ಧಾರವಾಡ:
ಧಾರವಾಡದ ರಾಕೇಶ ನಾಯಕ್ (45) ಕಣ್ಮರೆಯಾಗಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರಾಕೇಶ್ ಕಳೆದ ಹತ್ತು ವರ್ಷದಿಂದ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ವಾಸವಿದ್ದಾರೆ. ಮಾನಸ ಸರೋವರ ಪ್ರವಾಸಕ್ಕೆ ಇಶಾ ಫೌಂಡೇಷನ್‌ನೊಂದಿಗೆ ಆ.10ರಂದು ತೆರಳಿದ್ದರು. ಆ. 12ರಂದು ಪೋಷಕರೊಂದಿಗೆ ಹಾಗೂ ಆ. 25ರ ವರೆಗೆ ಪತ್ನಿ ಜತೆಗೂ ಸಂಪರ್ಕದಲ್ಲಿದ್ದರು. ಆದರೆ, ಬುಧವಾರದಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಧಾರವಾಡದಲ್ಲಿರುವ ಕುಟುಂಬಸ್ಥರಿಗೆ ಚಿಂತಾಕ್ರಾಂತರನ್ನಾಗಿಸಿದೆ. ಕೇಂದ್ರ ಸರ್ಕಾರದಿಂದ ಸುರಕ್ಷಿತವಾಗಿದ್ದಾರೆ ಎಂದು ಕುಟುಂಬಕ್ಕೆ ಮಾಹಿತಿ ಬಂದಿದೆ. ಆದರೆ, ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಂದೆ ಶಿವಪ್ರಕಾಶ ನಾಯಕ ತಿಳಿಸಿದ್ದಾರೆ.ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭ:ನೇಪಾಳದಲ್ಲಿ ದಿಢೀರ್ ಪ್ರವಾಹದಿಂದ ಹಲವರು ಪ್ರಾಣ ಕಳೆದುಕೊಂಡರೆ ನೂರಾರು ಜನ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ನಾಗರಿಕರು ಅಥವಾ ಪ್ರವಾಸಿಗರು ಸಂಪರ್ಕಕ್ಕೆ ಸಿಗದೆ ಇದ್ದಲ್ಲಿ ತಕ್ಷಣವೇ ಅವರ ವಿವರಗಳನ್ನು ಧಾರವಾಡ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಒದಗಿಸುವಂತೆ ಜಿಲ್ಲಾಡಳಿತವು ಸಹಾಯವಾಣಿ ಆರಂಭಿಸಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಸಹಾಯವಾಣಿ ಕೇಂದ್ರ ಸಂಖ್ಯೆ: ೦೮೫೩೬-೨೪೪೫೫೦೮ ಅಥವಾ (೧೦೭೭ -ಟೋಲ್ ಫ್ರೀ), ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ೦೮೦-೨೨೨೫೩೭೦೭ಅಥವಾ ೧೦೭೦ (ಟೋಲ್ ಫ್ರೀ), ಭಾರತೀಯ ರಾಯಭಾರ ಕಚೇರಿಯು ತುರ್ತು ವಾಟ್ಸ್‌ಆ್ಯಪ್ ಹಾಗೂ ಕರೆಗಾಗು ೯೭೭ ೯೮೫೧೩೧೬೮೦೭, ೯೭೭ ೯೭೦೯೧೦೭೫೦೦ ಅಥವಾ ೯೭೭ ೯೮೧೦೩೨೬೧೧೭ ಹಾಗೂ ನಾಪತ್ತೆಯಾಗಿದ್ದಾರೆಂದು ಶಂಕಿಸಲಾಗಿದ್ದರೆ ಸಾರ್ವಜನಿಕರು ನಾಪತ್ತೆಯಾದ ವ್ಯಕ್ತಿಯ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಕೊನೆಯದಾಗಿ ಸಂಪರ್ಕಿಸಿದ ಸ್ಥಳ ಮತ್ತು ಸಮಯ ಹಾಗೂ ಕಾಯಂ ವಿಳಾಸದ ವಿವರಗಳನ್ನು ರಾಜ್ಯ ಸರ್ಕಾರವು ವಿಶೇಷ ಗೂಗಲ್ ಫಾರ್ಮ್ (docs.google.com/forms/d/1gnw8B) ಲಿಂಕ್‌ನಲ್ಲಿ ಭರ್ತಿ ಮಾಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.