ಗಾಂಧೀಜಿಯವರು ಕಂಡಂತಹ ರಾಮರಾಜ್ಯದ ಕನಸನ್ನು ನನಸು ಮಾಡುವ ಉದ್ದೇಶದಿಂದ ಶ್ರೀ ವೀರೇಂದ್ರ ಹೆಗ್ಗಡೆಯವರು ಅನುಷ್ಠಾನಕ್ಕೆ ತಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿವೆ.
ಕನ್ನಡಪ್ರಭ ವಾರ್ತೆ ಶಿರಾ ಗಾಂಧೀಜಿಯವರು ಕಂಡಂತಹ ರಾಮರಾಜ್ಯದ ಕನಸನ್ನು ನನಸು ಮಾಡುವ ಉದ್ದೇಶದಿಂದ ಶ್ರೀ ವೀರೇಂದ್ರ ಹೆಗ್ಗಡೆಯವರು ಅನುಷ್ಠಾನಕ್ಕೆ ತಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿವೆ. ರಾಜ್ಯಾದ್ಯಂತ ಸುಮಾರು 58 ಲಕ್ಷ ಮಂದಿ ಸ್ವಸಹಾಯ ಸಂಘದ ಮೂಲಕ ಆರ್ಥಿಕ ಸಬಲೀಕರಣದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಶೀನಪ್ಪ.ಎಂ ಹೇಳಿದರು.ಪಟ್ಟಣದ ಯೋಜನಾ ಕಛೇರಿಯ ಸಭಾಂಗಣದಲ್ಲಿ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು. ಜನಜಾಗೃತಿ ವೇದಿಕೆಯ ಮೂಲಕ ಪೂಜ್ಯರು ಸಮಾಜಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಜನಜಾಗೃತಿ ವೇದಿಕೆಯಲ್ಲಿನ ಸದಸ್ಯರುಗಳು ಎಲ್ಲಾ ರಂಗಗಳಲ್ಲಿರುವವರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಸಾಮಾಜಿಕ ಮತ್ತು ಆರ್ಥಿಕ, ಧಾರ್ಮಿಕ, ಶೈಕ್ಷಣಿಕವಾಗಿ ಬಹುದೊಡ್ಡ ಕೊಡುಗೆ ಕೊಟ್ಟಂತಹ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಮುಖವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಅನುದಾನ, ಹೈನುಗಾರಿಕೆ, ಶೈಕ್ಷಣಿಕ ಕ್ಷೇತ್ರಕ್ಕೆ ಅನುದಾನ ಹೀಗೆ ಸ್ವಸಹಾಯ ಸಂಘಗಳ ಆರ್ಥಿಕ ಯೋಜನೆಗೆ ಪ್ರೋತ್ಸಾಹ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಕಾರ್ಯದರ್ಶಿಗಳು ದಿನೇಶ್.ಡಿ ಮಾತನಾಡಿ, ಜಿಲ್ಲಾ ಜನಜಾಗೃತಿ ವೇದಿಕೆಯಿಂದ ನುರಿತ ಕುಣಿತ ಭಜನಾ ತರಬೇತುದಾರರಿಂದ ಶಿರಾದಲ್ಲಿ 80 ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಶ್ರೀ ದುರ್ಗಾಂಬ ಭಜನಾ ಮಂಡಳಿ ರಚಿಸಿ ಲಕ್ಷಾಂತರ ಜನರ ಎದುರು ಕುಣಿತ ಭಜನೆಯನ್ನು ಪ್ರದರ್ಶಿಸಲಾಯಿತು ಎಂದು ತಿಳಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಸ್.ಕೆ ರಾಮಚಂದ್ರಗುಪ್ತ ಮಾತನಾಡಿ, ನಾವು ಸೇರಿರುವ ಮುಖ್ಯ ಉದ್ದೇಶ ಸಮಾಜ ಸೇವೆಗಾಗಿ. ಸೇವೆ ನಮ್ಮ ಮುಖ್ಯ ಗುರಿಯಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಚನ್ನಬಸವಣ್ಣ, ತುಮಕೂರು-2 ಜಿಲ್ಲೆಯ ಎಂ.ಐ.ಎಸ್ ಯೋಜನಾಧಿಕಾರಿ ಗೋಪಾಲಚಾರ್ಯ, ಯೋಜನಾಧಿಕಾರಿಗಳಾದ ಸದಾಶಿವಗೌಡ, ಪ್ರೇಮಾನಂದ, ದಿನೇಶ್, ಮಹೇಶ್, ರಮೇಶ್, ರಾಮಚಂದ್ರ.ಡಿ, ಶಶಿಧರ್, ಅನಿತಾ ಜಿ.ಬೆಳಗಾಂವಕರ, ಮೇಲ್ವಿಚಾರಕರಾದ ದರ್ಶನ್ ಎಂ.ಎಸ್, ಪ್ರಬಂದಕರಾದ ಚಂದ್ರಶೇಖರ್ ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.