ಕನ್ನಡಪ್ರಭ ವಾರ್ತೆ ಹಾಸನ
ಎಸ್‌ಐಟಿ ತನಿಖೆಯ ಕುರಿತು ಮಾತನಾಡಿದ ಅವರು, ಭಕ್ತರಲ್ಲಿ ಆತಂಕ ಮೂಡಿದೆ. ಸತ್ಯ ಹೊರ ಬರಬೇಕು. ಆದರೆ ಧರ್ಮಸ್ಥಳದ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಪಿತೂರಿ ಮಾಡಿದವರ ಮುಖವಾಡ ಕಳಚಲು ಎನ್‌ಐಎ ತನಿಖೆಗೆ ಒತ್ತಾಯಿಸುತ್ತೇವೆ. ತನಿಖೆ ದಿಕ್ಕು ತಪ್ಪಬಾರದು, ಸತ್ಯ ಹೊರ ಬರಲಿ. ಆದರೆ ಹಿಂದೂಗಳ ಭಾವನೆಗೆ ಧಕ್ಕೆ, ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿರುವುದರ ವಿರುದ್ಧ ನಮ್ಮ ಹೋರಾಟ ಎಂದರು.
ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ನಡೆಯಬಾರದು. ಕಾಂಗ್ರೆಸ್ ಆರೋಪಕ್ಕೆ ನಾನು ಉತ್ತರ ಕೊಡಲ್ಲ, ನಮ್ಮ ಹೋರಾಟ ಷಡ್ಯಂತ್ರದ ವಿರುದ್ಧ, ಕಾಣದ ಕೈಗಳು ಹಿಂದೂ ಅಸ್ಥಿತೆ ಬಗ್ಗೆ ತಕರಾರು ತೆಗೆದಿರುವಾಗ ನಾವು ಸುಮ್ಮನಿರಲು ಆಗಲ್ಲ ಎಂದು ವೈಚಾರಿಕ ಸಂಘರ್ಷದ ವಿರುದ್ಧ ದನಿ ಎತ್ತಲು ನಿರ್ಧರಿಸಿದ್ದೇವೆ. ಪಿತೂರಿ ಮಾಡಿರುವ ಯೂಟ್ಯೂಬರ್, ಮಾಸ್ಕ್ ಮ್ಯಾನ್ ಮುಖವಾಡ ಕಳಚಬೇಕು. ಅದಕ್ಕಾಗಿ ಎನ್‌ಐಎ ತನಿಖೆಗೆ ಕೊಡಬೇಕು ಎಂದು ಆಗ್ರಹಿಸುವುದೂ ಹೋರಾಟದ ಉದ್ದೇಶ. ನಮ್ಮ ಸಮಸ್ತ ಹಿಂದೂ ಬಾಂಧವರು ಒಂದಾಗಿದ್ದೇವೆ ಎಂಬ ಸಂದೇಶ ಸಾರುವುದೂ ನಮ್ಮ ಉದ್ದೇಶ, ಧರ್ಮ, ನಂಬಿಕೆಗೆ ಧಕ್ಕೆಯಾದಾಗ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಸಿಮೆಂಟ್ ಮಂಜು, ಜಿಲ್ಲಾ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಅಮಿತ್ ಶೆಟ್ಟಿ ಮತ್ತು ಗಿರೀಶ್ ಇತರರು ಉಪಸ್ಥಿತರಿದ್ದರು.
--------------*ಬಾಕ್ಸ್
ಚಾಮುಂಡಿಯನ್ನು ಒಪ್ಪಿ ಉದ್ಘಾಟಿಸಲಿಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಹೆಸರು ಘೋಷಣೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪ್ರೀತಂ ಗೌಡರು , ''''ಚಾಮುಂಡೇಶ್ವರಿಯನ್ನು ತಾಯಿ, ದೇವಿಯಾಗಿ ಒಪ್ಪಿ ಭಕ್ತಿಯಿಂದ ಉದ್ಘಾಟನೆಗೆ ಹೋದರೆ ನಮಗೇನು ತಕರಾರು ಇಲ್ಲ. ಆದರೆ ಸಂಪ್ರದಾಯವನ್ನು ನಿರ್ಲಕ್ಷಿಸಿ ಮಾಡುವ ಯಾವುದೇ ಕ್ರಮವನ್ನು ಹಿಂದು ಸಮಾಜ ಒಪ್ಪುವುದಿಲ್ಲ,'''' ಬೇರೆಯವರ ಹೇಳಿಕೆಗೆ ಉತ್ತರಿಸಲು ನಾನು ಅವರ ವಕ್ತಾರನಲ್ಲ. ಪ್ರೀತಿ ವಿಶ್ವಾಸ ಇಟ್ಟುಕೊಂಡು ಉದ್ಘಾಟನೆ ಮಾಡಲಿ ಎಂದರು.