ಕನ್ನಡಪ್ರಭ ವಾರ್ತೆ ಬೀದರ್
ನಗರದ ನೆಹರು ಕ್ರೀಡಾಂಗಣದಲ್ಲಿ ಚಿಟ್ಟಾ ಕ್ಲಬ್ ಹಾಗೂ ಅಮಲಾಪೂರ ಸಿಸಿ ತಂಡಗಳ ಮಧ್ಯೆ ನಡೆದ ಫೈನಲ್ ಪಂದ್ಯದಲ್ಲಿ ಭಾಗವಹಿಸಿದ ಬೀದರ್ ಸಂಸದ ಸಾಗರ್ ಈಶ್ವರ ಖಂಡ್ರೆ, ಫೈನಲ್ ವಿಜೇತ ಚಿಟ್ಟಾ ಸಿಸಿ ಕ್ರಿಕೆಟ್ ತಂಡಕ್ಕೆ ಟ್ರೋಫಿಯ ಜೊತೆಗೆ 1 ಲಕ್ಷ ರು.ಬಹುಮಾನ ಹಾಗೂ ರನ್ನರ್ ಅಪ್ ಅಮಲಾಪೂರ ಸಿಸಿ ತಂಡಕ್ಕೆ ಟ್ರೋಫಿ ಜೊತೆಗೆ 50 ಸಾವಿರ ರು. ವಿತರಿಸಿದರು.
ಚಿಟ್ಟಾ ಕ್ರಿಕೆಟ್ ಕ್ಲಬ್ ಅವರ ಪಂದ್ಯಾವಳಿಯ ಶ್ರೇಷ್ಠ ಪ್ರಶಸ್ತಿ ಟ್ರೋಫಿ ಜೊತೆಗೆ 10 ಸಾವಿರ ರು. ನಗದು ಬಹುಮಾನವನ್ನು ನೀಡಿ ಅಭಿನಂದಿಸಿದರು.ಉತ್ತಮ ಬ್ಯಾಟ್‌ಮಾನ್ ಶೇಕ್ ಅಮಿರ್, ಬಾಲರ್ ಪ್ರವೀಣ ಮೇತ್ರೆ, ತಿರ್ಪುಗಾರರು ಕೃಷ್ಣ ಮತ್ತು ಅಕ್ಷಯ, ವೀಕ್ಷಕ ವಿವರಣೆಗಾರರು ವಿಶಾಲ, ಸ್ಕೋರ್ ವಿವರ ಫೈಜ್ ಮತ್ತು ಕ್ರಿಕೆಟ್ ಅಂಗಳದ ಕ್ಯೂರೇಟ್ ವಿಕಿ ಅತಿವಾಳ ಅವರಿಗೆ ಟ್ರೋಫಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟೂರ್ನಿಯ ಆಯೋಜಕರಾದ ಚಂದ್ರಾಸಿಂಗ್, ಯೂಸುಫ್ ಅಲಿ ಜಮಾದರ್, ನಾರಾಯಣ್ ಭಂಗಿ, ವಿಜಯಕುಮಾರ್ ಬರೂರ, ಶ್ರೀನಿವಾಸ್ ರೆಡ್ಡಿ ಧರ್ಮಾಪೂರ, ಮೌಲಾಸಾಬ್, ಮಾರುತಿ ಮಾಸ್ಟರ್ ಸೇರಿದಂತೆ ದಕ್ಷಿಣ ಕ್ಷೇತ್ರದ ಅನೇಕ ಹಿರಿಯ ಗಣ್ಯರು, ಮುಖಂಡರು ಮತ್ತು ಅನೇಕ ಯುವ ಕ್ರೀಡಾಪಟುಗಳು ಉಪಸ್ಥಿತರಿದ್ದರು.