ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಗೆ ಸೇರಿದ ಕರಿಯಮ್ಮನ ಹಟ್ಟಿಯ ಕರಿಯಾಂಬಿಕಾ ಪ್ರೌಢಶಾಲೆಯಲ್ಲಿ ಎಸ್‌ಎಸ್ಎಲ್‌ಸಿ ತರಗತಿ ಮಕ್ಕಳಿಗೆ ಏರ್ಪಡಿಸಿದ್ದ ವಿಶೇಷ ಬೋಧನಾ ತರಗತಿಗಳ ಸಮರೋಪದಲ್ಲಿ ಮಾತನಾಡಿದರು.
ನಮ್ಮ ಸಂಸ್ಥೆಯು ಕೇವಲ ಸಾಲ ಸೌಲಭ್ಯವನ್ನು ನೀಡುವತ್ತ ಮಾತ್ರ ಗಮನ ಹರಿಸಿಲ್ಲ. ಬದಲಾಗಿ ಹಳ್ಳಿಗಾಡಿನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಗಮನ ನೀಡಿದೆ. ಗ್ರಾಮೀಣ ಮಟ್ಟದ ಸದಸ್ಯರು ಹಾಗೂ ಮಹಿಳೆಯಾರಿಗೆ ಸರಿಯಾದ ಮಾಹಿತಿ ಮಾರ್ಗದರ್ಶನ ನೀಡಿ ಅವರು ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಮುಂದಿನ ಭವಿಷ್ಯಕ್ಕಾಗಿ ಈಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು . ಆಗ ಅವರ ಪ್ರಗತಿಯು ಸುಲಭವಾಗಿ ನೆರವೇರಲಿದೆ ಎಂದರು. ವಿವಿಧ ಹಂತಗಳಲ್ಲಿ ಕಲಿಯುತ್ತಿರುವ ಸುಮಾರು 45000 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ನೀಡಲಾಗುತ್ತದೆ ನಿರ್ಗತಿಕರಿಗೆ ಪ್ರತಿ ತಿಂಗಳು ಮಾಶಾಸನ ವಿತರಣೆ ಮಾಡಲಾಗುತ್ತದೆ ಮನೆ ಇಲ್ಲದವರಿಗೆ ಮನೆ ಕೂಡ ಕಟ್ಟಿಸಿಕೊಡಲಾಗುವುದು ಇಲ್ಲಿಯವರೆಗೆ ಸುಮಾರು 1000 ಮನೆಗಳ ನಿರ್ಮಾಣ ಮಾಡಲಾಗಿದೆ ಯೋಜನೆಯಿಂದ ಸುಮಾರು 36 ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ಯೋಜನಾಧಿಕಾರಿ ರವಿಚಂದ್ರ ಮಾಹಿತಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ನಾಗಪ್ಪ ಧರ್ಮಸ್ಥಳ ಶ್ರೀಕ್ಷೇತ್ರದ ಮಾದರಿ ಯೋಜನೆಗಳನ್ನು ಶ್ಲಾಘಿಸಿದರು. ತಾಲ್ಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸಾಕಮ್ಮ, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಕೇಂದ್ರದ ಸದಸ್ಯರು ಭಾಗಿಯಾಗಿದ್ದರು.