ಕಮಲನಗರದಲ್ಲಿ ಧಮ್ಮ ಚಾರಿಕಾ

KannadaprabhaNewsNetwork |  
Published : Oct 04, 2026, 01:30 AM IST
ಚಿತ್ರ 3ಬಿಡಿಆರ್52 | Kannada Prabha

ಸಾರಾಂಶ

ಭಗವಾನ್‌ ಬುದ್ಧರು ಬೋಧಗಯಾದಲ್ಲಿ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯ ಪಡೆದಾಗ ಅವರು ತನ್ನ ಐವರು ಹಿಂದಿನ ಸಹಚರರಿಗೆ ಧಮ್ಮಚಕ್ರ ಪ್ರವರ್ತನ ಸೂತ್ರ ಬೋಧಿಸಿದರು. ಈ ಉಪದೇಶವನ್ನು ಆಷಾಢ ಪೂರ್ಣಿಮೆಯ ದಿನದಂದು ನೀಡಲಾಯಿತು. ಇದರ ನಂತರ ಮೊದಲ ವರ್ಷಾವಾಸವು ಸಾರನಾಥದಲ್ಲಿ ನಡೆಯಿತು ಎಂದು ಬಸವಕಲ್ಯಾಣದ ಹತಕ್ಯಾಳ ಧಮ್ಮನಾಗ ಹೇಳಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ಭಗವಾನ್‌ ಬುದ್ಧರು ಬೋಧಗಯಾದಲ್ಲಿ (ಉರುವೇಲ) ಬೋಧಿ ವೃಕ್ಷದ ಕೆಳಗೆ ಜ್ಞಾನೋದಯ ಪಡೆದಾಗ ಅವರು ತನ್ನ ಐವರು ಹಿಂದಿನ ಸಹಚರರಿಗೆ ಧಮ್ಮಚಕ್ರ ಪ್ರವರ್ತನ ಸೂತ್ರ ಬೋಧಿಸಿದರು. ಈ ಉಪದೇಶವನ್ನು ಆಷಾಢ ಪೂರ್ಣಿಮೆಯ ದಿನದಂದು ನೀಡಲಾಯಿತು. ಇದರ ನಂತರ ಮೊದಲ ವರ್ಷಾವಾಸವು (ಮಳೆಗಾಲದಲ್ಲಿ ವಾಸ) ಸಾರನಾಥದಲ್ಲಿ ನಡೆಯಿತು ಎಂದು ಬಸವಕಲ್ಯಾಣದ ಹತಕ್ಯಾಳ ಧಮ್ಮನಾಗ ಹೇಳಿದರು.

ಕಮಲನಗರ ಪಟ್ಟಣದದ ವಿವಿಧ ಬಡಾವಣೆಗಳಲ್ಲಿ ಶನಿವಾರ ಸಂಚರಿಸಿ ನಂತರ ಬಸವಕಲ್ಯಾಣದ ಹತಕ್ಯಾಳ ಧಮ್ಮನಾಗ ಹಾಗು ಬೌದ್ಧ ಬಿಕ್ಕುಗಳಿಗೆ ಅಶೋಕ ನಗರದಲ್ಲಿ ಭವ್ಯಸ್ವಾಗತ ಮಾಡಿದ ನಂತರ ಬೋಧಿಸಿದ ಅವರು, ಭಗವಾನ ಬುದ್ಧರು ಪ್ರಮುಖ ಧಮ್ಮೋಪದೇಶವನ್ನು ನೀಡಿದ ಮತ್ತು ಭಿಕ್ಷು ಸಂಘ ಸ್ಥಾಪಿಸಿದ ಸ್ಥಳವಾಗಿದೆ ಎಂದರು.

ಮಳೆಗಾಲದ ಮೂರು ತಿಂಗಳುಗಳಲ್ಲಿ ಬೌದ್ಧ ಭಿಕ್ಕುಗಳು ಒಂದೇ ಸ್ಥಳದಲ್ಲಿ ವಾಸಿಸುವ ಸಮಯ ಧ್ಯಾನ ಮತ್ತು ಸಾಧನಕ್ಕೆ ಹೆಚ್ಚಿನ ಒತ್ತು ನೀಡಿ ಮತ್ತು ಪ್ರಯಾಣವನ್ನು ತಪ್ಪಿಸಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಲಾಜಿ ಕಾಲೇಕರ, ದಲೀಪ ಸೋಮವಂಶಿ, ಅಮೊಲ ಸೂರ್ಯವಂಶಿ. ಸೂರ್ಯಕಾಂತ ಗಾಯಕವಾಡ, ರವಿಕಾಂತ ಗಾಯಕವಾಡ, ಗೋವಿಂದರಾವ ತಾಂದಳೆ, ಭಾರತ ತಪಶ್ಯಾಳೆ, ನಾರಾಯಣ ವಾಗಮಾರೆ, ಸೂರ್ಯಕಾಂತ ಕಾಲೇಕರ, ಸುರೇಶ ಡೋಂಗರೆ, ಆಕಾಶ , ಮುಖೇಶ ಗಾಯಕವಾಡ, ನರಸಿಂಗ ಗಾಯಕವಾಡ, ರಣಜಿತ ವಾನಖೇಡೆ, ನಾಲಂದಾ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಡಾ.ಹನಮಂತ ಡೋಳೆ ಹಾಗೂ ಮಹಿಳೆಯರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುನಾವಣಾ ಆಯೋಗದಿಂದ ಮತ ಕಳ್ಳತನ: ಸಚಿವ ಪುಟ್ಟರಂಗಶೆಟ್ಟಿ
ಸಂಗೀತ, ನೃತ್ಯದಿಂದ ಒತ್ತಡ ಕಡಿಮೆ: ದಿನೇಶ್ ಗೂಳಿಗೌಡ