ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನವಜೀವನ ಸಮಿತಿ ಪೋಷಕರ ಸಭೆ

KannadaprabhaNewsNetwork |  
Published : Sep 23, 2026, 02:45 AM IST
 ಕಾರ್ಯಕ್ರಮ ಸಂದರ್ಭ | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ ಕೊಡಗು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ಆಶ್ರಯದಲ್ಲಿ ಸೋಮವಾರಪೇಟೆ ಅರಕಲಗೂಡು ಬೆಟ್ಟದಪುರ ಪಿರಿಯಾಪಟ್ಟಣ ತಾಲೂಕಿನ ನವ ಜೀವನ ಸಮಿತಿ ಪೋಷಕರ ಸಭೆ ಕುಶಾಲನಗರ ಜಿಲ್ಲಾ ಕಚೇರಿ ಮತ್ತು ಮಡಿಕೇರಿ ವಿರಾಜಪೇಟೆ ತಾಲೂಕಿನ ನವಜೀವನ ಸಮಿತಿ ಪೋಷಕರ ಸಭೆ ಮಡಿಕೇರಿ ಯೋಜನಾ ಕಚೇರಿಯಲ್ಲಿ ನಡೆಯಿತು.

ಕುಶಾಲನಗರ ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ ಕೊಡಗು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ಆಶ್ರಯದಲ್ಲಿ ಸೋಮವಾರಪೇಟೆ ಅರಕಲಗೂಡು ಬೆಟ್ಟದಪುರ ಪಿರಿಯಾಪಟ್ಟಣ ತಾಲೂಕಿನ ನವ ಜೀವನ ಸಮಿತಿ ಪೋಷಕರ ಸಭೆ ಕುಶಾಲನಗರ ಜಿಲ್ಲಾ ಕಚೇರಿ ಮತ್ತು ಮಡಿಕೇರಿ ವಿರಾಜಪೇಟೆ ತಾಲೂಕಿನ ನವಜೀವನ ಸಮಿತಿ ಪೋಷಕರ ಸಭೆ ಮಡಿಕೇರಿ ಯೋಜನಾ ಕಚೇರಿಯಲ್ಲಿ ನಡೆಯಿತು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಉದ್ಘಾಟಿಸಿ ಮಾತನಾಡಿದರು.ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ವ್ಯಸನ ಮಕ್ತಗೊಳಿಸುವ ಕೆಲಸದ ಅನುಪಾಲನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸೇವಾ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿದ್ದು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕಾಗಿದೆ ಎಂದರು. ಶ್ರೀ ಕ್ಷೇತ್ರ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠಲ್ ಸಾಲಿಯಾನ್ ಮಾತನಾಡಿ, ನವಜೀವನ ಸದಸ್ಯರಿಗೆ ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ನೀಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದರು. ಕರಾವಳಿ ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ ಮಾತನಾಡಿ, ವಲಯಕ್ಕೊಂದು ನವಜೀವನ ಸಮಿತಿಗಳ ರಚನೆ ಬಗ್ಗೆ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಅನುಷ್ಠಾನದ ಬಗ್ಗೆ, ನವ ಜೀವನೋತ್ಸವ ಕಾರ್ಯಕ್ರಮ, ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ, ಫ್ರೀ ಕಾನ್ಫರೆನ್ಸ್ ಆನ್ಲೈನ್ ಮೀಟಿಂಗ್ ಬಗ್ಗೆ, ಸದಸ್ಯರಿಗೆ ಸ್ವಉದ್ಯೋಗ ತರಬೇತಿ ನೀಡುವುದರ ಬಗ್ಗೆ ಯಶೋಗಾಥೆ ರಚನೆಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಟಾಪ್ ಟೆನ್ ಶ್ರೇಣಿಗಳನ್ನು ಪಡೆದ ಸಾಧಕ ಸೇವಾ ಪ್ರತಿನಿಧಿ ಪೋಷಕರಿಗೆ ವೇದಿಕೆ ವತಿಯಿಂದ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು. ಸಭೆಯ ನಿರ್ವಹಣೆಯನ್ನು ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಳುವರ ಬಹುದಿನಗಳ ಕನಸು ನನಸು: ಶುಭದ ರಾವ್
ಮೂರ್ನಾಡು ಪದವಿ ಕಾಲೇಜಿನಲ್ಲಿ ದತ್ತಿ ಉಪನ್ಯಾಸ, ಪ್ರಬಂಧ ಸ್ಪರ್ಧೆ