ಕೊಪ್ಪಳ: ಮಹಾರಥೋತ್ಸವದ ಮರುದಿನ ಗವಿಸಿದ್ದೇಶ್ವರ ಜಾತ್ರೆಯ ಮಹಾಪ್ರಸಾದಲ್ಲಿ ಭಕ್ತರು ಮಿರ್ಚಿ ಸವಿದರು.
20 ಕ್ವಿಂಟಲ್ ಹಸಿಮೆಣಸಿನ ಕಾಯಿ, 25 ಕ್ವಿಂಟಲ್ ಹಸಿ ಹಿಟ್ಟು ಬಳಸಿ ಮಿರ್ಚಿ ಮಾಡಲಾಗಿತ್ತು. ಮಿರ್ಚಿ ತಯಾರಿಸಲೆಂದೇ ಗವಿಸಿದ್ದೇಶ್ವರ ಮಿರ್ಚಿ ಬಳಗ ಮಿರ್ಚಿ ಮಾಡಿದೆ.
ಮಿರ್ಚಿ ಸವಿದ ಭಕ್ತರು: ಜಾತ್ರೆಯ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದ ಭಕ್ತರು ಪ್ರಸಾದದ ಜೊತೆಗೆ ಮಿರ್ಚಿ ಸವಿದರು. ಭಾನುವಾರ ತಡರಾತ್ರಿಯವರೆಗೂ ಮಿರ್ಚಿ ಹಾಕಲಾಗಿದ್ದು, ಭಕ್ತರು ರಾತ್ರಿಯೂ ಪ್ರಸಾದದಲ್ಲಿ ಮಿರ್ಚಿ ಸವಿದಿದ್ದಾರೆ.ಮಿರ್ಚಿ ಹಾಕಿದ ಗವಿಶ್ರೀ, ಎಸ್ಪಿ: ದಾಸೋಹಕ್ಕೆ ಮಿರ್ಚಿ ಮಾಡುವ ವೇಳೆ ತೆರಳಿ ಗವಿಸಿದ್ದೇಶ್ವರ ಶ್ರೀಗಳು ಮಿರ್ಚಿ ಹಾಕಿದ್ದಾರೆ. ಕೊಪ್ಪಳ ಎಸ್ಪಿ ಯಶೋದಾ ವಂಟಿಗೋಡಿ ಮಿರ್ಚಿ ಹಾಕಿದ್ದಾರೆ.