ಲಕ್ಷ್ಮೇಶ್ವರ: ಮಂತ್ರಾಲಯ ಪಾದಯಾತ್ರಾ ಸಂಘದ ವತಿಯಿಂದ ಮಂತ್ರಾಲಯಕ್ಕೆ ೬೭ನೇ ವರ್ಷದ ಪಾದಯಾತ್ರೆಯು ಇತ್ತೀಚೆಗೆ ಮಂತ್ರಾಲಯ ಕ್ಷೇತ್ರವನ್ನು ತಲುಪಿ ಸಂಪನ್ನಗೊಂಡಿತು.
ಪಾದಯಾತ್ರೆಯು ಅ. ೬ರಂದು ಲಕ್ಷ್ಮೇಶ್ವರದಿಂದ ಪ್ರಾರಂಭಗೊಂಡಿತ್ತು. ಪಾದಯಾತ್ರೆ ಆರಂಭಕ್ಕೂ ಮುನ್ನ ಪಾದಯಾತೆರಯ ರೂವಾರಿ ದಿ. ವೈದ್ಯ ಬಾಬುರಾವ್ ಕುಲಕರ್ಣಿ ಅವರ ನಿವಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಪಾದಯಾತ್ರೆಯ ಯಶಸ್ವಿಗಾಗಿ ಪ್ರಾಣೇಶಾಚಾರ್ಯ ಅವಧಾನಿ ಅವರ ನೇತೃತ್ವದಲ್ಲಿ ವಿಶೇಷ ಹೋಮವನ್ನು ನೆರವೇರಿಸಲಾಗಿತ್ತು.ಪಾದಯಾತ್ರೆಯಲ್ಲಿ ನಿತ್ಯ ಈ ಹೋಮ ಹವನ, ಹರಿನಾಮಸ್ಮರಣೆ ನಡೆಸಲಾಗುವುದರಿಂದ ಸಮಸ್ತ ಮಾನವ ಕುಲಕ್ಕೆ ಒಳ್ಳೆಯದಾಗಬೇಕೆಂಬ ಸಂಕಲ್ಪವನ್ನು ಹೊಂದಿ ಈ ಪಾದಯತ್ರೆಯು ಯಶಸ್ವಿಯಾಗಿ ಮುಕ್ತಾಯವಾಯಿತು.ರಾಯರ ದರುಶನಕ್ಕೆ ಶ್ರೀಮಠದಿಂದ ವಿಶೇಷವಾಗಿ ಅವಕಾಶ ಮಾಡಿಕೊಡಲಾಗಿತ್ತು. ಪಾದಯಾತ್ರೆಯು ಯಶಸ್ವಿಯಾಗಿದ್ದು, ಯಾವುದೇ ಸಂಕಷ್ಟಗಳು ಎದುರಾಗದೆ ರಾಯರನ್ನು ಕಣ್ತುಂಬಿಕೊಂಡ ಪಾದಯಾತ್ರಿಕರು ಭಾವಪರವಶರಾಗಿದ್ದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯ ಕೃಷ್ಣ ಕುಲಕರ್ಣಿ ಮಾತನಾಡಿ, ಧಾರ್ಮಿಕ ಕ್ಷೇತ್ರದ ಪಾದಯಾತ್ರೆ ಮನಸ್ಸಿನಲ್ಲಿರುವ ದುರ್ಗುಣಗಳನ್ನು ನಾಶ ಮಾಡಿ ಸದ್ಗುಣಗಳ ಪ್ರಾಪ್ತಿಗೆ ಮುಕ್ತಿ ಮಾರ್ಗ ತೋರುವುದಾಗಿದೆ. ದಿ. ವೈದ್ಯ ಬಾಬುರಾವ್ ಕುಲಕರ್ಣಿಯವರ ಸಾತ್ವಿಕ ಶಕ್ತಿ, ದಿ. ಶ್ರೀನಿವಾಸ ಕುಲಕರ್ಣಿ(ತಂಗೋಡ) ಅವರ ಸಂಘಟನಾ ಶಕ್ತಿ ಈ ಪಾದಯಾತ್ರೆಯ ಯಶಸ್ವಿಗೆ ಕಾರಣವಾಗಿದೆ ಎಂದರು.ಡಾ. ಶ್ರೀಹರಿ ಕುಲಕರ್ಣಿ, ಡಾ. ಬಿ.ಬಿ. ಜೋಶಿ, ಆರ್.ಎ. ಕುಲಕರ್ಣಿ, ಅನಿಲ ಕುಲಕರ್ಣಿ, ಲಕ್ಷ್ಮಿಕಾಂತ ಗಣಾಚಾರ, ರಾಜಾಚಾರ್ಯ ರಾಯಚೂರ, ದಿಲೀಪ್ ಜೋಶಿ, ಪ್ರಾಣೇಶ ಬೆಳ್ಳಟ್ಟಿ, ಲಲಿತಕ್ಕ ಕೆರಿಮನಿ, ಆನಂದಸ್ವಾಮಿ ಗಡ್ಡದೇವರಮಠ, ಸುಭಾಸ ಬಟಗುರ್ಕಿ, ಅಶೋಕ ಬಟಗುರ್ಕಿ, ಬಿ.ಕೆ. ಕುಲಕರ್ಣಿ, ಡಾ. ಪ್ರಸನ್ನ ಕುಲಕರ್ಣಿ, ನಾರಾಯಣಸಾ ಪವಾರ, ರಮೇಶ ತೊರಗಲ್, ಗಂಗಾಧರ ಮ್ಯಾಗೇರಿ, ದಿಗಂಬರ ಪೂಜಾರ ಸೇರಿದಂತೆ ಅನೇಕರು ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.