ಕುಷ್ಟಗಿ:
ಧರ್ಮಸ್ಥಳದ ಧರ್ಮಾಧಿಕಾರಿ ಮೇಲೆ ಅನ್ಯರು ದೂರು ನೀಡಿದರೆ ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕಿದ್ದ ರಾಜ್ಯ ಸರ್ಕಾರ ಪರಿಶೀಲನೆ ಮಾಡದೆ ಕ್ರಮಕ್ಕೆ ಮುಂದಾಗಿರುವುದು ಅನುಮಾನ ಹುಟ್ಟಿಸಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂತ್ ಎಂ.ಡಿ. ಸಮೀರ್‌ಗೆ ಪ್ರಭಾವಿ ಸಚಿವರು ಆಶ್ರಯ ಕೊಟ್ಟು ಹಣಕಾಸಿನ ಸಹಾಯ ಮಾಡಿದ್ದಾರೆಂಬ ಅನುಮಾನವಿದೆ. ಕೂಡಲೇ ಗಿರೀಶ ಮಟ್ಟಣ್ಣನವರ ಮತ್ತು ಮಹೇಶ ತಿಮರೋಡಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕಿದೆ. ಅವರಿಗೆ ಬಂದಿರುವ ಹಣಕಾಸಿನ ಜಾಲ ಕಂಡು ಹಿಡಿಯುಬೇಕು. ಇದಕ್ಕೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದರು.ಕಾಂಗ್ರೆಸ್‌ನವರಿಗೆ ವಂದೇ ಮಾತರಂ, ನಮಸ್ತೆ ಸದಾ ವತ್ಸಲೇ ಅಂದರೆ ಮೆಣಸಿನಕಾಯಿ ಇಟ್ಟಂತೆ ಆಗುತ್ತದೆ. ಪಾಕಿಸ್ತಾನ್ ಜಿಂದಾಬಾದ್ ಎಂದರೆ ಬಾಯಿಗೆ ಸಕ್ಕರೆ ಹಾಕಿದಂತೆ ಆಗುತ್ತದಂತೆ ಎಂದು ಕಿಡಿಕಾರಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಬಸವರಾಜ ಹಳ್ಳೂರು ಸೇರಿದಂತೆ ಅನೇಕರು ಇದ್ದರು.