ಶ್ಲಾಘನೀಯ. ತಾಲೂಕಿನ ಹಾಗೂ ಹೊರಗಿನ ತಾಲೂಕುಗಳ ಭಕ್ತರು ತನು, ಮನ, ಧನ ಅರ್ಪಿಸಿ, ಶ್ರೀಮಠದ ಸೇವೆ ಸಲ್ಲಿಸಿದ್ದಾರೆ. ತಿಂಗಳ ಕಾಲ ನಡೆದ ಶ್ರಾವಣ ಕಾರ್ಯಕ್ರಮದಲ್ಲಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದು ಶ್ರೀಮಠದ ಪರಂಪರೆಯಾಗಿದೆ. ಎಲ್ಲ ಭಕ್ತರಿಗೆ ಹಾಗೂ ಸೇವಾಕಾರ್ಯಕರ್ತರಿಗೆ ಸನ್ಮಾನಿಸಿ, ಅಭಿನಂದಿಸುವ ಕಾರ್ಯ ಇದಾಗಿದೆ ಎಂದು ಹೇಳಿದರು.

ಶ್ರೀಮಠದಲ್ಲಿ ಪ್ರತಿ ತಿಂಗಳ ಅಮಾವಾಸ್ಯೆ ಕಾರ್ಯಕ್ರಮ, ಶ್ರಾವಣ ಮಾಸದ ಕಾರ್ಯಕ್ರಮ, ಅಕ್ಟೋಬರ್ ತಿಂಗಳಲ್ಲಿ ದಸರಾ ಮತ್ತು ಶರನ್ನವರಾತ್ರಿ ಕಾರ್ಯಕ್ರಮ, ಮಾರ್ಚಿ ತಿಂಗಳಲ್ಲಿ ಲಿಂಗೈಕ್ಯ ಗುರುಗಳ ಪುಣ್ಯಾರಾಧನೆ, ಸಾಮೂಹಿಕ ಕಾರ್ಯಕ್ರಮಗಳ ಹೀಗೆ ಹತ್ತು ಹಲವಾರ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ವರ್ಷದ ಉದ್ದಕ್ಕೂ ನಡೆಯುತ್ತಿರುವುದು ಭಕ್ತರ ಶ್ರಮದಿಂದ ಎಂದು ಹೇಳಿದರು.

ಹಿರೇಕಲ್ಮಠದ ಶ್ರೀಚನ್ನೇಶ್ವರ ಮಹಾ ರಥೋತ್ಸವ, ವೀರಭದ್ರದೇವರ ಕೆಂಡದರ್ಚನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನಡೆದವು. ಶ್ರೀಗುರು ಚನ್ನೇಶ್ವರರ ಆಶೀರ್ವಾದ ಭಕ್ತರ ಮೇಲಿರಲಿ ಎಂದರು.

ಆ.3ರಿಂದ ಶ್ರೀಮಠದಲ್ಲಿ ದಸರಾ ಮತ್ತು ಶರನ್ನವರಾತ್ರಿ ಕಾರ್ಯಕ್ರಮ ನಡೆಯಲಿದೆ. ಸಂಜೆ ಧಾಮಿಕ ಸಭೆ, ಶ್ರೀದೇವಿ ಪುರಾಣ ಪ್ರವಚನ, ಉಪನ್ಯಾಸ ಕಾರ್ಯಕ್ರಮ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಭಕ್ತರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಬೇಕು ಎಂದರು.

ಮುಖಂಡ ಎಚ್.ಎ.ಉಮಾಪತಿ, ಕೋರಿ ದಿಲೀಪ್, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ವೀರಣ್ಣ ಅನೇಕರು ಮಾತನಾಡಿದರು. ಬೆನಕಯ್ಯ ಶಾಸ್ತ್ರಿ, ನಿಜಗುಣ ಶಾಸ್ತ್ರಿ, ಹಾಲೇಶಯ್ಯ ವೇದಘೋಷ ಮಾಡಿದರು.

ಕಾರ್ಯಕ್ರಮದಲ್ಲಿ ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಮಠದ ವ್ಯವಸ್ಥಾಪಕ ಚನ್ನಬಸಯ್ಯ ನಿರೂಪಿಸಿದರು.

- - - -14ಎಚ್.ಎಲ್.ಐ3:

ಹೊನ್ನಾಳಿ ಹಿರೇಕಲ್ಮಠದ ಪಂಚಾಚಾರ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!