ಧನುರ್ಮಾಸ ಪೂಜಾಮಂಗಲ, ಗುರು ಶಾಂತಲಿಂಗೇಶ್ವರ ರಥೋತ್ಸವ
ಕನ್ನಡಪ್ರಭ ವಾರ್ತೆ ಜಗಳೂರುಶುದ್ಧ ಹೃದಯದ ಭಕ್ತರೇ ಕಣ್ವಕುಪ್ಪೆ ಮಠದ ಆಸ್ತಿಗಳು ಎಂದು ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಧನುರ್ಮಾಸ ಪೂಜಾಮಂಗಲ ಮತ್ತು ಮಕರ ಸಂಕ್ರಾಂತಿ ವಿಶೇಷ ಪೂಜೆ ಹಾಗೂ ಗುರು ಶಾಂತಲಿಂಗೇಶ್ವರ ರಥೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿದ್ಯ ವಹಿಸಿ ಸ್ವಾಮೀಜಿ ಮಾತನಾಡಿ ಸಂಕ್ರಾಂತಿ ಹಬ್ಬದಂದು ಇಮ್ಮಡಿ ಹಾಗೂ ಮುಮ್ಮಡಿ ಶಾಂತಲಿಂಗೇಶ್ವರ ರಥೋತ್ಸವ ಜರುಗುತ್ತದೆ. ಶ್ರೀಗಂಧದ ಕಟ್ಟಿಗೆಯಂತೆ ಸಮಾಜಕ್ಕೆ ತಮ್ಮನ್ನೇ ತಾವು ಸವೆಸಿದ ವ್ಯಕ್ತಿಗಳ ರಥೋತ್ಸವ ನಡೆಯುತ್ತಿರುವುದು ದೇಶದಲ್ಲೇ ವಿರಳ ಎಂದರು.2024ರಲ್ಲಿ ಉತ್ತಮ ಮಳೆ :
ಕಳೆದ ವರ್ಷ ಮಳೆ ಬಾರದೆ ಜಗಳೂರು ತಾಲೂಕಿನ ರೈತರು ದುಃಖದಲ್ಲಿದ್ದರು. 2024ರ ವರ್ಷ ಮುಂಗಾರು ಮಳೆ ಉತ್ತಮವಾಗಲಿದೆ. ಮಧ್ಯೆ ಸ್ವಲ್ಪ ಮಳೆ ಕುಂಠಿತಗೊಂಡರೂ ನಂತರ ಹಿಂಗಾರು ಮಳೆ ಉತ್ತಮವಾಗಲಿದ್ದು, ಬೆಳೆಗಳು ಸಮೃದ್ಧಿಯಾಗಿ ಬರಲಿವೆ ಎಂದು ಸ್ವಾಮೀಜಿ ಭವಿಷ್ಯ ನುಡಿದರು.ಮಠಕ್ಕೆ ಮಾಜಿ ಶಾಸಕ ಎಸ್ .ವಿ ರಾಮಚಂದ್ರ, ಎಚ್ ಪಿ ರಾಜೇಶ್ ರಸ್ತೆ ಅಭಿವೃದ್ಧಿ ಮಠದ ಬೆಳವಣಿಗೆ ಕಾರಣಕರ್ತರಾಗಿದ್ದರು. ಹಾಲಿ ಶಾಸಕ ಬಿ.ದೇವೇಂದ್ರಪ್ಪ ಆ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಲಿದ್ದಾರೆ. ನಟ ಜಗ್ಗೇಶ್ ಕೂಡ ಮಠದ ಅಭಿಮಾನಿಯಾಗಿದ್ದು ರಥೋತ್ಸವಕ್ಕೆ ಆಗಮಿಸಿರುವುದು ಸಂತಸ ತಂದಿದೆ ಎಂದರು.
ಗವಿ ಮಠದ ಭಕ್ತ:ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಮಾತನಾಡಿ ನಾನು 2018ರಲ್ಲಿ ಕೇದಾರಕ್ಕೆ ಹೋಗಿದ್ದಾಗ ಕೇದಾರ ಸ್ವಾಮೀಜಿ ತಪ್ಪಸ್ಸಿಗೆ ಕೂತಿದ್ದರು. ತಪಸ್ಸು ಮುಗಿದ ನಂತರ ನನ್ನ ಜಾತಕ ಕೊಟ್ಟಿದ್ದೆ 2022ರವರೆಗೆ ಶಾಸಕನಾಗಲ್ಲ ನಂತರ ಆಗುತ್ತಿರಿ ಎಂದು ತಿಳಿಸಿದ್ದರು. ಅದರಂತೆ ರಾಜ್ಯಸಭಾ ಸದಸ್ಯನಾದೆ ಎಂದರು. ಅಷ್ಟು ಶಕ್ತಿ ಗುರುಗಳಲ್ಲಿದೆ. ಅಲ್ಲಿಂದ ನಾನು ಮಠದ ಭಕ್ತನಾಗಿರುವ ನಾನು ಇಂದು ಜಗಳೂರು ಕಣ್ವಕುಪ್ಪೆ ಮಠಕ್ಕೆ ಬಂದಿದ್ದೇನೆ. ಪ್ರತಿಯೊಬ್ಬರು ಮಠಕ್ಕೆ ತನು ಮನ ದರ್ಪಣ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ಕೆ.ಪಿ.ಪಾಲಯ್ಯ, ಶಿವಕುಮಾರ್ ಸ್ವಾಮಿ, ಗೋಡೆ ಪ್ರಕಾಶ್, ಕರಿಬಸಪ್ಪ, ಜಯವೀರಸ್ವಾಮಿ,ಪರುಷೋತ್ತಮನಾಯ್ಕ್, ಗುತ್ತಿಗೆದಾರ ಗುಂಡು ಮುಳುಗು ತಿಪ್ಪೇಸ್ವಾಮಿ, ಇತರರಿದ್ದರು.