ಧಾರವಾಡ:
ಈ ಸ್ಪರ್ಧೆಯಲ್ಲಿ ಶಾಸ್ತ್ರೀಯ ಸಂಗೀತ ಆಧಾರಿತ ಚಲನಚಿತ್ರ ಗೀತೆ ಹಾಗೂ ಸಿನಿಮಾಯೇತರ ಶಾಸ್ತ್ರೀಯ ಗೀತೆಗಳಿಗೂ ಆದ್ಯತೆ ಇದೆ. ರಾಜ್ಯದ ಮಟ್ಟದ ಈ ಸ್ಪರ್ಧೆಯ ಮೊದಲ ಸೀಸನ್‌ನಲ್ಲಿ ದೃಷ್ಟಿದೋಷ ಹೊಂದಿದ ರೇಣುಶ್ರೀ ಕೊಡ್ಲಿ ಪ್ರಶಸ್ತಿ ಗೆದ್ದಿದ್ದರು. ವಿಜೇತರಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ಇರಲಿದೆ. ಮೊದಲ ಪ್ರಶಸ್ತಿ ₹ 25 ಸಾವಿರ, ದ್ವಿತೀಯ ₹ 15 ಸಾವಿರ, ತೃತೀಯ ₹10 ಸಾವಿರ ಹಾಗೂ ಸಮಾಧಾನಕರ ₹ 5 ಸಾವಿರ ಮೌಲ್ಯದ್ದಾಗಿರುತ್ತದೆ ಎಂದರು.
14ರಿಂದ 18 ವರ್ಷದ ಆಸಕ್ತರು ಎರಡು ನಿಮಿಷಗಳ ತಮ್ಮ ಗಾಯನದ ವಿಡಿಯೋ, ಪರಿಚಯವನ್ನು 7676894447 ವಾಟ್ಸ್‌ಆ್ಯಪ್ ಸಂಖ್ಯೆಗೆ ನ. 24ರೊಳಗೆ ₹ 200 ಪ್ರವೇಶ ಶುಲ್ಕದೊಂದಿಗೆ ಕಳುಹಿಸಬೇಕು. ಸ್ಪರ್ಧೆಯ ಅಂತಿಮ ಸುತ್ತು ಡಿಸೆಂಬರ್ 5ರಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಂಜೆ 4ಕ್ಕೆ ಜರುಗಲಿದ್ದು, ಕೊನೆ ಸುತ್ತಿಗೆ ಆಯ್ಕೆಯಾದ ಗಾಯಕರು ತಮ್ಮ ಪ್ರತಿಭೆ ಅನಾವರಣ ಮಾಡಬಹುದು. ಲೈವ್ ಬ್ಯಾಂಡ್ ಮ್ಯೂಸಿಕ್ ವ್ಯವಸ್ಥೆ ಮಾಡುತ್ತಿದ್ದು, ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಡಾ.ವಿಜಯ ಕಳಸದ, ಪ್ರೊ.ಹಿರೇಮಠ, ಸತೀಶ ಪರ್ವತೀಕರ, ಸಿ.ಯು. ಬೆಳ್ಳಕ್ಕಿ ಇದ್ದರು.