ಗೋಕರ್ಣ: ಭಾನುವಾರ ಮುಂಜಾನೆಯಿಂದ ರಾತ್ರಿವರೆಗೂ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವಾರಾಂತ್ಯದ ರಜೆಯ ಕಾರಣ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರಿದ್ದು, ರಭಸದ ಮಳೆಗೆ ಕಂಗಾಲಾದರು.ಇಲ್ಲಿನ ಮಹಾಗಣಪತಿ ಮಂದಿರದ ಮುಂಭಾಗದ ರಸ್ತೆಯಲ್ಲಿ ನೀರು ತುಂಬಿ ಭಕ್ತರಿಗೆ ಸಂಚರಿಸಲು ತೊಡಕಾಯಿತು. ಹೊಲಸು ನೀರು ತುಳಿದು ದೇವರ ದರ್ಶನಕ್ಕೆ ತೆರಳಿದರು. ಉಳಿದ ಹಲವು ಮಾರ್ಗಗಳಲ್ಲಿಯೂ ಜಲಾವೃತಗೊಂಡಿತ್ತು.
ರಾತ್ರಿ ಎಂಟು ಗಂಟೆ ನಂತರ ರಭಸದ ಗಾಳಿ ಅರ್ಧಗಂಟೆಗೂ ಹೆಚ್ಚು ಕಾಲ ಬೀಸಿದ್ದು, ಹಲವು ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಈ ವೇಳೆ ವಿದ್ಯುತ್ ಕಡಿತಕೊಂಡಿತ್ತು. ಮನೆಗಳ ಚಾವಣಿ ಸೇರಿದಂತೆ ವಿವಿಧ ಸಣ್ಣ, ಪುಟ್ಟ ಅವಘಡಗಳು ನಡೆದಿದ್ದು, ಯಾವುದೇ ಜೀವಾಪಾಯ ಎದುರಾಗಿಲ್ಲ.
ಮಹಾಗಣಪತಿ ದೇವಾಲಯದ ಮುಂಭಾಗದಲ್ಲಿ ನೀರು ತುಂಬಿಕೊಂಡಿದ್ದು, ಅದರಲ್ಲೇ ಭಕ್ತರು ಸಾಗುತ್ತಿರುವುದು.ಅಜ್ಜಿಹಕ್ಕಲ ಬಳಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿರುವುದು.