ಗಾಂಧಿನಗರದಲ್ಲಿ ಶ್ರದ್ಧಾಭಕ್ತಿ ಶಿವರಾತ್ರಿ

KannadaprabhaNewsNetwork |  
Published : Mar 09, 2024, 01:32 AM IST
ಫೋಟೋ:8ಕೆಪಿಎಸ್ಎನ್ಡಿ5ಎ:  | Kannada Prabha

ಸಾರಾಂಶ

ಸಿಂಧನೂರು ತಾಲೂಕಿನ ಗಾಂಧಿನಗರದ ಶಿವ ದೇವಾಲಯದಲ್ಲಿ ಮೂರ್ತಿಗೆ ಅಲಂಕಾರ ಮಾಡಿರುವುದು

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲೂಕಿನ ಗಾಂಧಿನಗರದ ಶಿವ ದೇವಾಲಯದಲ್ಲಿ ಶುಕ್ರವಾರ ಸಹಸ್ರಾರು ಜನರು ನೆರೆದು ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಬೆಳಗ್ಗೆ 8 ಗಂಟೆಗೆ ಅಷ್ಟೋತ್ತರ ಶತ ಕಳಸದಿಂದ ಗ್ರಾಮ ಪ್ರದಕ್ಷಿಣೆ, ಆಲಯ ಪ್ರದಕ್ಷಿಣೆ, ಗಣಪತಿ ಪೂಜೆ, ಪಂಚಗವ್ಯ ಪ್ರೋಕ್ಷಣೆ ಮತ್ತಿತರ ಧಾರ್ಮಿಕ ವಿಧಿ-ವಿಧಾನಗಳಿಂದ ಸಾಮೂಹಿಕ ಗರಿಕೆ ಪೂಜೆ ನೆರವೇರಿಸಲಾಯಿತು. ತ್ರಿಪುರಸುಂದರಿ ಅಮ್ಮನವರಿಗೆ ಸಾಮೂಹಿಕ ಕುಂಕುಮಾರ್ಚನೆ, ಸಂಜೆ ನೀರಾಜನ ಮಂತ್ರಪುಷ್ಪ, ಸ್ವಸ್ಥಿವಾಚನ ಕಾರ್ಯಕ್ರಮ ನಡೆಯಿತು.

ವಿವಿಧ ತಾಲೂಕಿನಿಂದ ಶಿವದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಭಾಸ್ಕರರಾವ್, ಬಿಜೆಪಿ ಮುಖಂಡ ಕೆ.ಕರಿಯಪ್ಪ ಸೇರಿದಂತೆ ಹಲವು ಗಣ್ಯರು ಪೂಜಾ ಕಾರ್ಯಕ್ರಮದಲ್ಲಿ ಇದ್ದರು.

ಹಾಗೆಯೇ ಸಿಂಧನೂರು ನಗರದ ಎಪಿಎಂಸಿಯಲ್ಲಿರುವ ಗಜಾನನ ದೇವಸ್ಥಾನ, ಶ್ರೀರಾಮಮಂದಿರ, ರಾಘವೇಂದ್ರಮಠ, ಅಂಬಾದೇವಿ ದೇವಸ್ಥಾನ ಸೇರಿದಂತೆ ಪ್ರಮುಖ ಮಂದಿರಗಳಲ್ಲಿ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು. ಶಿವರಾತ್ರಿ ಅಂಗವಾಗಿ ಶಿವನ ಭಕ್ತರು ಉಪವಾಸ ವ್ರತ ಮಾಡಿ ಸಂಜೆ ಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ