ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾಂಡೇಶ್ವರ ವಲಯ ಒಕ್ಕೂಟಗಳ ಪದಗ್ರಹಣ

KannadaprabhaNewsNetwork |  
Published : Dec 12, 2025, 03:00 AM IST
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಂಡೇಶ್ವರ ವಲಯ ಒಕ್ಕೂಟಗಳ ಪದಗ್ರಹಣವನ್ನು ಸಂಸದ ಕೋಟ ಉದ್ಘಾಟಿಸಿದರು | Kannada Prabha

ಸಾರಾಂಶ

ಸಾಲಿಗ್ರಾಮ ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಂಡೇಶ್ವರ ವಲಯದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು.

ಕುಂದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳಿಂದ ಸಮಾಜ ಮತ್ತು ಮಹಿಳೆಯರಲ್ಲಿ ಆರ್ಥಿಕ ಶಕ್ತಿ ಹೆಚ್ಚಿದೆ ಮತ್ತು ಧಾರ್ಮಿಕ ಪ್ರಜ್ಞೆ ಮೂಡಿಸಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಇಲ್ಲಿನ ಸಾಲಿಗ್ರಾಮ ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಂಡೇಶ್ವರ ವಲಯದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬ್ರಹ್ಮಾವರ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ ಅಧ್ಯಕ್ಷ ಪ್ರಕಾಶ ಶೆಟ್ಟಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಸಮಾಜದ ಒಳಿತಿಗಾಗಿರುವ ಕಲ್ಪವೃಕ್ಷವಾಗಿದೆ. ಮಧ್ಯವರ್ಜನ, ಸ್ವಾಸ್ಥ್ಯ ಸಂಕಲ್ಪ ಶಿಬಿರಗಳು ಉತ್ತಮ ಸಮಾಜ ನಿರ್ಮಿಸುತ್ತಿದೆ. ಯೋಜನೆ ನಾಯಕತ್ವ ಗುಣಗಳನ್ನು ಬೆಳೆಸಿದೆ ಎಂದರು.ಪಾಂಡೇಶ್ವರ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರಾಧಾ ಎಸ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಾರ್ಕೂರು ಕೂಡ್ಲಿ ದೇವಸ್ಥಾನದ ಶ್ರೀನಿವಾಸ ಉಡುಪ, ಸಾಸ್ತಾನ ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ರಮೇಶ ರಾವ್, ಉಡುಪಿ ತಾಲೂಕು ಜನಜಾಗೃತಿ ವೇದಿಕೆ ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷ ಅಚ್ಚುತ ಪೂಜಾರಿ, ಅಧ್ಯಕ್ಷ ಪ್ರತಾಪ್ ಶೆಟ್ಟಿ, ಸಾಲಿಗ್ರಾಮ ಚೇಂಪಿಯ ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ರಮ್ಯಾ ರಮೇಶ ಆಚಾರ್ಯ, ಕೋಟ ವಿರಾಡಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಸುಬ್ರಾಯ ಆಚಾರ್ಯ, ಶೌರ್ಯ ಟೀಮ್‌ನ ಕಾಳಿಂಗ ಪೂಜಾರಿ, ಯೋಜನೆಯ ಬ್ರಹ್ಮಾವರ ತಾಲೂಕಿನ ಮೇಲ್ವಿಚಾರಕ ರಮೇಶ ಪಿ.ಕೆ, ಗಿರಿಜ ಶೇಖರ ಪೂಜಾರಿ ಇದ್ದರು.

ಗುಂಡ್ಮಿ, ಐರೋಡಿ, ಕಾವಡಿ, ಕೋಡಿ, ಪಡುಬೈಲು, ಕಾರ್ಕಡ, ಸಾಸ್ತಾನ, ಯಡಬೆಟ್ಟು ಸಂಘಗಳ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ ನಡೆಯಿತು. ಆಯ್ದ ಫಲಾನುಭವಿಗೆ ಸುಜ್ಞಾನ ನಿಧಿ ವಿತರಿಸಲಾಯಿತು. ಪಾಂಡೇಶ್ವರ ವಲಯದ ಶೌರ್ಯ ತಂಡದವರನ್ನು ಗುರುತಿಸಲಾಯಿತು.

ಯೋಜನೆಯ ಕೃಷಿ ಅಧಿಕಾರಿ ರಾಘವೇಂದ್ರ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಜಯಲಕ್ಷ್ಮೀ ವರದಿ ವಾಚಿಸಿದರು. ಸೇವಾ ಪ್ರತಿನಿಧಿ ಶೋಭಾ ವಂದಿಸಿದರು. ಸುಜಾತ ಬಾಯರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಕೀಲರ ದಿನಾಚರಣೆ ಕ್ರೀಡಾಕೂಟ: ವಿಜೇತರಿಗೆ ಬಹುಮಾನ ವಿತರಣೆ
ಉಡುಪಿ: ನಾಳೆ ಆಳ್ವಾಸ್ ಸಾಂಸ್ಕೃತಿಕ ವೈಭವ