ಮೌಲ್ಯಯುತ ಬದುಕಿಗೆ ಧರ್ಮ ದಾರಿದೀಪ: ರುದ್ರಮುನಿ ಶ್ರೀ

KannadaprabhaNewsNetwork | Published : Dec 13, 2024 12:46 AM

ಸಾರಾಂಶ

ಬೀರೂರು, ‘ಮೌಲ್ಯಯುತ ಬದುಕಿಗೆ ಧರ್ಮ ದಾರಿದೀಪವಾಗಿದೆ. ಅಂತರಂಗದ ಕತ್ತಲೆ ಕಳೆಯದೇ ಹೊರನೋಟದ ಬಾಹ್ಯಾಡಂಬರದ ಬದುಕಿಗೆ ಬೆಲೆಯಿಲ್ಲ ಎನ್ನುವ ದೀಪಗಳ ಹಬ್ಬದ ಸಂಕೇತ ಎಂದು ರಂಭಾಪುರಿ ಶಾಖಾ ಪೀಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರೇಣುಕಾಚಾರ್ಯ ಕಾರ್ತಿಕ ದೀಪೋತ್ಸವ

ಕನ್ನಡಪ್ರಭ ವಾರ್ತೆ, ಬೀರೂರು‘ಮೌಲ್ಯಯುತ ಬದುಕಿಗೆ ಧರ್ಮ ದಾರಿದೀಪವಾಗಿದೆ. ಅಂತರಂಗದ ಕತ್ತಲೆ ಕಳೆಯದೇ ಹೊರನೋಟದ ಬಾಹ್ಯಾಡಂಬರದ ಬದುಕಿಗೆ ಬೆಲೆಯಿಲ್ಲ ಎನ್ನುವ ದೀಪಗಳ ಹಬ್ಬದ ಸಂಕೇತ ಎಂದು ರಂಭಾಪುರಿ ಶಾಖಾ ಪೀಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಮಠದ ಆವರಣದಲ್ಲಿ ಜಗದ್ಗುರು ರೇಣುಕಾಚಾರ್ಯ ಕಾರ್ತಿಕ ದೀಪೋತ್ಸವ ಉದ್ಘಾಟಿಸಿ ಮಾತನಾಡಿದರು. ಶರಣರ ಧಾರ್ಮಿಕ ಮೌಲ್ಯದ ಆಶಯಗಳನ್ನು ಕೂಡಾ ಪ್ರತಿಪಾದಿಸಿದೆ. ನಮಗೆ ಸತ್ಯ ಮಾರ್ಗದಲ್ಲಿ ನಡೆಯುವ ಸಂಕಲ್ಪ ಸೂತ್ರ ಬದುಕಿನ ಬೆಳಕಾ ಗುತ್ತದೆ ಎನ್ನುವ ಜ್ಞಾನವಿರಲಿ. ಯಾರೂ ಧರ್ಮದಲ್ಲಿ ರಾಜಕೀಯ ಬೆರೆಸುವುದು ಬೇಡ. ರಾಜಕೀಯದಲ್ಲಿ ಧರ್ಮದ ನೆರಳಿರಲಿ ಜಾತಿ, ಮತ ಮತ್ತು ಪಂಥಗಳನ್ನು ಬದಿಗೊತ್ತಿ ನಾವೆಲ್ಲರೂ ಸನಾತನ ಹಿಂದೂ ಧರ್ಮಕ್ಕೆ ಸೇರಿದವರು ಎಂಬುದನ್ನು ಅರಿತು ಧರ್ಮ ಸಂರಕ್ಷಣೆ, ಜಾಗೃತಿಗೆ ಕ್ರಿಯಾಶೀಲರಾಗಬೇಕು ಎಂದರು.

ಭಾರತೀಯ ಪರಂಪರೆಗೆ ಹಿಂದೂ ಧರ್ಮವೇ ತಳಹದಿ. ಹಿಂದೂ ಧರ್ಮದಿಂದ ಟಿಸಿಲೊಡೆದು ಅನೇಕ ಮತ, ಧರ್ಮಗಳು ಇಲ್ಲಿಯೇ ಬೆಳಕು ಕಂಡಿವೆ. ಹೊರಗಿನಿಂದ ಬಂದ ಧರ್ಮಗಳೂ ಇಲ್ಲಿ ಅಸ್ತಿತ್ವ ಪಡೆದುಕೊಂಡಿದೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ರೇಣುಕ ಪರಂಪರೆ ಮೌಲ್ಯವೂ ಸಾಕಾರಗೊಂಡಿದೆ ಎಂದರು.ಮಠದ ಭಕ್ತ ದೇವಾನಂದ್ ಮಾತನಾಡಿ, ಅಜ್ಞಾನದ ಕತ್ತಲೆ ಹೋಗಲಾಡಿಸಿ ಜ್ಞಾನದ ಬೆಳಕು ಹಚ್ಚುವುದು ಗುರುವಿಗೆ ಸುಲಭ ಸಾಧ್ಯ. ದೀಪೋತ್ಸವಕ್ಕೆ ಇಂಬು ನೀಡುವ ಕಾರ್ತಿಕ ಮಾಸ ನಮ್ಮೊಳಗಿನ ಅಜ್ಞಾನದ ಕತ್ತಲೆ ನೀಗಿಸಿ ಜ್ಞಾನ ಮಾರ್ಗದ ಬದುಕನ್ನು ಕಟ್ಟಿಕೊಳ್ಳಲು ಪ್ರೇರಕ. ದೀಪೋತ್ಸವ ನಮ್ಮೆಲ್ಲರನ್ನೂ ಒಟ್ಟಾಗಿ ಸೇರಿಸುವ ಜೊತೆ ಗುರುಗಳ ಸ್ಮರಣೆ ಮೂಲಕ ಸನ್ಮಾರ್ಗದ ಹಾದಿಯಲ್ಲಿ ಸಾಗಲು ಪ್ರೇರಕ ಎಂದರು.ಸಾಹಿತಿ ಜಗನ್ನಾಥ್, ಗಂಜಿಕಟ್ಟೆ ಕೃಷ್ಣಮೂರ್ತಿ ಅವರಿಂದ ಹಾಸ್ಯ ಕಾರ್ಯಕ್ರಮ ಹಾಗೂ ಜಾನಪದ, ತತ್ವಪದಗಳ ಗಾಯನ ನಡೆಯಿತು. ಅಂಬರದೇವರಹಳ್ಳಿ ಮಠದ ಉಜ್ಜನೀಶ್ವರ ಶಿವಾಚಾರ್ಯರು, ಜಗದ್ಗುರು ರೇಣುಕಾಚಾರ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಾಕೇಶ್, ಶಿವಾನಂದಾಶ್ರಮ ಟ್ರಸ್ಟ್ ಅಧ್ಯಕ್ಷ ಮರುಳಸಿದ್ದಾರಾಧ್ಯ, ಮಾಳಿಗೆ ಉಮಾಶಂಕರ್, ನಟರಾಜ್, ಸಂಪತ್ಕುಮಾರ್, ನಾಗೇಂದ್ರ ಪ್ರಸಾದ್, ಮಠದ ಭಕ್ತರು, ಟ್ರಸ್ಟ್ ಸದಸ್ಯರು ಇದ್ದರು.11 ಬೀರೂರು 2ಬೀರೂರು ರಂಭಾಪುರಿ ಖಾಸಾ ಶಾಖಾಮಠದಲ್ಲಿ ನಡೆದ ಶ್ರೀಜಗದ್ಗುರು ರೇಣುಕಾಚಾರ್ಯ ಕಾರ್ತಿಕ ದೀಪೋತ್ಸವವನ್ನು ಖಾಸಾಪೀಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

Share this article