ಧರ್ಮ ಧ್ವಜ ಅಭಿಯಾನ ಸಮಾರೋಪ ನಾಳೆ

KannadaprabhaNewsNetwork |  
Published : Nov 20, 2025, 01:00 AM IST
 ಫೋಟೋ : 19ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಎರಡು ತಿಂಗಳಿನಿಂದ ಹಾನಗಲ್ಲ ತಾಲೂಕಿನಲ್ಲಿ ನಡೆದ ಧರ್ಮ ಧ್ವಜ ಅಭಿಯಾನ ನ. 21ರಂದು ಹಾನಗಲ್ಲಿನಲ್ಲಿ ಸಮಾರೋಪ ಸಮಾರೋಪಗೊಳ್ಳಲಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ದಿಕ್ಸೂಚಿ ಭಾಷಣ ಮಾಡುವರು.

ಹಾನಗಲ್ಲ: ಎರಡು ತಿಂಗಳಿನಿಂದ ಹಾನಗಲ್ಲ ತಾಲೂಕಿನಲ್ಲಿ ನಡೆದ ಧರ್ಮ ಧ್ವಜ ಅಭಿಯಾನ ನ. 21ರಂದು ಹಾನಗಲ್ಲಿನಲ್ಲಿ ಸಮಾರೋಪಗೊಳ್ಳಲಿದೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ದಿಕ್ಸೂಚಿ ಭಾಷಣ ಮಾಡುವರು. ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು ಹಾಗೂ ಮಾತೋಶ್ರೀ ಲಿಂ. ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಕಮಡೊಳ್ಳಿ ಸಿದ್ದಲಿಂಗಣ್ಣ ತಿಳಿಸಿದರು.

ಬುಧವಾರ ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿಂದೂ ಧರ್ಮ ಧ್ವಜ ಅಭಿಯಾನ ಹಾನಗಲ್ಲ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ವರ್ಷಕ್ಕೆ ಎರಡು ಬಾರಿ ನಡೆಯುತ್ತಿದೆ. ಹಿಂದೂಗಳೆಲ್ಲ ಒಂದಾಗಲು ಇದೊಂದು ಜಾಗೃತಿ ಅಭಿಯಾನವಾಗಿದೆ. ಇದು ಪ್ರತಿ ವರ್ಷ ಎರಡು ಬಾರಿ ಹಾನಗಲ್ಲ ತಾಲೂಕಿನ ಎಲ್ಲ ಗ್ರಾಮ ಪಟ್ಟಣಗಳ ಹಿಂದೂ ಮಂದಿರಗಳಿಗೆ ಧರ್ಮ ಧ್ವಜ ನೀಡುವುದು ನಿರಂತರವಾಗಿ ಮುಂದುವರಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮಕ್ಕೆ ಅವಮಾನ ನಿಂದನೆಗಳು ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಜಾಗೃತಿಗೆ ಇದು ಒಂದು ವಿಶೇಷ ಅಭಿಯಾನವಾಗಿದೆ. ಇದು ಪಕ್ಷಾತೀತವಾಗಿದ್ದು, ಎಲ್ಲರೂ ಒಂದಾಗೋಣ. ಈಗಾಗಲೇ ತಾಲೂಕಿನ ಎಲ್ಲ ಗ್ರಾಮಗಳಿಗೆ ತಲುಪಿ ಧರ್ಮ ಧ್ವಜ ಅಭಿಯಾನ ಯಶಸ್ವಿಯಾಗಿದೆ. ತಾಲೂಕಿನ ಪ್ರತಿ ಗ್ರಾಮದಿಂದ ಹಿಂದೂಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಎಲ್ಲರ ಸಹಕಾರ ಅಗತ್ಯ ಎಂದರು.

ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಮಹಾಸ್ವಾಮಿಗಳು, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ, ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಸಿದ್ದರಾಮೇಶ್ವರ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಬೊಮ್ಮನಹಳ್ಳಿಯ ಶಿವಯೋಗೀಶ್ವರ ಮಹಾಸ್ವಾಮಿಗಳು, ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ಅಕ್ಕಿಆಲೂರಿನ ಶಿವಬಸವಮಹಾಸ್ವಾಮಿಗಳು, ಚಂದ್ರಶೇಖರ ಶಿವಾಚಾರ್ಯರು, ಮೂಡಿ ಸದಾಶಿವ ಮಹಾಸ್ವಾಮಿಗಳು, ಹೋತನಹಳ್ಳಿ ಶಂಕರಾನಂದ ಮಹಾಸ್ವಾಮಿಗಳು, ಹೇರೂರು ಗುಬ್ಬಿ ನಂಜುಂಡೇಶ್ವರ ಪಂಡಿತಾರಾಧ್ಯ ಶಿವಾಚಾರ್ಯರು, ತಿಳವಳ್ಳಿ ನಿರಂಜನ ಮಹಾಸ್ವಾಮಿಗಳು, ಕೂಸನೂರು ಜ್ಯೋತಿರ್ಲಿಂಗ ಮಹಾಸ್ವಾಮಿಗಳು, ಹುಬ್ಬಳ್ಳಿ-ಗುಂಡೂರು ವಿಶ್ವೇಶ್ವರ ಮಹಾಸ್ವಾಮಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಮು ಯಳ್ಳೂರ, ಬಸವರಾಜ ಹಾದಿಮನಿ, ಪರಶುರಾಮ ಬಾರ್ಕಿ, ರಮೆಶ ಕಳಸೂರ, ಎಸ್.ವಿ. ಪಾಟೀಲ, ಅಮಿತ ನೆಲೋಗಲ್ಲ, ಶಿವಯೋಗಿ ಹಿರೇಮಠ, ಮಂಜುನಾಥ ನಿಂಬಣ್ಣನವರ, ಶಾಂತವೀರಣ್ಣ ನೆಲೋಗಲ್ಲ ಇದ್ದರು.

19ಎಚ್‌ಎನ್‌ಎಲ್1:

ಸುದ್ದಿಗೋಷ್ಠಿಯಲ್ಲಿ ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು ಹಾಗೂ ಕಮಡೊಳ್ಳಿ ಸಿದ್ದಲಿಂಗಣ್ಣ ಮಾತನಾಡಿದರು.

PREV

Recommended Stories

ಬೇಡಿಕೆ ಪಟ್ಟಿ ಸಲ್ಲಿಸಿ ನರೇಗಾ ಸೌಲಭ್ಯ ಪಡೆಯಿರಿ
ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ನ. 24ರಂದು ಹಾವೇರಿ ಡಿಸಿ ಕಚೇರಿ ಮುತ್ತಿಗೆ